LIC Policy: LIC ಪಾಲಿಸಿ ಮಾಡಿಸಿದವರಿಗೆ ಸಂತಸದ ಸುದ್ದಿ – ಸಾಲ ಸೌಲಭ್ಯದ ಕುರಿತು ಇದೀಗ ಬಂತು ಹೊಸ ಘೋಷಣೆ
Business news Good news for LIC policy holders New announcement about loan facility
LIC Policy: ಭವಿಷ್ಯದ ಒಳಿತಿಗಾಗಿ ಜನಸಾಮಾನ್ಯರು ಬ್ಯಾಂಕ್, ಅಂಚೆ ಕಚೇರಿ ಹಾಗೂ LIC(ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್) ಮೂಲಕ ವಿವಿಧ ಹೂಡಿಕೆ ಆಯ್ಕೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಂತೆಯೇ ಈ ಸಂಸ್ಥೆಗಳು ಜನರ ಅನುಕೂಲಕ್ಕಾಗಿ ಹಲವಾರು ಸ್ಕೀಮ್ ಗಳನ್ನು ಜಾರಿಗೊಳಿಸಿವೆ. ಅಂತೆಯೇ ಇದೀಗ LIC ಯಿಂದ(LIC Policy) ಸಾಲ ಸೌಲಭ್ಯದ ಕರಿತು ಗುಡ್ ನ್ಯೂಸ್ ಹೊರಬಿದ್ದಿದ್ದು, ಇದರಲ್ಲಿ ಹೂಡಿಕೆ ಮಾಡಿದವರು ಸುಲಭವಾಗಿ ಸಾಲ ಪಡೆಯಬಹುದಾಗಿದೆ.
ಹೌದು, ಹೂಡಿಕೆ ಎಂಬುದು ಮುಂದಿನ ದಿನಗಳಿಗೆ ಅನುಕೂಲವಾಗಲಿ, ಹಣದ ಅಗತ್ಯತೆ ಇದೆ ಎಂದಾಗ ನಮ್ಮದೇ ಒಂದು ಪುಟ್ಟ ಸೇವಿಂಗ್ಸ್ ಇರಲಿ ಎಂದು ನಾವು ಮಾಡವ ಇನ್ವೆಸ್ಟ್ಮೆಂಟ್ ಆಗಿದೆ. ಅದರಲ್ಲೂ ಬ್ಯಾಂಕ್, ಪೋಸ್ಟ್ ಆಫೀಸ್ ಹೂಡಿಕೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇಂದು LIC ಪಾಲಿಸಿಯಲ್ಲೇ ಹೂಡಿಕೆ ಮಾಡುವವರು ಹೆಚ್ಚು ಎನ್ನಬಹುದು. ಸದ್ಯ ಈ ಸಂಸ್ಥೆಯು ತನ್ನ ಗ್ರಾಹಕರಿಗೆ ಸಿಸಿ ಸುದ್ದಿ ನೀಡಿದ್ದು ಎಲ್‌ಐಸಿಯ ಸರಳ ಪಿಂಚಣಿ ಯೋಜನೆ (LIC Saral Pension Scheme) ಮೂಲಕ ನೀವು ಸುಲಭವಾಗಿ ಬೇಕಾದಾಗ ಸಾಲವನ್ನು ಕೂಡ ತೆಗೆದುಕೊಳ್ಳಬಹುದಾಗಿದೆ.
ಸಾಲ ಪಡೆಯುವುದು ಹೇಗೆ?
ಗಮನಾರ್ಹವಾದ ಆಯ್ಕೆಗಳಲ್ಲಿ ಒಂದು LIC ಸರಳ ಪಿಂಚಣಿ ಯೋಜನೆಯಾಗಿದೆ, ಇದು ಅಗತ್ಯವಿದ್ದಾಗ ಸಾಲವನ್ನು ಪಡೆಯಲು ನಮ್ಯತೆಯನ್ನು ನೀಡುತ್ತದೆ. ಗ್ರಾಹಕರು ಈ ಪಿಂಚಣಿಯನ್ನು ಆರಂಭಿಸಿ, ಹಣ ಕಟ್ಟಿದ ಆರು ತಿಂಗಳ ನಂತರ ಸಾಲಕ್ಕಾಗಿ ಅರ್ಜಿ ಹಾಕಿ, ಸಾಲ (Loan) ಸೌಲಭ್ಯ ಪಡೆಯಬಹುದಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ಈ ಪಾಲಿಸಿಯ ಮೂಲಕ ಡೆಪಾಸಿಟ್ ಮಾಡಿದ ಹಣವನ್ನು ಸಹ ಹಿಂದಕ್ಕೆ ತೆಗೆದು ಕೊಳ್ಳಬಹುದಾಗಿದೆ.
ದೇಶಾದ್ಯಂತ LIC ಹೂಡಿಕೆದಾರರು ಹೆಚ್ಚಿರುವುದರಿಂದ ಇದು ಅನೇಕರಿಗೆ ಸಹಾಯಕವಾಗಿದೆ. ಒಟ್ಟಿನಲ್ಲಿ LIC ಗ್ರಾಹಕರಿಗಂತೂ ಇದು ಉತ್ತಮ ಅವಕಾಶವಾಗಿದ್ದು ಅತ್ಯಂತ ಸುಲಭದಲ್ಲಿ ಸಾಲ ಪಡೆಯಬಹುದಾಗಿದೆ.
ಇದನ್ನೂ ಓದಿ: Madhu bangarappa: ರಾಜ್ಯದ ಎಲ್ಲಾ ಶಾಲಾ ಮಕ್ಕಳು, ಶಿಕ್ಷಕರಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಸಚಿವರಿಂದ ಘೋಷಣೆ