Housing Scheme:ಸ್ವಂತ ಮನೆಯ ಕನಸು ಕಂಡವರಿಗೆ ಭರ್ಜರಿ ಸುದ್ದಿ- ದೀಪಾವಳಿಗೆ ಮೋದಿ ಸರ್ಕಾರದಿಂದ ಸಿಗ್ತಿದೆ ಬಿಗ್ ಗಿಫ್ಟ್ !!
National news housing scheme Modi government new scheme for those who want own house
Housing Scheme: 2024ರಲ್ಲಿ ಲೋಕಸಭೆ ಚುನಾವಣೆ(Assembly Election)ನಡೆಯಲಿರುವ ಹಿನ್ನೆಲೆ ಸರ್ಕಾರ ಜನರಿಗೆ ಸಿಹಿ ಸುದ್ದಿ ನೀಡುವ ನಿರೀಕ್ಷೆಯಿದೆ. 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ ನಗರ ಪ್ರದೇಶದ ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರ (Central Government)ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆಗಳಿವೆ. ಚುನಾವಣೆಯ ಬಳಿಕ ಸರ್ಕಾರವು ಈ ವರ್ಗಕ್ಕೆ ಹೊಸ ವಸತಿ ಯೋಜನೆಯನ್ನು ಆರಂಭಿಸುವ ನಿರೀಕ್ಷೆಯಿದೆ.ಸ್ವಂತ ಮನೆ(Own House)ಹೊಂದುವ ಕನಸನ್ನು ನನಸು ಮಾಡುವುದು ಈ ಯೋಜನೆಯ ಧ್ಯೇಯವಾಗಿದೆ.
ವಸತಿ ಯೋಜನೆಯ (Housing Scheme) ಮೂಲಕ ನೀವು ಸಾಲದ ಬಡ್ಡಿಯ ಮೇಲೆ ದೊಡ್ಡ ಪರಿಹಾರವನ್ನು ಪಡೆಯಬಹುದು. ಈ ಯೋಜನೆಯ ಮೂಲಕ 3-6.5% ನಡುವಿನ ವಾರ್ಷಿಕ ಬಡ್ಡಿ ಸಬ್ಸಿಡಿಯನ್ನು ರೂ 9 ಲಕ್ಷದವರೆಗಿನ ಸಾಲದ ಮೇಲೆ ನೀಡುವ ಸಂಭವವಿದೆ. 50 ಲಕ್ಷ ರೂ.ಗಿಂತ ಕಡಿಮೆ ಇರುವ ಗೃಹ ಸಾಲಗಳು 20 ವರ್ಷಗಳ ಅವಧಿಗೆ ಈ ಯೋಜನೆಯಡಿ ಬರಲಿದೆ. 2024 ರ ಮಧ್ಯಂತರ ಬಜೆಟ್‌ನಲ್ಲಿ ಜನರಿಗೆ ಅನೇಕ ಉಡುಗೊರೆಗಳನ್ನು ನೀಡುವ ಸಾಧ್ಯತೆ ದಟ್ಟವಾಗಿದೆ. ಪಿಎಂ-ಕಿಸಾನ್ ಯೋಜನೆಯ ಕಂತನ್ನೂ ಸರ್ಕಾರ ಹೆಚ್ಚಿಸುವ ನಿರೀಕ್ಷೆಯಿದೆ. ಪ್ರಸ್ತುತ ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ.ಗಳಿದ್ದರೂ ಅದನ್ನು 10,000 ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Urfi Javed arrested: ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ಅರೆಸ್ಟ್: ತುಂಡುಡುಗೆ ತೊಟ್ಟವಳು ಶಾಕ್, ವೀಡಿಯೋ ವೈರಲ್!