Colour: ಸಂತೋಷ, ಸಮೃದ್ಧಿ ಬೇಕು ಅಂದ್ರೆ ಇದೊಂದು ಬಣ್ಣವನ್ನು ಬಳಸಿ ಸಾಕು !!

Colour: ಪ್ರತಿಯೊಬ್ಬರಿಗೂ ಒಂದೊಂದು ಬಣ್ಣ ಇಷ್ಟವಿರುವುದು ಸಹಜ. ಕೆಲವು ಬಣ್ಣಗಳು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಯಾವ್ಯಾವ ಬಣ್ಣ ಏನೇನು ವಿಶೇಷತೆ ಹೊಂದಿದೆ ಗೊತ್ತಾ?

# ಈ ಬಣ್ಣವು ಮಾನಸಿಕ ಶಕ್ತಿಯನ್ನು ನೀಡುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ, ಕಿತ್ತಳೆ ಬಣ್ಣವನ್ನು ನಾಚಿಕೆಯ ಬಣ್ಣ ಎನ್ನಲಾಗುತ್ತದೆ. ಕಿತ್ತಳೆ ಬಣ್ಣ ಸಮಾಜವಾದದ ಪ್ರತೀಕವಾಗಿದ್ದು, ಹೀಗಾಗಿ, ಸಾಮಾನ್ಯವಾಗಿ ಕುಟುಂಬ ಸದಸ್ಯರೊಂದಿಗೆ ಕುಳಿತು ಮಾತನಾಡುವ ಕೋಣೆಯಲ್ಲಿ ಕಿತ್ತಳೆ ಬಣ್ಣವನ್ನು ಬಳಸಬೇಕು. ಈ ಬಣ್ಣವು ಜೀವನದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಮಾನಸಿಕ ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

# ಈ ಬಣ್ಣವು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ, ಕೆಂಪು ಬಣ್ಣವನ್ನು ಇತರ ಯಾವುದೇ ಬಣ್ಣಗಳಿಗಿಂತ ಹೆಚ್ಚು ಶಕ್ತಿಯುತ ಎಂದು ನಂಬಲಾಗಿದೆ. ಈ ಬಣ್ಣವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಬಣ್ಣವನ್ನು ಜಿಮ್ನಾಷಿಯಂ ಇಲ್ಲವೇ ಡ್ರಾಯಿಂಗ್ ಕೋಣೆಯಲ್ಲಿ ಬಳಸಬಹುದು. ಆದರೆ ಇದನ್ನು ಬೆಡ್ ರೂಂನಲ್ಲಿ ಅಪ್ಪಿ ತಪ್ಪಿಯೂ ಬಳಸಬೇಡಿ.

# ಈ ಬಣ್ಣವು ಜೀವನದಲ್ಲಿ ತೊಡಕುಗಳನ್ನು ಹೆಚ್ಚಿಸುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪು ಬಣ್ಣವು ಜೀವನದಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ, ಮನೆಯ ಕೋಣೆಗಳಲ್ಲಿ ಕಪ್ಪು ಬಣ್ಣ ಬಳಸುವುದು ಒಳ್ಳೆಯದಲ್ಲ. ಈ ಬಣ್ಣವು ತನ್ನೊಳಗಿನ ಎಲ್ಲಾ ಬಣ್ಣಗಳನ್ನು ಹೀರಿಕೊಳ್ಳುತ್ತದೆ ಎನ್ನಲಾಗುತ್ತದೆ. ಹೀಗಾಗಿ, ಜನರು ಕೆಲವು ರೀತಿಯ ಮಾನಸಿಕ ಗೊಂದಲ ಹಾಗೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

#ಈ ಬಣ್ಣವು ಜೀವನದಲ್ಲಿ ಶಾಂತಿಯನ್ನು ತರುತ್ತದೆ
ಹಸಿರು ಬಣ್ಣವು ಶಾಂತಿಯ ಬಣ್ಣವಾಗಿದ್ದು, ಸದ್ಭಾವನೆಯ ಬಣ್ಣ ಎಂದೂ ಪರಿಗಣಿಸಲಾಗುತ್ತದೆ. ಮಲಗುವ ಕೋಣೆಯಲ್ಲಿ ಈ ಬಣ್ಣವನ್ನು ಬಳಕೆ ಮಾಡುವುದರಿಂದ ಜೀವನದಲ್ಲಿ ಯಾವುದೇ ಒತ್ತಡ ಉಂಟಾಗದು. ಈ ಬಣ್ಣವನ್ನು ಬಳಕೆ ಮಾಡುವ ಜನರು ತಮ್ಮ ಜೀವನದಲ್ಲಿ ಸಂತೋಷದ ಜೊತೆಗೆ ಶಾಂತಿ ಮತ್ತು ಸದ್ಭಾವನೆಯನ್ನು ಹೊಂದುತ್ತಾರೆ.

# ಈ ಬಣ್ಣವನ್ನು ಧರಿಸಿರುವ ಜನರು ಪ್ರಾಮಾಣಿಕರು
ಬಿಳಿ ಬಣ್ಣವು ಶುದ್ಧತೆ ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದ್ದು, ಇದರ ಬಳಕೆಯಿಂದ ಮನಸ್ಸು ಶಾಂತವಾಗುತ್ತದೆ. ಇದನ್ನು ಯಾವುದೇ ಕೋಣೆಯಲ್ಲಿ ಬಳಸಬಹುದು.

 

ಇದನ್ನು ಓದಿ: Life Partner post: ಹುಡುಗರೇ….ನಿಮಗೇನಾದ್ರೂ ರೀಲ್ಸ್ ಮಾಡೋ ಹುಚ್ಚುಂಟಾ ? ಹಾಗಿದ್ರೆ ಮದ್ವೆಯಾಗಲು ಸೂಪರ್ ಫಿಗರಿನಿಂದ ಬಂಪರ್ ಆಫರ್ ಉಂಟು ಗೊತ್ತುಂಟಾ ?!!

Leave A Reply

Your email address will not be published.