SBI ATM New Rule: SBI ಗ್ರಾಹಕರಿಗೆ ಮಹತ್ವದ ಸುದ್ದಿ- ATM ನಿಂದ ಹಣ ಡ್ರಾ ಮಾಡುವವರಿಗೆ ಬಂತು ಹೊಸ ರೂಲ್ಸ್ !!
Business news sbi bank ATM new rules sbi cash withdrawal rule changes
SBI ATM New rule: ಬ್ಯಾಂಕುಗಳು ಜನರ ಅನುಕೂಲಕ್ಕೆ ತಕ್ಕಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುವದರೊಂದಿಗೆ ಮೊದಲೇ ಜಾರಿಯಲ್ಲಿರುವ ಕೆಲವು ನಿಯಮಗಳನ್ನು ಬದಲಾವಣೆ ಮಾಡುತ್ತಿರುತ್ತದೆ. ಅಂತೆಯೇ ಇದೀಗ ದೇಶದ ಅತಿ ದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ SBI ತನ್ನ ಗ್ರಾಹಕರಿಗೆ ATM ವಿಚಾರವಾಗಿ ಕೆಲವು ನಿಯಮಗಳನ್ನು(SBI ATM New rule)ಬದಲಾಯಿಸಿದೆ.
ATM ಒಂದು ಕೈಯಲ್ಲಿದ್ದು, ಖಾತೆಯಲ್ಲಿ ಹಣವಿದ್ದರೆ ಎಲ್ಲಿಗೆ ಬೇಕಾದರೂ ಹೋಗಬಹುದು, ಯಾವಾಗ ಬೇಕಾದರೂ ಹೋಗಬಹುದು. ಆದರೆ ಬ್ಯಾಂಕಿನ ಕೆಲವು ನಿಯಮಗಳು ಸದಾ ನೆನಪಿನಲ್ಲಿರಬೇಕು. ಇದೀಗ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ SBI ಬ್ಯಾಂಕ್ ಇದೀಗ ATM ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇದರ ಪ್ರಕಾರ ಗ್ರಾಹಕರು ATM ಇಲ್ಲದೆಯೂ ಹಣವನ್ನು ಡ್ರಾ ಮಾಡಬಹುದು.
ಹೌದು, ನೀವು SBI ಗ್ರಾಹಕರಾಗಿದ್ದು, ನಿಮ್ಮ ಬಳಿ ATM ಕಾರ್ಡ್ ಇಲ್ಲ ಅಂದ್ರೆ ಹಣ ತೆಗೆಯಲು ಚಿಂತೆಮಾಡಬೇಕೆಂದಿಲ್ಲ. ಯಾಕೆಂದರೆ SBI ಬ್ಯಾಂಕ್ YONO ಅಪ್ಲಿಕೇಶನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ YONO ಮೂಲಕ ಹಣವನ್ನು ಬಿಡಿಸಿಕೊಳ್ಳಬಹುದು.
ಏನಿದು YONO ಅಪ್ಲಿಕೇಶನ್?
YONO ಅಪ್ಲಿಕೇಶನ್ ನ ಮೂಲಕ ಗ್ರಾಹಕರು ನೇರ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ. ಸದ್ಯ SBI ತನ್ನ YONO ಅಪ್ಲಿಕೇಶನ್ ಅನ್ನು UPI ಗೆ Link ಮಾಡುವ ಮೂಲಕ ಗ್ರಾಹಕರಿಗೆ ನಗದು ಡ್ರಾ ಮಾಡುವುದನ್ನು ಇನ್ನಷ್ಟು ಸರಳಗೊಳಿಸಿದೆ. ಅಂದಹಾಗೆ YONO ಸ್ಟಿಕ್ಕರ್ ಅಂಟಿಸಲಾಗಿರುವ ATM ಗಳಲ್ಲಿ ಮಾತ್ರ ಈ ಸೇವೆಯನ್ನು. ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಹಣ ಬಿಡಿಸುವುದು ಹೇಗೆ?
*ನೀವು ಮೊದಲನೆಯದಾಗಿ ನಿಮ್ಮ ಫೋನ್‌ನಲ್ಲಿ Yono ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ.
*ನಂತರ ‘Cash Withdrawal’ ಆಯ್ಕೆಯನ್ನು ಆರಿಸಿ.
*ಡ್ರಾ ಮಾಡಲು ಬಯಸುವ ಹಣವೆಷ್ಟು ಎಂದು ನಮೂದಿಸಿ.
* ನಂತರ ನಿಮ್ಮ ATM ಅನ್ನು ಆಯ್ಕೆ ಮಾಡಿ.
* QR Code ಜನರೇಟ್ ಆಗುತ್ತದೆ.
* QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
*ಬಳಿಕ UPI ಐಡಿ ಮತ್ತು UPI ಪಿನ್ ಅನ್ನು ನಮೂದಿಸಿ.
*UPI ಪಿನ್ ನಮೂದಿಸಿದ ನಂತರ, ಸಲ್ಲಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನೀವು ATM Card ಬಳಸದೆ ATM ನಿಂದ ಹಣವನ್ನು ಪಡೆಯಬಹುದು.
ಇದನ್ನೂ ಓದಿ: Ramalinga reddy: KSRTC ಯಿಂದ ನಾಡಿನ ಜನತೆಗೆ ಮತ್ತೊಂದು ಗುಡ್ ನ್ಯೂಸ್ !!