Plane crash: ಅಮೆಜಾನ್ ಅರಣ್ಯದಲ್ಲಿ ವಿಮಾನ ಭೀಕರ ಪತನ! ಮಗು ಸೇರಿ ಹನ್ನೆರಡು ಮಂದಿಯ ದಾರುಣ ಸಾವು!!!

International news plane crash in Brazil Amazon forest 10 killed latest news

Plane Crash: ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ (Brazil Amazon Forest)ಸಣ್ಣ ವಿಮಾನವೊಂದು ಪತನಗೊಂಡಿದ್ದು,(Plane Crash)ಈ ಅವಘಡದಲ್ಲಿ ವಿಮಾನದಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ (Death)ಎಂದು ವರದಿಯಾಗಿದೆ.

 

Image Source: Media.bnn.network

ಬ್ರೆಜಿಲ್ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದ( Rio Branco)ಮುಖ್ಯ ವಿಮಾನ ನಿಲ್ದಾಣದ ಬಳಿ ವಿಮಾನವು ಪತನಗೊಂಡಿದೆ ಎಂದು ಎಕ್ರೆ ಗವರ್ನರ್ ಗ್ಲಾಕ್ಸನ್ ಕ್ಯಾಮೆಲಿ ಅವರ ಪತ್ರಿಕಾ ಕಚೇರಿ ಮಾಹಿತಿ ನೀಡಿದೆ. ಈ ದುರ್ಘಟನೆ ವೇಳೆ 12 ಮಂದಿ ಅಸುನೀಗಿದ್ದು,ಇವರಲ್ಲಿ ಇಬ್ಬರು ಪೈಲಟ್‌ಗಳು ಸೇರಿದ್ದಾರೆ. ವಿಮಾನದಲ್ಲಿ ಶಿಶು ಒಳಗೊಂಡು 10 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ.

ಸಿಂಗಲ್ – ಎಂಜಿನ್ ಸೆಸ್ನಾ ಕಾರವಾನ್ ಟೇಕ್ ಆಫ್ ಆದ ಕೊಂಚ ಸಮಯದ ಬಳಿಕ ರಿಯೊ ಬ್ರಾಂಕೊದ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿರುವ ಕುರಿತು ಎಕ್ರೆ ರಾಜ್ಯ ಸರ್ಕಾರ ಘೋಷಿಸಿದೆ. ವಿಮಾನ ಪತನಗೊಂಡ ಸ್ಥಳದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಂಡುಬಂದಿದೆ ಎನ್ನಲಾಗಿದೆ. ವಿಮಾನ ಅಪಘಾತದ ಬಳಿಕ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾಡಿನಲ್ಲಿ ಬೆಂಕಿ ಹೊತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

 

ಇದನ್ನು ಓದಿ: Beltangady: ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಮತ್ತೊಂದು ನಾನ್ ಬೈಲೇಬಲ್ ಕೇಸ್ !

Leave A Reply

Your email address will not be published.