K M Shivalinge gouda: ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ರಾಜ್ಯದ ಸಿಎಂ ಪಟ್ಟ !!
Karnataka political news MLA k M shivalinge Gouda is now Karnataka CM latest news
K M Shivalinge gouda: ರಾಜ್ಯ ರಾಜಕೀಯದಲ್ಲಿ ಈಗಾಗಲೇ ಸಿಎಂ ಸ್ಥಾನದ ವಿಚಾರ ಭಾರೀ ಸದ್ಧುಮಾಡುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ(CM Siddaramaiah) ಆಗಿರುವಾಗಲೇ ಸಿಎಂ ಪಟ್ಟದ ಹಂಚಿಕೆ ವಿಚಾರ ಆಗಾಗ ಚರ್ಚೆಗೊಳಗಾಗುತ್ತಿದೆ. ಕೆಲವರು ಎರಡೂವರೆ ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ ಅಂದ್ರೆ ಕೆಲವರು 5 ವರ್ಷವೂ ಅವರು ಮುಖ್ಯಮಂತ್ರಿಯಾಗಿಯೇ ಇರುತ್ತಾರೆ ಎನ್ನುತ್ತಾರೆ. ಒಟ್ಟಿನಲ್ಲಿ ಈ ವಿಚಾರ ಆಗಾಗ ಮುನ್ನಲೆಗೆ ಬಂದು ಚರ್ಚೆಯಾಗಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತದೆ. ಆದರೆ ಈ ನಡುವೆಯೇ ಇದೀಗ ‘ಅರಸೀಕೆರೆ ಶಾಸಕ ಕೆ. ಎಂ ಶಿವಲಿಂಗೇಗೌಡರಿಗೆ(K M Shivalinge gouda) ಸಿಎಂ ಪಟ್ಟ’ ಎಂಬ ವಿಚಾರವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕೆಲವು ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡ ನಾಯಕರಿದ್ದಾರೆ. ಅವರು ಶಾಸಕರಾಗಿರಬಹುದು, ಎಂಪಿ ಗಳಾಗಿರಬಹದು ಅಥವಾ ಇನ್ನಾವುದೇ ನಾಯಕರಾಗಿರಬಹುದು. ಅವರು ತಮ್ಮ ವಿಶೇಷ ಕಾರ್ಯಗಳ ಮೂಲಕ ನಾಡಿನ ಜನರ ಮನೆಮಾತಾಗಿಬಿಟ್ಟಿರುತ್ತಾರೆ. ಅಂತೆಯೇ ವಿಧಾನಸಭೆಯಲ್ಲಿ ತಮ್ಮ ಹಳ್ಳಿಯ ಸೊಗಡಿನ ಮಾತಿನ ಮೂಲಕ, ಖಡಕ್ ಆದ ನುಡಿಗಳೊಂದಿಗೆ ಜನರ ಸಮಸ್ಯೆ ಎತ್ತಿ ಹಿಡಿದು, ತಪ್ಪುಮಾಡಿದರೆ ತಮ್ಮ ಸಹನಾಯಕರಾದಿಯಾಗಿ ಎಲ್ಲರನ್ನೂ ತಿವಿಯುವ ಅರಸೀಕೆರೆ ಶಾಸಕರಾದ ಶಿವಲಿಂಗೇ ಗೌಡರು ಕೂಡ ಅಂತವರಲ್ಲಿ ಒಬ್ಬರು. ಇದೀಗ ಈ ಶಿವಲಿಂಗೇ ಗೌಡರು ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವಾಗಲೇ ಸಿಎಂ ಆಗಿದ್ದಾರೆ. ಅರೆ ಏನಪ್ಪಾ ವಿಚಿತ್ರ ಅಂತ ಅನ್ಕೊಳ್ತಿದ್ದೀರಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ.
ಹೌದು, ಅರಸೀಕೆರೆ(Arasikere) ಶಾಸಕರಾದ ಶಿವಲಿಂಗೇ ಗೌಡರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಅದು ರಿಯಲ್ ಆಖಿ ಅಲ್ಲ ರೀಲ್ ಅಲ್ಲಿ. ಅಂದ್ರೆ ಗೌಡ್ರು ಸಿನಿಮಾ ಒಂದಕ್ಕೆ ಬಣ್ಣ ಹಚ್ಚುತ್ತಿದ್ದು, ಅದರಲ್ಲಿ ಮುಖ್ಯಮಂತ್ರಿಯಾಗಿ ನಟಿಸಲಿದ್ದಾರೆ. ಅಂದಹಾಗೆ ಕೃಷ್ಣ ಬೆಳ್ತಂಗಡಿ ಅವರ ನಿರ್ದೇಶನದ, ರವಿ ಆಚಾರ್ ನಿರ್ಮಾಣದ ‘ನಮ್ ಶಾಲೆ’ ಎಂಬ ಕನ್ನಡ ಚಿತ್ರದಲ್ಲಿ ಶಿವಲಿಂಗೇ ಗೌಡರು ಸಿಎಂ ಪಾತ್ರದಲ್ಲಿ ಕಾಣಿಸಲಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಇದರ ಕೆಲವು ತುಣುಕುಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.
ಸದ್ಯ ಗೀಜಗನ ಹಳ್ಳಿಯ ತೋಟದ ಮನೆಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಶಾಸಕರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬಂದಿಲ್ಲ. ಆದರೆ ಶೂಟಿಂಗ್ ನ ಕೆಲವು ಸೀಸನ್ ಗಳು ವೈರಲ್ ಆಗುತ್ತಿವೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಗೌಡರು !
ಶಿವಲಿಂಗೇ ಗೌಡರು ತದನದಲ್ಲಿ ತಾವು ಮಾಡುವ ಭಾಷಣಗಳ ಮೂಲಕ ತುಂಬಾ ಫೇಮಸ್ ಆದವರು. ಖಡಕ್ ಮಾತುಗಳಿಂದ, ಸತ್ಯದ ನುಡಿಗಳಿಂದ ಎಂತವರನ್ನೂ ಕಟ್ಟಿಹಾಕಬಲ್ಲವರು. ಗೌಡರು ಇದೂವರೆಗೂ ಜೆಡಿಎಸ್ ನಿಂದ ಅರಸೀಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ, ಗೆದ್ದು ಬೀಗಿದರು. ಸಿದ್ದು ಸರ್ಕಾರದಲ್ಲಿ ಮಂತ್ರಿಗಿರಿ ಸಿಗುತ್ತೆಂದು ಆಸೆಯಲ್ಲಿದ್ದ ಗೌಡರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಆದರೆ ಮುಂದಿನ ದಿನಗಳಲ್ಲಿ ಶಿವಲಿಂಗೇ ಗೌಡರನ್ನು ಮಂತ್ರಿ ಮಾಡಲಾಗುವುದು ಎಂದು ಸ್ವತಃ ಸಿದ್ದರಾಮಯ್ಯನವರೇ ಘೋಷಿಸಿದ್ದಾರೆ.
ಇದನ್ನೂ ಓದಿ: Toll Plaza : ದೇಶಾದ್ಯಂತ ಟೋಲ್ ಕಟ್ಟುವವರಿಗೆ ಬಂತು ಹೊಸ ರೂಲ್ಸ್- ಇದಕ್ಕಿಂದ ಹೆಚ್ಚು ಹೊತ್ತು ಕಾದರೆ ಟೋಲ್ ಕಟ್ಟಬೇಕಾಗಿಲ್ಲ !!