

Sukanya Samriddhi Yojana: ಸರ್ಕಾರದಿಂದ ನಡೆಸಲಾಗುವ ಹಲವು ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಒಂದಾಗಿದೆ. ಸಣ್ಣ ಮಗುವಿನಿಂದ ಹಿಡಿದು 10 ವರ್ಷದೊಳಗಿನ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಈ ಯೋಜನೆ ಪ್ರಾರಂಭಿಸಬಹುದು.
ಸರ್ಕಾರದ ಈ ಯೋಜನೆಯಲ್ಲಿ ವಾರ್ಷಿಕ ಸೇ. 7.6 ಬಡ್ಡಿ ನಿಗದಿ ಮಾಡಲಾಗಿದೆ. ಕನಿಷ್ಠ ಒಂದು ವರ್ಷಕ್ಕೆ 250 ರೂ ಹೂಡಿಕೆ ಮಾಡಬಹುದಾಗಿದ್ದು, ಗರಿಷ್ಠ 1.5 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶವಿದೆ. ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಒಂದು ವರ್ಷಕ್ಕೆ 1,50,000 ರೂವರೆಗೆ ಹೂಡಿಕೆ ಮಾಡಬಹುದು. ಅಂದರೆ ತಿಂಗಳಿಗೆ 12,500 ರೂ ಹೂಡಿಕೆ ಮಾಡಬಹುದಾಗಿದ್ದು, ಮೆಚ್ಯೂರಿಟಿ ವೇಳೆಗೆ ನಿಮ್ಮ ಕೈಗೆ ಸಿಗುವ ಮೊತ್ತ 67.34 ಲಕ್ಷ ರೂ. ಆಗಲಿದೆ.
ನೀವು ತಿಂಗಳಿಗೆ 1,000 ರೂನಂತೆ ಹಣ ಉಳಿಸಿದರೆ, ವರ್ಷಕ್ಕೆ 12,000 ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಹೂಡಿಕೆ ಮಾಡಿದರೆ, 15 ವರ್ಷದಲ್ಲಿ ಒಟ್ಟು ಮೊತ್ತ 1,80,000 ರೂ ಆಗಲಿದೆ. ಮೆಚ್ಯೂರಿಟಿ ಬಳಿಕ ಸಿಗುವ ರಿಟರ್ನ್ 5.38 ಲಕ್ಷ ರೂ ಆಗುತ್ತದೆ.ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ತಿಂಗಳಿಗೆ 5,000 ರೂನಂತೆ ವರ್ಷಕ್ಕೆ 60,000 ರೂ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ 9 ಲಕ್ಷ ರೂ ಆಗಲಿದೆ. ಮೆಚ್ಯೂರಿಟಿಯಾದ ಬಳಿಕ ನಿಮಗೆ ಸಿಗುವ ರಿಟರ್ನ್ 27 ಲಕ್ಷ ರೂ ಆಗುತ್ತದೆ. ಅದೇ ರೀತಿ,ನೀವು ತಿಂಗಳಿಗೆ 2,000 ರೂನಂತೆ ವರ್ಷಕ್ಕೆ 24,000 ರೂ ಹಣವನ್ನು ಎಸ್ಎಸ್ವೈಯಲ್ಲಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿಯ ನಂತರ 10.77 ಲಕ್ಷ ರೂ ಆಗಲಿದೆ.
ಇದನ್ನು ಓದಿ: BPL ಕಾರ್ಡ್’ದಾರರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- 5 ಲಕ್ಷದ ವರೆಗೆ ಉಚಿತವಾಗಿ ಸಿಗಲಿದೆ ನಿಮಗೆ ಈ ಸೌಲಭ್ಯ !!













