Urfi Javed arrested: ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ಅರೆಸ್ಟ್: ತುಂಡುಡುಗೆ ತೊಟ್ಟವಳು ಶಾಕ್, ವೀಡಿಯೋ ವೈರಲ್!

Entertainment news tv actress urfi Javed arrested for her clothes video viral

Share the Article

Urfi Javed arrested: ತಮ್ಮ ಔಟ್‌ಫಿಟ್‌(Outfit)ಗಳ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುವುದು ಸಹಜ. ಬಿಗ್ ಬಾಸ್ (Bigg Boss OTT)ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್(Urfi Javed) ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ, ಉರ್ಫಿ ಜಾವೇದ್ ಅವರನ್ನು ಪೋಲಿಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಉರ್ಫಿ ಜಾವೇದ್‌ (Urfi Javed) ಅವರನ್ನು ಮುಂಬೈ ಪೊಲೀಸರು ಕಸ್ಟಡಿಗೆ(Urfi Javed Arrested ) ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಊರ್ಫಿ ಬಟ್ಟೆ ವಿಚಾರದಲ್ಲಿ ಆದ ಕಿರಿಕ್ ಹಿನ್ನೆಲೆ ಬಂಧಿಸಲಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೊದಲ್ಲಿ ಉರ್ಫಿ ಒಂದು ಜೊತೆ ಡೆನಿಮ್ ಪ್ಯಾಂಟ್‌ನೊಂದಿಗೆ ಬ್ಯಾಕ್‌ಲೆಸ್‌ ಕೆಂಪು ಟಾಪ್ ಧರಿಸಿದ್ದಾರೆ.

ಉರ್ಫಿ ಜಾವೇದ್ ಅವರು ಸಣ್ಣ ಬಟ್ಟೆ ಧರಿಸಿ ಬಂದ ಹಿನ್ನೆಲೆ ಉರ್ಫಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ‘ನನ್ನನ್ನು ಯಾಕೆ ಕರೆದುಕೊಂಡು ಹೋಗುತ್ತಿದ್ದೀರಿ’ ಎಂದು ಉರ್ಫಿ ಜಾವೇದ್ ಕೂಗಾಡಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು, ‘ಇಷ್ಟು ಸಣ್ಣ ಬಟ್ಟೆ ಧರಿಸಿ ಯಾರು ಓಡಾಡುತ್ತಾರೆ’ ಎಂದು ಮರಳಿ ಪ್ರಶ್ನೆ ಕೇಳಿದ್ದಾರೆ. ವೈರಲ್ ಆದ ವೀಡಿಯೊದಲ್ಲಿ, ಉರ್ಫಿ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗಿರುವುದು ವೈರಲ್‌ ಆಗಿದೆ. ಸದ್ಯ , ವೈರಲ್ ಆದ ವೀಡಿಯೋಗೆ ತರಹೇವಾರಿ ಕಾಮೆಂಟ್ಸ್ ಹರಿದಾಡುತ್ತಿವೆ.

ಇದನ್ನೂ ಓದಿ: MCLR: ಬ್ಯಾಂಕ್ ಆಫ್ ಇಂಡಿಯಾ, ICICI ಬ್ಯಾಂಕ್ ನಲ್ಲಿ ಖಾತೆ ಹೊಂದಿರೋರಿಗೆ ಮಹತ್ವದ ಸುದ್ದಿ- MCLR ದರದಲ್ಲಿ ಭಾರೀ ಹೆಚ್ಚಳ !!

Leave A Reply