Baba budan Darga: ದರ್ಗಾದ ಶಾಖಾದ್ರಿ ನಿವಾಸದಲ್ಲಿ ಪತ್ತೆಯಾಯ್ತು ಜಿಂಕೆ, ಚಿರತೆ ಚರ್ಮ ಪತ್ತೆ!!!
tiger claw case deer and leopard skin found at baba budan darga latest news
Baba budan Darga: ಹುಲಿ ಉಗುರು ಎಲ್ಲಾ ಕಡೆ ಸದ್ದು ಮಾಡುತ್ತಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡಾ ಇದು ಸಂಚಲನ ಮೂಡಿಸಿದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದ ಮೇರೆಗೆ ಕಳಸದ ಉಪವಲಯ ಅರಣ್ಯಾಧಿಕಾರಿ ದರ್ಶನ್ ಬಂಧನ ಆದ ಕೂಡಲೇ ಬಾಬಾ ಬುಡನ್‌ಗಿರಿ ದರ್ಗಾದ( Baba budan Darga) ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.
ಹುಲಿ ಚರ್ಮದ ಮೇಲೆ ಕುಳಿತ ಆರೋಪ ಹೊತ್ತಿರುವ ಗೌಸ್ ಮೋಹಿದೀನ್ ಶಾಖಾದ್ರಿ ಮನೆ ತಪಾಸಣೆ ಸಂದರ್ಭ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಎಸ್‌ಎಫ್ ಎಲ್ ವರದಿಗೆ ಕಳುಹಿಸಲಾಗಿದೆ.
ಶಾಖಾದ್ರಿ ಹುಲಿ ಚರ್ಮದ ಮೇಲೆ ಕುಳಿತಿರುವ ಭಾವಚಿತ್ರದೊಂದಿಗೆ ನೀಡಿದ ದೂರು ಆಧರಿಸಿ ಈ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರಿನಿಂದ ಬಸ್ಸಿನಲ್ಲಿ ಬೀಗದ ಕೀ ತರಿಸಿದ್ದು, ಶಾಖಾದ್ರಿ ಅನುಪಸ್ಥಿತಿಯಲ್ಲಿ ಅವರ ಮನೆ ತಪಾಸಣೆ ಮಾಡಲಾಯಿತು. ಶಾಖಾದ್ರಿ ಮನೆಯಲ್ಲಿ ವನ್ಯಜೀವಿಗಳ ಚರ್ಮ ಇದೆ ಎಂದು ಖಚಿತ ಮಾಹಿತಿ ಇದ್ದ ಕಾರಣ ತಪಾಸಣೆ ಮಾಡಲು ಬಂದಿದ್ದು, ಶಾಖಾದ್ರಿ ಪರಸ್ಥಳದಲ್ಲಿದ್ದು, ದೂರವಾಣಿ ಮೂಲಕ ಸಂಪರ್ಕ ಮಾಡಿ ಸಂಬಂಧಿಕರಿಂದ ಮನೆ ಕೀ ತರಿಸಿ, ಅವರ ಸಮ್ಮುಖದಲ್ಲಿ ತಪಾಸಣೆ ಮಾಡುವಾಗ ಒಂದು ಚಿರತೆ ಚರ್ಮ, ಮತ್ತೊಂದು ಜಿಂಕೆ ಚರ್ಮ ಸಿಕ್ಕಿದೆ. ಇದನ್ನು ವಶಕ್ಕೆ ಪಡೆದ ವನ್ಯಜೀವಿ ಕಾಯ್ದೆ ಉಲ್ಲಂಘನೆ ಪ್ರಕರಣವನ್ನು ದಾಖಲಿಸಲಾಗುವುದು, ತನಿಖೆ ಮುಂದುವರಿಸುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Rape on Dog: ಗರ್ಭಿಣಿ ನಾಯಿಯ ಅತ್ಯಾಚಾರ ಮಾಡಿದ ಕಾಮುಕ; ಎಲ್ಲಾ ಮುಗಿದ ಮೇಲೆ 3ನೇ ಮಹಡಿಯಿಂದ ಎಸೆದ…!