Cattle Fodder Price: ಹೈನುಗಾರಿಕೆ ಸಂಕಷ್ಟ : ಜಾನುವಾರು ಮೇವಿನ ದರದಲ್ಲಿ ಭಾರೀ ಏರಿಕೆ!
Fodder shortage due to Drought effect in Karnataka cattle fodder price increase
Cattle Fodder Price: ಹೈನುಗಾರಿಕೆ ನಡೆಸಲು ಮುಖ್ಯವಾಗಿ ಬೇಸಿಗೆಯಲ್ಲಿ ಒಣ ಮೇವು ಅತೀ ಅಗತ್ಯವಾಗಿದೆ. ಆದರೆ ಜಾನುವಾರು ಒಣ ಹುಲ್ಲಿನ ದರದಲ್ಲಿ( Cattle Fodder Price)ಭಾರೀ ಏರಿಕೆ ಕಂಡಿದ್ದು, ಪ್ರತೀ ಟ್ರ್ಯಾಕ್ಟರ್ ಗೆ 8 ಸಾವಿರದಿಂದ 12 ಸಾವಿರಕ್ಕೆ ಏರಿಕೆ ಆಗಿದೆ. ಬಯಲು ಸೀಮೆ ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಭತ್ತ, ಜೋಳ, ಕಡ್ಲೆ ಒಣ ಮೇವಿನ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
2022ರಲ್ಲಿ ಉತ್ತಮ ಮಳೆಯಾದ ಪರಿಣಾಮ ಹಸಿ ಹುಲ್ಲು ಲಭ್ಯತೆ ಉತ್ತಮವಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಜನವರಿಯಿಂದ ಅ.29ರವರೆಗೆ ಸರಾಸರಿ ವಾಡಿಕೆ ಮಳೆ 1097ಮೀ.ಮೀ. ಇದ್ದು, 799ಮೀ.ಮೀ. ಮಳೆಯಾಗುವ ಮೂಲಕ ಶೇ.27ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಬರ ಪರಿಸ್ಥಿತಿ ಎದುರಾಗಿದೆ. ಇದರಿಂದ ಕಳೆದ 2-3 ತಿಂಗಳಿಂದ ಹಸಿ ಹುಲ್ಲಿನ ಲಭ್ಯತೆ ಕೊರತೆ ಉಂಟಾಗಿ ಒಣಹುಲ್ಲಿನ ದರದಲ್ಲಿಏರಿಕೆ ಕಂಡು ಬಂದಿದೆ.
ಇನ್ನು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬಳ್ಳಾರಿ, ಉಡುಪಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಮೇವಿನ ದರ ಏರಿಕೆ ಕಂಡಿದೆ. ಬಯಲುಸೀಮೆ ಜಿಲ್ಲೆಗಳಲ್ಲಿ ಜಾನುವಾರುಗಳ ಅವಶ್ಯಕವಾದ ರಾಗಿ ಒಣ ಹುಲ್ಲಿನ ದರ ಪ್ರತಿ ಟ್ರ್ಯಾಕ್ಟರ್‌ಗೆ 8 ಸಾವಿರ ರೂ.ನಿಂದ 12 ಸಾವಿರದವರೆಗೆ ಏರಿಕೆ ಕಂಡಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಒಂದು ಕಟ್ಟು ಹುಲ್ಲಿನ ದರ 10ರೂ. ನಿಂದ 20 ರೂ.ವರೆಗೂ ಕೆಲವೆಡೆ ದಾಟಿದೆ. ಸ್ಥಳೀಯವಾಗಿ ಹುಲ್ಲಿಗೆ ಬೇಡಿಕೆಯಿದ್ದು ಜಾನುವಾರು ಸಾಕಣೆ ಮಾಡದ ರೈತರಿಂದ ಹುಲ್ಲನ್ನು ಖರೀದಿಸುವ ಕೆಲಸ ಕೆಲವೆಡೆಯಾಗುತ್ತಿದೆ ಎಂದು ಬಳ್ಳಾರಿ ರೈತ ಚನ್ನಬಸಪ್ಪ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ ರೈತರಿಗೆ ಸವಾಲಾಗಿದ್ದು, ಜಾನುವಾರುಗಳ ಆಹಾರ ಸೇರಿದಂತೆ ಒಣ ಹುಲ್ಲಿನ ದರಗಳು ಗಣನೀಯ ಏರಿಕೆ ಸಮಸ್ಯೆಯಾಗುತ್ತಿದೆ. ಕಾಯಿಲೆಗಳು ಕೂಡ ಜಾನುವಾರುಗಳನ್ನು ಕಾಡುತ್ತಿದೆ. ಈಗಾಗಲೇ ಅನೇಕರು ಇದರಿಂದ ವಿಮುಖರಾಗುತ್ತಿದ್ದು, ಸರಕಾರ ಈ ಬಗ್ಗೆ ಗಮನ ಹರಿಸಬೇಕು,” ಎಂದುಹೆಗ್ಗಡಿಹಳ್ಳಿ ರೈತ ಕೃಷ್ಣಪ್ಪ ಆಗ್ರಹಿಸಿದ್ದಾರೆ.
ಮೇವಿನ ದರ ವಿವರ:
ಮೇವು ಹಳೆ ದರ(ಟ್ರ್ಯಾಕ್ಟರ್ ಲೋಡ್‌ಗೆ) ಪರಿಷ್ಕೃತ ದರ
ಬತ್ತದ ಹುಲ್ಲು 3500 ರೂ. 5ರಿಂದ 6 ಸಾವಿರ ರೂ.
ರಾಗಿ ಹುಲ್ಲು 8,000( ಟ್ರ್ಯಾಕ್ಟರ್ ಲೋಡ್‌ಗೆ) 12,000 ರೂ.
ಶೇಂಗಾ ಒಣ ಸೊಪ್ಪು 6,000- 12,000 ರೂ.
ಜೋಳದ ಕಡ್ಡಿ 3,000 -4,000 ರೂ.
ರಾಜ್ಯದಲ್ಲಿಮುಂದಿನ 3 ತಿಂಗಳಿಗೆ ಆಗುವಷ್ಟು ಮೇವಿನ ಲಭ್ಯತೆಯಿದೆ. ಇನ್ನೂ ಮೇವಿನ ಲಭ್ಯತೆ ಹೆಚ್ಚಿಸಲು ನೀರಾವರಿ ವ್ಯವಸ್ಥೆ ಇದ್ದು, ಮೇವನ್ನು ಬೆಳೆಯಲು ಇಚ್ಚಿಸುವವರಿಗೆ ಮೇವಿನ ಕಿಟ್ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪ್ರಭುಲಿಂಗ ಕವಳಿಕಟ್ಟೆ ಆಯುಕ್ತರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Gruha Lakshmi Yojana Updates: ಗೃಹಲಕ್ಷ್ಮೀ ಹಣ ಪಡೆಯೋ ಎಲ್ಲಾ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ !!