Obscene Post: ಅಶ್ಲೀಲ ಪೋಸ್ಟ್‌, ಪೋಲಿ ಚಿತ್ರಗಳ ಕುರಿತು ಹೈಕೋರ್ಟ್‌ನಿಂದ ಮಹತ್ವದ ತೀರ್ಪು!!

national news liking obscene post on social media no crime allahabad high court verdict

Obscene Post: ನೀವೇನಾದರೂ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಲಿ ಹಾಗೂ ಅಶ್ಲೀಲ ಫೋಟೋ, ವೀಡಿಯೋಗಳನ್ನು (Obscene Post) ಅಪ್‌ಲೋಡ್‌ ಮಾಡುವುದನ್ನು ನಿಷೇಧಿಸಬೇಕು ಎನ್ನುವ ಆಗ್ರಹ ಎಲ್ಲಾ ಕಡೆ ಕೇಳಿ ಬರುತ್ತದೆ. ಇದರ ಜೊತೆ ಜೊತೆಗೆ ” ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವೀಡಿಯೋಗಳನ್ನು ಲೈಕ್‌ ಮಾಡುವುದು ತಪ್ಪಲ್ಲʼ ಎಂದು ಅಲಹಾಬಾದ್‌ ಹೈಕೋರ್ಟ್‌ (Allahabad Court) ಮಹತ್ವದ ಆದೇಶ ನೀಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಆದ ಫೋಟೋ ಹಾಗೂ ವೀಡಿಯೋಗೆ ಲೈಕ್‌ ಮಾಡಿದರೆ ಏನೂ ತೊಂದರೆ ಇಲ್ಲ ಎಂದು ಹೇಳಿದೆ. ಫೇಸ್‌ಬುಕ್‌ನಲ್ಲಿ ವೀಡಿಯೋ ಅಥವಾ ಫೋಟೋವನ್ನು ಶೇರ್‌ ಮಾಡುವುದು, ಎಕ್ಸ್‌ ಜಾಲತಾಣದಲ್ಲಿ ರಿಪೋಸ್ಟ್‌ ಮಾಡುವುದು ಅಪರಾಧ ಎಂದು ಅಲಹಾಬಾದ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅಶ್ಲೀಲ ಪೋಸ್ಟ್‌ ಶೇರ್‌ ಮಾಡಿದರೆ ಸೆಕ್ಷನ್‌ 67( ಮಾಹಿತಿ ತಂತ್ರಜ್ಞಾನ ಕಾಯ್ದೆ) ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೋರ್ಟ್‌ ಸ್ಪಷ್ಟ ಪಡಿಸಿದೆ.

ಮೊಹಮ್ಮದ್‌ ಇಮ್ರಾನ್‌ ಕಾಜ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದ್ದ ಅಶ್ಲೀಲ ವೀಡಿಯೋ ಅಥವಾ ಪೋಸ್ಟ್‌ ಗೆ ಲೈಕ್‌ ಕೊಟ್ಟಿದ್ದರು. ಇದೇ ಕಾರಣಕ್ಕೆ ಅವರ ಮೇಲೆ ಕ್ರಿಮಿನಲ್ ಕೇಸ್‌ ದಾಖಲಾಗಿತು. ಅದಕ್ಕೆ ಹೈಕೋರ್ಟ್‌ ಐಟಿ ಕಾಯ್ದೆಯ ಸೆಕ್ಷನ್‌ 67 ಪ್ರಕಾರ ಯಾವುದೇ ಅಸಮಂಜಸ, ಅಶ್ಲೀಲ ಪೋಸ್ಟನ್ನು ಶೇರ್‌ ಮಾಡುವುದು ಅಪರಾಧ, ಆದರೆ ಲೈಕ್‌ ಮಾಡುವುದಲ್ಲ ಎಂದು ಹೇಳಿದೆ.

 

ಇದನ್ನು ಓದಿ: Karnataka Jobs: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರೋರಿಗೆ ಬಿಗ್ ಅಪ್ಡೇಟ್ ಕೊಟ್ಟ ಡಾ. ಪರಮೇಶ್ವರ್- ಸದ್ಯದಲ್ಲೇ ಆಗಲಿದೆ ಲಕ್ಷ, ಲಕ್ಷ ಹುದ್ದೆಗಳ ಭರ್ತಿ !!

Leave A Reply

Your email address will not be published.