Palm Jaggery Benefits: ಬರೀ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳಿತು ಈ ಸವಿ ಸವಿ ಬೆಲ್ಲ!!

Palm Jaggery Benefits: ತಾಳೆ ಬೆಲ್ಲ ಅಥವಾ ಪಾಮ್ ಬೆಲ್ಲ ಎಂದು ಕರೆಯಲ್ಪಡುವ ಈ ಬೆಲ್ಲದ ಬಗ್ಗೆ ಹೆಚ್ಚಿನರಿಗೆ ತಿಳಿದಿರುವುದಿಲ್ಲ. ತಾಳೆ ಬೆಲ್ಲವು ಕಬ್ಬಿಣ, ಮೆಗ್ನೀಶಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳ ಮಿಶ್ರಣವಾಗಿದೆ. ತಾಳೆ ಬೆಲ್ಲ ಕಬ್ಬಿಣಾಂಶದಿಂದ ಸಮೃದ್ಧವಾಗಿದ್ದು ಇದು ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹೀನತೆಯನ್ನು ಗುಣಪಡಿಸುತ್ತದೆ. ಮತ್ತು ಮೆಗ್ನೀಷಿಯಂನಿಂದ ಸಮೃದ್ಧವಾಗಿದ್ದು ನರವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಕ್ಯಾಲ್ಸಿಯಂ ಸದೃಢವಾದ ಮೂಳೆಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ನೆರವಾಗುತ್ತದೆ.

ಅದಲ್ಲದೆ ಪೊಟ್ಯಾಷಿಯಂ ಸಹ ಹೊಂದಿದ್ದು, ಹೃದಯದ ಆರೋಗ್ಯಕ್ಕೆ ನೆರವಾಗುತ್ತದೆ, ಇದು ನುಲಿತವನ್ನು ಕಡಿಮೆ ಮಾಡುತ್ತದೆ ಹಾಗೂ ಇತರ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಈ ಮೂಲಕ ಅನೇಕ ರಕ್ತ ಸಂಬಂಧಿತ ಹಾಗೂ ಇತರ ಅಸಹಜತೆಗಳನ್ನು ತಡೆಯುತ್ತದೆ.

ತಾಳೆ ಬೆಲ್ಲ ಸಂಯುಕ್ತ ಕಾರ್ಬೋಹೈಡ್ರೇಟ್ಸ್ ಹೊಂದಿದ್ದು ಇದು ಶೀಘ್ರವೇ ಜೀರ್ಣವಾಗಲು ನೆರವಾಗುತ್ತದೆ. ಪ್ರತಿದಿನ ಬೆಲ್ಲ ಸೇವಿಸುವುದರಿಂದ ಅದು ನಿಮ್ಮನ್ನು ಗಂಟೆಗಳವರೆಗೆ ಸಕ್ರಿಯ ಮತ್ತು ಚೈತನ್ಯದಿಂದಿರುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಸ್ವಲ್ಪ ಬೆಲ್ಲ ಸೇರಿಸಿ.

​ತಾಳೆ ಬೆಲ್ಲ ಬಿಳಿ ಸಕ್ಕರೆಗೆ ಆರೋಗ್ಯಕರ ಪರ್ಯಾಯವಾಗಿದ್ದು ಇದು ನಿಮ್ಮ ಒಟ್ಟಾರೆ ಶರೀರ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಉಸಿರಾಟದ ನಾಳಗಳು, ಹೊಟ್ಟೆ, ಶ್ವಾಸಕೋಶ, ಕರುಳುಗಳನ್ನು ಸ್ವಚ್ಛಗೊಳಿಸುವುದರೊಂದಿಗೆ, ಶರೀರದ ಪ್ರತಿಯೊಂದು ಭಾಗದಿಂದ ವಿಷಕಾರಕ ಅಂಶಗಳನ್ನು ತೆಗೆದುಹಾಕಿ, ನಿಮ್ಮನ್ನು ಆರೋಗ್ಯಕರವಾಗಿಸುತ್ತದೆ.

ಬೆಲ್ಲ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇದು ಆರೋಗ್ಯಕರವಾದ ಮತ್ತು ಮೃದುವಾದ ಚರ್ಮವನ್ನು ನೀಡುತ್ತದೆ. ಇದು ಗುಳ್ಳೆ, ಸುಕ್ಕು ಮತ್ತು ಮೊಡವೆಯನ್ನು ತಡೆಯುವ ಮೂಲಕ, ಚರ್ಮ ಪ್ರಾಕೃತಿಕವಾಗಿ ಹೊಳಪಾಗಿರುವಂತೆ ಮಾಡುತ್ತದೆ. ಇದು ಕಪ್ಪು ಕಲೆ ಮತ್ತು ಸುಕ್ಕುಗಳನ್ನು ನಿವಾರಿಸುವ ಮೂಲಕ ವಯಸ್ಸಾಗುವ ಲಕ್ಷಣವನ್ನು ನಿಧಾನಗೊಳಿಸುತ್ತದೆ.

​ಬೆಚ್ಚಗಿನ ನೀರು ಅಥವಾ ಟೀ ಯಲ್ಲಿ, ಬೆಲ್ಲವನ್ನು ಸೇರಿಸುವುದರಿಂದ, ಅದು ನೆಗಡಿಗೆ ಸಂಬಂಧಿಸಿದ ರೋಗಲಕ್ಷಣಗಳ ವಿರುದ್ಧ ಹೋರಾಡುತ್ತದೆ. ಮುಂದಿನ ಬಾರಿ ನೀವು ಸೀನಿದರೆ ಅಥವಾ ಕೆಮ್ಮಿದರೆ, ನಿವಾರಣೆಗಾಗಿ ಸ್ವಲ್ಪ ಬೆಲ್ಲ ಸೇವಿಸಿ. ಇದು ದೀರ್ಘಕಾಲದ ಕೆಮ್ಮಿಗೆ ಸಹ ಚಿಕಿತ್ಸೆ ನೀಡುತ್ತದೆ. ತಾಳೆ ಬೆಲ್ಲ ಗಂಟಲಿನ ಮೃದು ಅಂಗಾಂಶಗಳ ಮೇಲೆ ಪರಿಣಾಮ ಬೀರುವುದರಿಂದ, ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ.

ಇದು ಜೀರ್ಣಕ್ಕೆ ಸಂಬಂಧಿಸಿದ ಅಸಹಜತೆಗಳಿಂದ ಉಪಶಮನ ನೀಡುವ ಸಾಮರ್ಥ್ಯ ಹೊಂದಿದೆ. ಮಲ ವಿಸರ್ಜನೆಯನ್ನು ನಿಯಮಿತಗೊಳಿಸಿ ಮಲಬದ್ಧತೆ ಮತ್ತು ಅಜೀರ್ಣತೆಯನ್ನು ನಿವಾರಿಸುತ್ತದೆ. ಇದು ಯಕೃತ್ತಿನಿಂದ ಅನಗತ್ಯ ಪದಾರ್ಥಗಳನ್ನು ಹೊರಹಾಕುವ ಮೂಲಕ ಡಿಟಾಕ್ಸ್ ಆಗಿ ಕಾರ್ಯನಿರ್ವಹಿಸುತ್ತದೆ. ಬೇಸಿಗೆಯಲ್ಲಿ ಮಧ್ಯಮ ಗಾತ್ರದ ಬೆಲ್ಲ ಸೇವಿಸುವುದರಿಂದ ಹೊಟ್ಟೆ ತಂಪಾಗುತ್ತದೆ.

ತಾಳೆ ಬೆಲ್ಲದಲ್ಲಿರುವ ಔಷಧೀಯ ಗುಣಗಳು ಮೈಗ್ರೇನ್ ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ನೆರವಾಗುತ್ತದೆ. ತುಪ್ಪದೊಂದಿಗೆ ಬೆಲ್ಲವನ್ನು ಸೇವಿಸುವುದರಿಂದ ಇದು ರಕ್ತನಾಳಗಳನ್ನು ಸಂಕುಚಿಸಿ ಯಾವುದೇ ಔಷಧಿ ಇಲ್ಲದೇ ನೋವು ನಿಯಂತ್ರಿಸಲು ನೆರವಾಗುತ್ತದೆ.

ಇದು ಆಂಟಿ-ಆಕ್ಸಿಡೆಂಟ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಇದು ಮುಕ್ತಕಣಗಳನ್ನು ತಟಸ್ಥಗೊಳಿಸುವುದಷ್ಟೇ ಅಲ್ಲದೇ ಕೋಶ ಹಾನಿ ಮತ್ತು ಡಿ ಎನ್ ಎ ಹಾಳಾಗುವುದನ್ನು ತಡೆಯುತ್ತದೆ. ತಾಳೆ ಬೆಲ್ಲ ನಕಾರಾತ್ಮಕ ಆರೋಗ್ಯ ಪರಿಣಾಮಗಳಾಗದಂತೆ ಭ್ರೂಣವನ್ನು ರಕ್ಷಿಸುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ, 7 ನೇ ತಿಂಗಳ ನಂತರ ಗರ್ಭಾವಸ್ಥೆಯ ಸಮಸ್ಯೆಗಳಿಂದ ಉಪಶಮನ ನೀಡುತ್ತದೆ.

​ಇದು ತೂಕ ಕಡಿಮೆಯಾಗಲು ಅದ್ಭುತವಾಗಿ ಪರಿಣಾಮಕಾರಿಯಾಗಿದೆ. ಪೊಟ್ಯಾಷಿಯಂ ನಿಂದ ಸಮೃದ್ಧವಾಗಿರುವ ಇದು, ಎಲೆಕ್ಟ್ರೋಲೈಟ್ ಸಮತೋಲನವನ್ನು ನಿರ್ವಹಿಸಿ ನೀರು ಸಂಚಯವಾಗುವುದನ್ನು ತಡೆಯಲು ನೆರವಾಗುತ್ತದೆ. ಇವೆಲ್ಲವೂ ತೂಕ ಕಡಿಮೆಯಾಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.

​ತಾಳೆ ಬೆಲ್ಲ ಋತುಸ್ರಾವದ ಸಮಸ್ಯೆಗಳಿಗೆ ಪ್ರಾಕೃತಿಕ ಚಿಕಿತ್ಸೆಯಾಗಿ ಪರಿಣಾಮಕಾರಿಯಾಗಿದೆ. ಬೆಲ್ಲವನ್ನು ಸೇವಿಸುವುದರಿಂದ ಇದು ಎಂಡಾರ್ಫಿನ್ ಗಳನ್ನು ಬಿಡುಗಡೆ ಮಾಡುತ್ತದೆ, ಇದು ಶರೀರಕ್ಕೆ ಚೈತನ್ಯ ನೀಡಿ, ಋತುಸ್ರಾವ ಪೂರ್ವ ಲಕ್ಷಣಗಳನ್ನು (ಪಿಎಂಎಸ್) ತಡೆಯುತ್ತದೆ. ಇದು ಶರೀರಕ್ಕೆ ಚೈತನ್ಯ ನೀಡಿ ನುಲಿತಗಳನ್ನು ಕಡಿಮೆ ಮಾಡುತ್ತದೆ.

ಇದು ಮೂಳೆಗಳನ್ನು ದೃಢಗೊಳಿಸುವ ಮೂಲಕ ಕೀಲು ನೋವು ಮತ್ತು ಅದಕ್ಕೆ ಸಂಬಂಧಿಸಿದ ಆರ್ಥ್ರೈಟಿಸ್ ನಂತಹ (ಸಂಧಿವಾತ) ಇತರ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದು ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವುದರಿಂದ ಮೂಳೆಗಳು ದೃಢ ಮತ್ತು ಆರೋಗ್ಯಕರವಾಗಿರುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಒಂದು ಲೋಟ ಹಾಲು ಅಥವಾ ಚಿಟಿಕೆ ಶುಂಠಿಯೊಂದಿಗೆ ಬೆಲ್ಲ ಸೇವಿಸಬಹುದು.

 

ಇದನ್ನು ಓದಿ: Train Ticket: ರೈಲು ಪ್ರಯಾಣ ದರದಲ್ಲಿ ರಿಯಾಯಿತಿ: ಭಾರತೀಯ ರೈಲ್ವೇ ಸ್ಪಷ್ಟನೆ

Leave A Reply

Your email address will not be published.