CM Siddaramaiah: ರುದ್ರಾಕ್ಷಿ ಧರಿಸಿ ಹಂಪಿ ವಿರೂಪಾಕ್ಷನಿಗೆ ಸಿಎಂ ಸಿದ್ದರಾಮಯ್ಯರಿಂದ ವಿಶೇಷ ಪೂಜೆ- ಮೌಢ್ಯ ವಿರೋಧಿ ಮುಖ್ಯಮಂತ್ರಿಗಳಿಂದ ಅಚ್ಚರಿಯ ನಡೆ.

CM Siddaramaiah: ಕನ್ನಡಿಗರು ನಿನ್ನೆ ತಾನೆ 68ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದರೊಂದಿಗೆ ಮೈಸೂರು ರಾಜ್ಯವೆಂಬುದು ‘ಕರ್ನಾಟಕ ರಾಜ್ಯ'(Karnataka State) ಎಂದು ನಾಮಕರಣವಾಗಿ 50 ವರ್ಷಗಳ ಸಂದಿರೋ ಸಡಗರ ಬೇರೆ. ಹೀಗಾಗಿ ಈ ವರ್ಷದ ರಾಜ್ಯೋತ್ಸವ ಕನ್ನಡಿಗರಿಗೆ ತುಂಬಾ ವಿಶೇಷವಾದದ್ದು. ಒಟ್ಟಿನಲ್ಲಿ ಎರಡು ಸಂಭ್ರಮದಲ್ಲಿ ನಿನ್ನೆ ಕನ್ನಡದ ಜನತೆ ಮಿಂದೆದ್ದಾರೆ. ಈ ಪ್ರಯುಕ್ತ ಸಿಎಂ ಸಿದ್ದರಾಮಯ್ಯನವರು(SM Siddaramaiah) ಇಂದು ಹಂಪಿಯಲ್ಲಿ(Hampi) ರುದ್ರಾಕ್ಷಿ ಧರಿಸಿ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 

ಹೌದು, ಮೈಸೂರ ರಾಜ್ಯವೆಂಬುದು ‘ಕರ್ನಾಟಕ ರಾಜ್ಯ’ ಎಂದು ನಾಮಕರಣವಾದದ್ದು ಎಲ್ಲರಿಗೂ ತಿಳಿದೇ ಇದೆ. ಈ ಹೊಸ ನಾಮಕರಣ ಮಾಡಿದವರು ನಾಡಿನ ಹೆಸರಾಂತ ಮುಖ್ಯಮಂತ್ರಿಗಳಾದ ದೇವರಾಜು ಅರಸು ಅವರು. ಇನ್ನು ಮುಖ್ಯವಾದ ವಿಚಾರ ಅಂದ್ರೆ ಈ ಹೆಸರನ್ನು ನೀಡಲು ಪ್ರೇರಣೆ ಬಂದದ್ದು, ದೇವರಾಜ್ ಅರಸುವವರು ಪ್ರಮಾಣ ಮಾಡಿದ್ದು ಕರ್ನಾಟಕದ ಕೇಂದ್ರ ಸ್ಥಳವಾದ, ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪಿಯಲ್ಲಿ. ಅಂದು ಜ್ಯೋತಿಯ ರಥಯಾತ್ರೆಗೆ ಚಾಲನೆ ನೀಡಿ ಮುಖ್ಯಮಂತ್ರಿಗಳು ದೇವರಾಜ್ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದರು. ಇಂದು ಅದಕ್ಕೆ 50ರ ಸಂಭ್ರಮ. ಹೀಗಾಗಿ ಇಂದಿನ ಮುಖ್ಯಮಂತ್ರಿಗಳಾಗಿರುವ ಸಿಎಂ ಸಿದ್ದರಾಮಯ್ಯನವರು ಅದೇ ಹಂಪಿಗೆ ಆಗಮಿಸಿ ರುದ್ರಾಕ್ಷಿ ಧರಿಸಿ ಹಂಪಿಯ ಆರಾಧ್ಯ ದೈವ ವಿರೂಪಕ್ಷನಿಗೆ ಪೂಜೆ ಸಲ್ಲಿಸಿಸಿದ್ದಾರೆ.

ಸಿದ್ದರಾಮಯ್ಯ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದಾರೆ. ಹಂಪಿಯಲ್ಲಿ ಅವರು ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಗಂಗಾ ಜಲಾಭಿಷೇಕ, ವಿಶೇಷ ಪೂಜೆ ಬಳಿಕ ಭುವನೇಶ್ವರಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಪೂಜೆ ಸಲ್ಲಿಸಿ ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಜನಪದ ಕಲಾತಂಡಗಳೊಂದಿಗೆ ಕಾಲ್ನಡಿಗೆಯಲ್ಲೇ ಬಸವಣ್ಣ ಮಂಟಪ ವೇದಿಕೆಯವರೆಗೆ ಸಾಗಿದ್ದಾರೆ. ಇದೇ ಸಮಯದಲ್ಲಿ ರಥ ಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆದಿದ್ದು ಬಳಿಕ, ಬಸವಣ್ಣ ಮಂಟಪ ವೇದಿಕೆಯಲ್ಲಿ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದಾರೆ.

ಅಂದಹಾಗೆ ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕರ್ನಾಟಕ ನಾಮಕರಣ ವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಜೋತಿ ರಥಯಾತ್ರೆಗೆ ವಿರೂಪಾಕ್ಷ ದೇವಸ್ಥಾನದಿಂದಲೇ ಚಾಲನೆ ನೀಡಿದ್ದೇವೆ. 1973, ನವೆಂಬರ್ 2 ರಂದು ಜೋತಿ ರಥಯಾತ್ರೆಗೆ ಗೆ ಹಂಪಿಯಿಂದಲೇ ದೇವರಾಜ್ ಅರಸು ಚಾಲನೆ ನೀಡಿದ್ರು. ಅರಸು ಅವರು ಮೈಸೂರು ಜಿಲ್ಲೆಯವರು, ನಾನು ಮೈಸೂರು ಜಿಲ್ಲೆಯವನು. ಒಂದು ವರ್ಷ ಸಂಭ್ರಮಾಚರಣೆ ನಡೆಯುತ್ತದೆ. ಅಂದು ದೇವರಾಜ್ ಅರಸು ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ನನಗೆ ಅವಕಾಶ ಸಿಕ್ಕಿರುವುದು ಕಾಕತಾಳೀಯವಾಗಿದೆ. ನನಗೆ ಮೂಡನಂಬಿಕೆ, ಮೌಡ್ಯಗಳಲ್ಲಿ ನಂಬಿಕೆ ಇಲ್ಲ. ಆದ್ರೇ ದೇವರನ್ನು ನಾನು ನಂಬುತ್ತೇನೆ. ಸಮಾಜಕ್ಕೆ ಒಳ್ಳೆಯದಾಗೋದನ್ನು ನಂಬುತ್ತೇನೆ. ಕೆಟ್ಟದ್ದಾಗೋದನ್ನು ನಂಬಲ್ಲ ಎಂದು ಹೇಳಿದ್ದಾರೆ.

6 ಮಂದಿ ಸಿಎಂ, ಒಬ್ಬ ಉಪ ಪ್ರಧಾನಿಯ ಅಧಿಕಾರ ಹೋಗಿತ್ತು:
ಹಂಪಿ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತೆ ಎಂಬ ಮೂಡನಂಬಿಕೆ ಇದೆ. 1973ರ ನ. 1ರಂದು ಇದೇ ಹಂಪಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು, ಅಲ್ಲಿಯೇ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ನಾಮಕರಣ ಮಾಡುವುದಾಗಿ ಪ್ರಕಟಿಸಿದ್ದರು. ಆನಂತರ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದರ್ಶನವನ್ನು ಪಡೆದು ಅವರು ಬೆಂಗಳೂರಿಗೆ ಮರಳಿದ್ದರು. ಅದಾಗಿ, ಕೆಲವೇ ದಿನಗಳಲ್ಲಿ ಅವರ ಅಧಿಕಾರ ಹೋಗಿತ್ತು!

ಅದಾದ ಬಳಿಕ, ಈ ಹಿಂದಿನ ಮುಖ್ಯಮಂತ್ರಿಗಳಾದ ಎಚ್.ಡಿ. ದೇವೇಗೌಡ, ಧರಮ್ ಸಿಂಗ್, ಎಸ್.ಎಂ. ಕೃಷ್ಣ ಹಾಗೂ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿಯವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಧಾಗಿ ಕೆಲವೇ ದಿನಗಳಲ್ಲಿ ಅವರು ಅಧಿಕಾರ ತ್ಯಾಗ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ರಾಷ್ಟ್ರನಾಯಕರಲ್ಲಿ ಎಲ್.ಕೆ. ಅಡ್ವಾಣಿ ಅವರು ಉಪ ಪ್ರಧಾನಿಯಾಗಿದ್ದಾಗ ಅವರು ಈ ದೇಗುಲವನ್ನು ಸಂದರ್ಶಿಸಿ ಹೋದ ಕೂಡಲೇ ಅವರು ಅಧಿಕಾರ ತೊರೆಯಬೇಕಾಗಿ ಬಂದಿತ್ತು. ಆದರೀಗ ಸಿಎಂ ಸಿದ್ದರಾಮಯ್ಯನವರು ಇದೆಲ್ಲವನ್ನೂ ದೂರ ತಳ್ಳಿ ಮೌಡ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

 

ಇದನ್ನು ಓದಿ: LIC Policy: LIC ಈ ಯೋಜನೆಯಡಿ ಪ್ರತಿ ದಿನ 87ರೂ ಇನ್ವೆಸ್ಟ್ ಮಾಡಿ – ಕೊನೆಗೆ ಬರೋಬ್ಬರಿ 11 ಲಕ್ಷ ಪಡೆಯಿರಿ !!

Leave A Reply

Your email address will not be published.