Karnataka: ರಾಜ್ಯೋತ್ಸವ ಹೊತ್ತಲ್ಲಿ ಕರ್ನಾಟಕಕ್ಕೆ ಹೊಸ ಹೆಸರು ನಾಮಕರಣ ?! ಅರೆ ಏನಿದು ಶಾಕಿಂಗ್ ನ್ಯೂಸ್ ?

Karnataka: ರಾಜ್ಯೋತ್ಸವ ಹೊತ್ತಲ್ಲಿ ಕರ್ನಾಟಕಕ್ಕೆ (Karnataka) ಹೊಸ ಹೆಸರು ನಾಮಕರಣದ ಬಗ್ಗೆ ಸುದ್ದಿ ಹಬ್ಬಿದೆ. ಕರ್ನಾಟಕಕ್ಕೆ ‘ಬಸವನಾಡು’ ಹೆಸರು ನಾಮಕರಣ ವಿಷಯ ಕುರಿತು ನಡೆಯುತ್ತಿರುವ ಚರ್ಚೆಗೆ ಅವರು ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದು, ಜಗತ್ತಿಗೆ ಮೊದಲ ಪಾರ್ಲಿಮೆಂಟ್‌ ಕೊಟ್ಟ ವ್ಯಕ್ತಿ ಬಸವಣ್ಣ. ಎಲ್ಲ ಜಾತಿ, ಭಾಷೆಯವರಿಗೆ ಸಾಮಾಜಿಕ ಸಮಾನತೆ ಕೊಟ್ಟರು. ಬಸವ ಜನ್ಮಭೂಮಿ ವಿಜಯಪುರಕ್ಕೆ ಬಸವೇಶ್ವರ ನಾಮಕರಣ ಪ್ರಕ್ರಿಯೆ ಶುರುವಾಗಿದೆ. ಕರ್ನಾಟಕಕ್ಕೆ ಬಸವನಾಡು ಅಂತ ಹೆಸರಿಟ್ಟರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಂಗ್ಲೆಂಡ್‌ನಲ್ಲಿ ಬಸವ ಪ್ರತಿಮೆ ನಿರ್ಮಾಣವಾದ ನಂತರ ಜಾಗತಿಕ ಮಟ್ಟದಲ್ಲಿ ಅನುಭವ ಮಂಟಪದ ಬಗ್ಗೆ ಚರ್ಚೆ ಆಯಿತು. ಕರ್ನಾಟಕಕ್ಕೆ ಬಸವನಾಡು ಅಂತ ಹೆಸರಿಟ್ಟರೆ ಬಸವ ವಿಚಾರ ಜಗತ್ತಿಗೆ ಇನ್ನಷ್ಟು ಪ್ರಚಾರ ಆಗಲಿದೆ. ಬಸವ ತತ್ವ ಆಚರಣೆ ಮಾಡಿದ್ದಲ್ಲಿ ಕರ್ನಾಟಕ ಯಾವತ್ತಿಗೋ ಬಸವ ಕರ್ನಾಟಕ ಆಗುತ್ತಿತ್ತು. ಮಠಾಧೀಶರು, ಜನರಿಗೆ ಬಸವ ತತ್ವ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಹಾಗಾಗಿ, ಬಸವಣ್ಣ ಅವರನ್ನು ಉತ್ತರ ಕರ್ನಾಟಕದ ಗಡಿ ಬಿಟ್ಟು ಆಚೆಗೆ ತೆಗೆದುಕೊಂಡು ಹೋಗಲು ಆಗಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದ ಜನರು ಶಿವಾಜಿಯನ್ನು ಸಾಂಸ್ಕೃತಿಕ ನಾಯಕ ಅಂತ ಒಪ್ಪಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿವೇಕಾನಂದ, ಪಂಜಾಬ್‌ನಲ್ಲಿ ಗುರುನಾನಕರು ಸಾಂಸ್ಕೃತಿಕ ಗುರು. ಬಸವಣ್ಣನವರಿಗೆ ಯಾವಾಗಲೋ ಆ ಗೌರವ ಸಿಗಬೇಕಿತ್ತು. ಈಗ ಚರ್ಚೆ ಆಗುತ್ತಿದೆ, ಒಳ್ಳೆಯದು. ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಲಿ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

 

ಇದನ್ನು ಓದಿ: Winter Skin care: ಚಳಿಗಾಲದಲ್ಲಿ ಚರ್ಮವನ್ನು ಹೀಗೆ ಆರೈಕೆ ಮಾಡಿ- ಸದಾ ಫಳ ಫಳ ಹೊಳೆಯುವಂತೆ ಕಾಪಾಡಿ !!

Leave A Reply

Your email address will not be published.