IRDAI New Rule: ಆರೋಗ್ಯ ವಿಮೆ ಮಾಡಿಸಿದವರಿಗೆ ಸಂತಸದ ಸುದ್ದಿ – ಹೊಸ ನಿಯಮಗಳು ಜಾರಿ
Business news new rule for IRDAI companies customers will get benefits from this
IRDAI New Rule: ನೀವು ಯಾವುದೇ ಕಂಪನಿಯ ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಗ್ರಾಹಕರ ಹಿತಾಸಕ್ತಿಯನ್ನು ಆಧರಿಸಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ಹೊಸ ಆದೇಶ ಹೊರಡಿಸಿದೆ. ಈ ಆದೇಶದ ಅನುಸಾರ, ಗ್ರಾಹಕರಿಗೆ ಗ್ರಾಹಕ ಮಾಹಿತಿ ಹಾಳೆ (Customer Information Sheet) ಅನ್ನು ಸರಳಗೊಳಿಸುವಂತೆ ವಿಮಾ ಕಂಪನಿಗಳಿಗೆ ಮನವಿ ಸಲ್ಲಿಸಲಾಗಿದೆ.
ಇದರ ಅಡಿಯಲ್ಲಿ, ವಿಮಾ ಕಂಪನಿಯು ವಿಮೆ ಮಾಡಿದ ಮೊತ್ತ ಮತ್ತು ಪಾಲಿಸಿಯಲ್ಲಿ ಒಳಗೊಂಡಿರುವ ವೆಚ್ಚಗಳಂತಹ ಪಾಲಿಸಿಯ ಮೂಲಭೂತ ಮಾಹಿತಿಯನ್ನು ಕ್ಲೈಮ್ ಬಗ್ಗೆ(IRDAI New Rule) ಮಾಹಿತಿ ನೀಡಲಿದೆ.ಈ ನಿಯಮವು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಸುತ್ತೋಲೆಯ ಅನುಸಾರ, ವಿಮಾ ಕಂಪನಿ ಮತ್ತು ಪಾಲಿಸಿದಾರರ ನಡುವಿನ ಪಾಲಿಸಿ ಸಂಬಂಧಿತ ಅಂಶಗಳಲ್ಲಿನ ವ್ಯತ್ಯಾಸಗಳಿಂದಾಗಿ ಅನೇಕ ದೂರುಗಳನ್ನು ಬರುತ್ತಿದ್ದು, ಇದನ್ನು ಗಮನದಲ್ಲಿರಿಸಿ ಸಿಐಎಸ್ ಅನ್ನು ಬದಲಾವಣೆಗಳನ್ನು ತರಲಾಗುತ್ತದೆ.
ಜನವರಿ 1ರಿಂದ ಗ್ರಾಹಕರು ಈ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆಯಲಿದ್ದು, IRDAI ಗ್ರಾಹಕರಿಗೆ ಎಲ್ಲವನ್ನೂ ವಿವರಿಸಲು ಅಸ್ತಿತ್ವದಲ್ಲಿರುವ ಕಸ್ಟಮರ್ ಇನ್ಫರ್ಮೇಷನ್ ಶೀಟ್ ಬದಲಾವಣೆಗಳನ್ನು ತರಲಾಗಿದೆ. ಹೊಸ ಸಿಐಎಸ್ ಜನವರಿ 1, 2024 ರಿಂದ ಜಾರಿಗೆ ಬರಲಿದೆ ಎಂದು ವಿಮಾ ನಿಯಂತ್ರಕರು ಈ ಸಂಬಂಧ ಎಲ್ಲಾ ವಿಮಾ ಕಂಪನಿಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪಾಲಿಸಿದಾರರು ಖರೀದಿಸಿದ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥೈಸಿಕೊಳ್ಳುವುದು ಮುಖ್ಯವಾಗಿದೆ ಎಂದು ಪ್ರಾಧಿಕಾರ ಹೇಳಿದೆ. ಈ ಪತ್ರದ ಅನುಸಾರ, ‘ಪಾಲಿಸಿಗೆ ಸಂಬಂಧಿಸಿದ ಕಾಗದವನ್ನು ಗ್ರಾಹಕರು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಸಿಐಎಸ್ ಶೀಟ್ ನಲ್ಲಿ ಪಾಲಿಸಿಗೆ ಸಂಬಂಧಿಸಿದ ಮೂಲಭೂತ ಮಾಹಿತಿಯನ್ನು ಸರಳ ಪದಗಳಲ್ಲಿ ವಿವರಣೆ ನೀಡುವ ಹಾಗಿರಬೇಕು.ಇದರ ಜೊತೆಗೆ ಎಲ್ಲ ಮಾಹಿತಿಯನ್ನು ಒಳಗೊಂಡಿರಬೇಕು.
ಇದನ್ನೂ ಓದಿ: KKRTC Bus: ಮಹಾರಾಷ್ಟ್ರಕ್ಕೆ ತೆರಳೋ ಎಲ್ಲಾ ಬಸ್ ಬಂದ್ – KKRTC ಯಿಂದ ಮಹತ್ವದ ನಿರ್ಧಾರ !!