Free Ration Update: ಉಚಿತ ಪಡಿತರದ ಲಾಭ ಪಡೆಯುವವರಿಗೆ ಸರಕಾರದಿಂದ ಮಹತ್ವದ ಘೋಷಣೆ! ಇನ್ನು ಈ ಜನರಿಗೆ ಸಿಗಲ್ಲ ಉಚಿತ ರೇಷನ್‌!!!

Free ration update from govt those who receiving free ration latest news

Free ration update: ಉಚಿತ ಪಡಿತರದ ಲಾಭ ಪಡೆಯುವವರಿಗೆ ಈ ಸುದ್ದಿ. ಉಚಿತ ಪಡಿತರ ಪಡೆಯುವವರಿಗೆ ಸರಕಾರ ಮತ್ತೊಂದು ಕಟ್ಟು ನಿಟ್ಟಿನ ಕ್ರಮಕೈಗೊಂಡಿದೆ. ಹಾಗಾಗಿ ಇನ್ನು ಮುಂದೆ ಉಚಿತ ಪಡಿತರ( Free ration update) ಪಡೆಯುವ ಲಕ್ಷಾಂತರ ಜನರು ಉಚಿತ ಪಡಿತರದಿಂದ ವಂಚಿತರಾಗಲಿದ್ದಾರೆ. ಇದಕ್ಕೆ ಕಾರಣವನ್ನು ಸರಕಾರ ನೀಡಿದೆ.

ಅನರ್ಹ ಪಡಿತರ ಚೀಟಿದಾರರನ್ನು ಈ ಯೋಜನೆಯಿಂದ ತಕ್ಷಣವೇ ತೆಗೆದುಹಾಕಲಾಗುತ್ತಿದೆ ಎಂದು ಸರಕಾರ ಹೇಳಿದ್ದು, ಉಚಿತರ ಪಡಿತರ ಇರುವುದು ಕೇವಲ ಬಡವರು, ನಿರ್ಗತಿಕರಿಗೆ ಮಾತ್ರ, ಎಲ್ಲಾ ವರ್ಗದವರಿಗೆ ಅಲ್ಲ ಎಂದು ಸರಕಾರ ಒತ್ತಿ ಹೇಳಿದೆ. ಉಚಿತ ಪಡಿತರ ಪಡೆಯುವ ಲಕ್ಷಂತರ ಜನರನ್ನು ಸರಕಾರ ಗುರುತು ಮಾಡಿದ್ದು, ಇನ್ನು ಮುಂದೆ ಇದರಲ್ಲಿ ಇರುವ ಅನರ್ಹ ಪಡಿತರದಾರರನ್ನು ತೆಗೆದುಹಾಕಲಿದೆ.

ಸುಮಾರು 10 ಲಕ್ಷ ಅನರ್ಹ ಕಾರ್ಡುದಾರರನ್ನು ಉತ್ತರಪ್ರದೇಶ, ಬಿಹಾರದಲ್ಲಿ ಗುರುತಿಸಲಾಗಿದೆ. ಇನ್ನೂ ದೊರೆತ ಮಾಹಿತಿ ಪ್ರಕಾರ ಎಲ್ಲಾ ಅನರ್ಹ ಪಡಿತರ ಚೀಟಿದಾರರನ್ನು ಸರಕಾರ ರದ್ದುಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ಯಾರೆಲ್ಲ ಆದಾಯ ತೆರಿಗೆ ಪಾವತಿಸುತ್ತಾರೋ, ಅಥವಾ ಇತರ ಕಾರ್ಡ್‌ದಾರರು ಉಚಿತ ಪಡಿತರ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಎನ್‌ಎಫ್‌ಎಸ್‌ಎ ತಿಳಿಸಿದೆ. ಹತ್ತು ಬಿಘಾಗಳಿಗಿಂತ ಹೆಚ್ಚು ಭೂಮಿ ಹೊಂದಿರುವವರು ಕೂಡಾ ಉಚಿತ ಪಡಿತರದ ಪ್ರಯೋಜನವನ್ನು ಪಡೆಯುವುದಿಲ್ಲ ಎಂದು ಸರಕಾರ ಮಾಹಿತಿ ನೀಡಿದೆ.

ಉತ್ತಮ ವ್ಯಾಪಾರ ಹೊಂದಿರುವವರು, ಅಂದರೆ ವರ್ಷಕ್ಕೆ ಮೂರು ಲಕ್ಷಕ್ಕಿಂತಲೂ ಹೆಚ್ಚು ಆದಾಯ ಗಳಿಸುತ್ತಿರುವವರು ಕೂಡಾ ಅನರ್ಹ ಪಡಿತರ ಚೀಟಿದಾರರಲ್ಲಿ ಬರುತ್ತಾರೆ ಎಂದು ಸರಕಾರ ಹೇಳಿದೆ.

ಇದನ್ನೂ ಓದಿ: KSRTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್ -ಕುಟುಂಬ ಕಲ್ಯಾಣ ಯೋಜನೆ ಪರಿಹಾರ 233 % ಹೆಚ್ಚಳ, 10 ಲಕ್ಷಕ್ಕೆ ಏರಿದ ಮೊತ್ತ !

Leave A Reply

Your email address will not be published.