B.Ed Course: ಶಿಕ್ಷಕರಾಗೋ ಕನಸು ಕಂಡವರಿಗೆ ಮುಖ್ಯ ಮಾಹಿತಿ- B.ED ಕೋರ್ಸ್ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್
Education news application invited for admission to B.Ed course latest news
B.Ed Course: ಶಿಕ್ಷಕರ ತರಬೇತಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಒಂದಿದೆ. 2023-24ನೇ ಸಾಲಿಗೆ ಬಿ.ಇಡಿ ದಾಖಲಾತಿ ಕುರಿತಂತೆ, ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಹೌದು, 2023-24ನೇ ಸಾಲಿಗೆ ಬಿ.ಇಡಿ ದಾಖಲಾತಿಗೆ ( B.Ed Admission ) ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸದ್ಯ 2 ವರ್ಷದ ಕೋರ್ಸ್ ಗೆ ದಾಖಲಾಗಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಶಿಕ್ಷಣ ಇಲಾಖೆ ( Education Department) ಆಹ್ವಾನಿಸಿದೆ.
2023-24ನೇ ಸಾಲಿಗೆ ಎರಡು ವರ್ಷದ ಬಿ.ಇಡಿ ಕೋರ್ಸಿನ ( B.Ed Course ) ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ದಿನಾಂಕ: 31/10/2023 ರಿಂದ 29/11/2023 ರವರೆಗೆ ಆಹ್ವಾನಿಸಲಾಗಿದೆ ಎಂದು ತಿಳಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ https://schooleducation.kar.nic.in ನಲ್ಲಿ ಪ್ರಕಟಿಸಲಾದ ಅಧಿಸೂಚನೆಯಲ್ಲಿ ಅರ್ಹತೆ, ಮೀಸಲಾತಿ, ಶುಲ್ಕ ಇತ್ಯಾದಿ ವಿವರ ಮತ್ತು ಜಿಲ್ಲಾವಾರು ಬಿ.ಇಡಿ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ನೀಡಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ ಆನ್‌ಲೈನ್ ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಿ ಸಲ್ಲಿಸಲು ತಿಳಿಸಲಾಗಿದೆ.
https://schooleducation.karnataka.gov.in/cacell/kn
ಇದನ್ನೂ ಓದಿ: Kerala Blast: ಕೇರಳ ಸ್ಫೋಟಕ್ಕೆ ರೋಚಕ ತಿರುವು!! ಇದರ ಹಿಂದಿರುವ ಮಾಸ್ಟರ್ ಮೈಂಡ್ ಯಾರು ಗೊತ್ತೇ?