Earned Leave encashment: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಹತ್ವದ ಸುದ್ದಿ – ಗಳಿಕೆ ರಜೆ ನಗದಿಕರಣಕ್ಕೆ ಹೀಗೆ ಅರ್ಜಿ ಸಲ್ಲಿಸಿ
Karnataka education news Important News for Primary School Teachers Apply for Earned Leave encashment like this
School Teacher Earned Leave Encashment: ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು / ಶಿಕ್ಷಕರು – ಜಿ ಆರ್ ಸಿ ಸಿಬ್ಬಂದಿಯವರಿಂದ, 2023 ನೇ ಸಾಲಿನ ಗಳಿಕೆ ರಜೆ ನಗದಿಕರಣ (School Teacher Earned Leave Encashment) ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಗಳಿಕೆ ರಜೆ ನಗಧಿಕರಣ ಸೌಲಭ್ಯ
ಪಡೆಯಲು ಇಚ್ಚೆ ಹೊಂದಿರುವ
ಶಿಕ್ಷಕರು ಪ್ರತ್ಯೇಕ ಅರ್ಜಿಯ ಜೊತೆಗೆ
ಕಡ್ಡಾಯವಾಗಿ ರಜೆ ಪ್ರ-ಪತ್ರ
ನಮೂನೆಯಲ್ಲಿ ಸಂಪೂರ್ಣ
ಮಾಹಿತಿಯನ್ನು ಭರ್ತಿ ಮಾಡಿ ಶಾಲಾ
ಮುಖ್ಯ ಶಿಕ್ಷಕರಿಗೆ ಸಲ್ಲಿಸುವಂತೆ
ಸೂಚನೆ ನೀಡಲಾಗಿದೆ.
ಗಳಿಕೆ ರಜೆ ನಗದೀಕರಣ ಅವಧಿ ದಿ:16- 10-2023 ರಿಂದ 30-10-2023 ವರೆಗೆ ಗರಿಷ್ಠ 15 ದಿನಗಳಿಗೆ ಮಾತ್ರ ನಗದೀಕರಣ ಮಂಜೂರಿಸಲಾಗುವುದು ಮತ್ತು ಸ್ವೀಕೃತವಾಗುವ ಅರ್ಜಿಗಳನ್ನು ಕಡ್ಡಾಯವಾಗಿ ಸಕಾಲ ಸೇವೆಯಲ್ಲಿ ನೋಂದಾಯಿಸಬೇಕಾಗಿರುವ ಕಾರಣ ಶಿಕ್ಷಕರು ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಹಾಗೂ ಶಾಲೆಗಳ ಹೆಸರನ್ನು ಕಡ್ಡಾಯವಾಗಿ ನಮೂದಿಸುವುದು ಅವಶ್ಯವಾಗಿದೆ. ಮತ್ತು ಎಸ್.ಎಸ್.ಎ ಮತ್ತು ಟಿ.ಜಿ.ಟಿ ಶಿಕ್ಷಕರ ಅರ್ಜಿಗಳನ್ನು ಪ್ರತ್ಯೇಕವಾಗಿ ನಿಗಧಿಗೊಳಿಸಿದ ದಿನಾಂಕದೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದೆ.
ಎಲ್ಲಾ ಮುಖ್ಯ ಶಿಕ್ಷಕರು ಮೇಲಿನ ವಿಷಯವನ್ನು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಶಿಕ್ಷಕರ ಗಮನಕ್ಕೆ ತಂದು ಇಚ್ಚೆ ಹೊಂದಿರುವ ಶಿಕ್ಷಕರ ಅರ್ಜಿಗಳನ್ನು ಪಡೆದುಕೊಂಡು ಈ ಕೆಳಕಂಡ ನಮೂನೆಯೊಂದಿಗೆ ತಮ್ಮ ಶಿಫಾರಸು ಪತ್ರದ ಮುಖಾಂತರ ಸಂಬಂಧಪಟ್ಟ ಕಸ್ಟಂನ ವೇತನ: ಜಿಲ್ಲಾ ತಯಾರಿಸುವ ವಿಷಯ ನಿರ್ವಾಹಕರಿಗೆ ದಿನಾಂಕ : 10-11-2023 ರ ಅವಧಿಯೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್- HRAಯಲ್ಲಿ ಭಾರೀ ಹೆಚ್ಚಳ !! ಈ ತಿಂಗಳಿಂದಲೇ ಜಾರಿಗೆ ಸರ್ಕಾರದ ನಿರ್ಧಾರ