HSRP ನಂಬರ್ ಪ್ಲೇಟ್ ಹಾಕಿಸಲು ಎಷ್ಟು ಖರ್ಚಾಗುತ್ತದೆ ? – ದ್ವಿಚಕ್ರ, ಆಟೋ ರಿಕ್ಷಾ, ಕಾರು ಮತ್ತು ಹೆವೀ ವಾಹನಗಳ ಶುಲ್ಕದ ನಿಖರ ಮಾಹಿತಿ ಇಲ್ಲಿದೆ !
National news How much does HSRP number plate installation cost latest news
HSRP Plate Installation cost : ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅನ್ನು ಕೇಂದ್ರ ಸರ್ಕಾರವು 2018 ರಲ್ಲಿಯೇ ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು. ಆದರೆ ಅದು ಜಾರಿಗೆ ಬಂದಿರಲಿಲ್ಲ. ಆದರೆ ಆನಂತರ 2019 ನಂತರ ಬಂದ ಎಲ್ಲಾ ವಾಹನಗಳಿಗೆ ಶೋ ರೂಮ್ ನಲ್ಲಿಯೇ HSRP ನಂಬರ್ ಪ್ಲೇಟ್ ಹಾಕಿಯೇ ರಿಜಿಸ್ಟ್ರೇಷನ್ ಮಾಡಲು ಪ್ರಾರಂಭವಾಯಿತು. ಆದರೆ 2019 ರ ಎಪ್ರಿಲ್ 1 ರ ಹಿಂದಿನ ವಾಹನಗಳಲ್ಲಿ ಅದುವೇ ಹಳೆಯ ಸ್ಟಿಕರ್ ಮಾದರಿಯ ನಂಬರ್ ಪ್ಲೇಟ್ ಗಳಿದ್ದು, ಅವುಗಳನ್ನು ಬದಲಿಸಬೇಕೆಂದು ಕರ್ನಾಟಕ ಸರಕಾರವು ಕಡ್ಡಾಯವಾಗಿ ಎಚ್ಎಸ್ಆರ್ಪಿ ಅಳವಡಿಕೆ ಮಾಡಿಸಲು ಇದೀಗ ಸೂಚಿಸಿದೆ. ಇದೀಗ ಎಚ್ಎಸ್ಆರ್ಪಿ ಅಳವಡಿಸಲು ಡೆಡ್ ಲೈನ್ ನಿಗದಿಯಾಗಿದ್ದು ಇನ್ನು ಕೆಲವೇ ದಿನಗಳಲ್ಲಿ HSRP ನಂಬರ್ ಪ್ಲೇಟ್ ಹಾಕದೆ ಹೋದರೆ ಭಾರಿ ದಂಡ ತರಬೇಕಾದ ಸನ್ನಿವೇಶ ಎದುರಾಗಿದೆ. HSRP ಪ್ಲೇಟ್ ಹಾಕಲು ಎಷ್ಟು ಖರ್ಚಾಗುತ್ತದೆ(HSRP Plate Installation cost )ಎಂಬ ಬಗ್ಗೆ ಇಲ್ಲಿದೆ ಮಾಹಿತಿ. (Fees for HSRP)
ಯಾವಾಗ ಡೆಡ್ ಲೈನ್ ?
ಬರುವ ನವೆಂಬರ್ 17 ನೇ ತಾರೀಕಿನ ಮೊದಲು ಎಲ್ಲಾ ವಾಹನಗಳಲ್ಲಿ ಹೆಚ್ ಎಸ್ ಆರ್ ಪಿ ಸ್ಟ್ಯಾಂಪ್ ನಂಬರ್ ಪ್ಲೇಟ್ ಇರತಕ್ಕದ್ದು.
HSRP ನಂಬರ್ ಪ್ಲೇಟ್ ಅಳವಡಿಸಲು ಎಷ್ಟು ಖರ್ಚಾಗುತ್ತದೆ ಎನ್ನುವ ಸಾಮಾನ್ಯ ಪ್ರಶ್ನೆ ವಾಹನ ಮಾಲೀಕರದ್ದು. ಅದಕ್ಕೆ ನಿಖರ ಉತ್ತರ ಇಲ್ಲಿದೆ. ಆಯಾ ವಾಹನಗಳ ಆಧಾರದ ಮೇಲೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಶುಲ್ಕ ನಿಗದಿಯಾಗಿದೆ. ಒಟ್ಟಾರೆ ನಾಲ್ಕು ವಿಧದ ವರ್ಗೀಕರಣ ಮಾಡಲಾಗಿದ್ದು ದ್ವಿಚಕ್ರ ವಾಹನಗಳು ಮೂರು ಚಕ್ರದ ವಾಹನಗಳು, ನಾಲ್ಕು ಚಕ್ರದ ವಾಹನಗಳು ಮತ್ತು ಬಸ್ಸು, ಟ್ರಕ್ಕು ಮುಂತಾದ ಕಮರ್ಷಿಯಲ್ ವಾಹನಗಳು ಎಂದು ವರ್ಗೀಕೃತ ಆಗಿದ್ದು, ಪ್ರತಿ ಕೆಟಗರಿಯಲ್ಲಿಯೂ ಇಂಪೋರ್ಟೆಡ್ ವಾಹನಗಳಿಗೆ ಮತ್ತೊಂದು ವಿಶೇಷ ಫೀಸ್ ಸ್ಲಾಬ್ ಒದಗಿಸಲಾಗಿದೆ.
HSRP ಪ್ಲೇಟ್ ಹಾಕಲು ಫೀಸ್ ಎಷ್ಟು ?
ದ್ವಿಚಕ್ರ ವಾಹನಗಳು- ಸಾಮಾನ್ಯ: 320 ರೂ. ರಿಂದ 380 ರೂಪಾಯಿ
ದ್ವಿಚಕ್ರ ವಾಹನಗಳು (ಇಂಪೋರ್ಟ್ಡ್ ) : 400 ರೂ. ರಿಂದ 500 ರೂಪಾಯಿ
ಮೂರು ಚಕ್ರದ ವಾಹನಗಳು: 350 ರೂ. ರಿಂದ 450 ರೂಪಾಯಿ
ನಾಲ್ಕು ಚಕ್ರದ ವಾಹನಗಳು- ಸಾಮಾನ್ಯ: 590 ರೂ. ರಿಂದ 700 ರೂಪಾಯಿ
ನಾಲ್ಕು ವಾಹನಗಳು (ಇಂಪೋರ್ಟ್ಡ್ ) : 700 ರೂ. ರಿಂದ 860 ರೂಪಾಯಿ
ಕಮರ್ಷಿಯಲ್ ವಾಹನಗಳು- ಸಾಮಾನ್ಯ: 600 ರೂ. ರಿಂದ 800 ರೂಪಾಯಿ
ಮೇಲೆ ತೋರಿಸಿದ ಫೀಸ್ ನ ಮೊತ್ತದ ಜತೆ, ಸಣ್ಣ ಮೊತ್ತದ ಟ್ಯಾಕ್ಸ್ ಕೂಡಾ ಸೇರಿಕೊಳ್ಳಬಹುದು. ಫೀಸ್ ಪೇಮೆಂಟ್ ಅನ್ನು ಆನ್ ಲೈನ್ ನಲ್ಲಿಯೇ ಮಾಡತಕ್ಕದ್ದು. ಪೇಮೆಂಟ್ ಮಾಡುವ ಸಂದರ್ಭ ಮೊಬೈಲ್ಗೆ ಓಟಿಪಿ ಬರುತ್ತದೆ. ಈ ಲಿಂಕ್ ಮೂಲಕ ನೀವು hsrp ನಂಬರ್ ಪ್ಲೇಟ್ ಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. https://www.siam.in/hrspsubmit.aspx?mpgid=91&pgidtrail=91
ಇದನ್ನೂ ಓದಿ: ಕೇರಳ ಬಾಂಬ್ ಸ್ಫೋಟ- ದಕ್ಷಿಣ ಕನ್ನಡದಾದ್ಯಂತ ಹೈ ಅಲರ್ಟ್ ಘೋಷಣೆ !!
Begalore urban
Vidyaranyapura bengalore 560097
shashi12kumar45@gmail.com