Subrahmanya: ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ ಆರೋಪ : ಬೆಳ್ಳಾರೆಯ ರಿಕ್ಷಾ ಚಾಲಕನ ಬಂಧನ

Share the Article

ಸುಬ್ರಹ್ಮಣ್ಯ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಆರೋಪದಲ್ಲಿ ಆಟೋ ಚಾಲಕನ ವಿರುದ್ಧ ಕಡಬ ತಾಲೂಕಿನ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ ತಾಲೂಕಿನ ಬೆಳ್ಳಾರೆಯ ಆಟೋ ಚಾಲಕ ಮಹೇಶ್ ಎಂಬಾತ ಪಂಜದ ಪಿಯುಸಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲಾಡ್ಜ್ ನಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬುದು ವಿದ್ಯಾರ್ಥಿನಿಯ ಪೋಷಕರ ಆರೋಪಿಸಿದ್ದಾರೆ.

ಪ್ರೀತಿಸುವ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡ ಆಟೋ ಚಾಲಕ ಬಳಿಕ ವಂಚನೆ ನಡೆಸಿದ್ದಾಗಿ ದೂರಲಾಗಿದೆ. ಆತ ನಿರಾಕರಿಸುವ ಕಾರಣಕ್ಕಾಗಿ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದೂ ಹೇಳಲಾಗಿದ್ದು, ಸಂತ್ರಸ್ತೆ ಅಪ್ರಾಪ್ತಳಾದ ಕಾರಣ ಫೋಕ್ಸೋ ಕಾಯ್ದೆಯಡಿ ಸುಬ್ರಹ್ಮಣ್ಯ ಠಾಣಾ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ ಆರೋಪ : ಬೆಳ್ಳಾರೆಯ ರಿಕ್ಷಾ ಚಾಲಕನ ಬಂಧನ 

Leave A Reply