Free Electricity: ಇನ್ಮುಂದೆ ಈ ಜಿಲ್ಲೆಯ ಜನರಿಗಿಲ್ಲ ಗೃಹಜ್ಯೋತಿಯ ಫ್ರೀ ಕರೆಂಟ್- ಮಹತ್ವದ ಆದೇಶ ಹೊರಡಿಸಿದ ಸರ್ಕಾರ !

Free Electricity: ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಉಚಿತ ವಿದ್ಯುತ್ (Free Electricity) ಯೋಜನೆಗೆ ಅರ್ಜಿ ಸಲ್ಲಿಕೆಯೂ ಆಗಿದೆ. ಜನರಿಗೆ ಇದರ ಪ್ರಯೋಜನವೂ ಸಿಗುತ್ತಿದೆ.

ಈ ಮಧ್ಯೆ ಇದೀಗ ಸರ್ಕಾರದಿಂದ ಉಚಿತ ವಿದ್ಯುತ್ (free electricity) ಪ್ರಯೋಜನವನ್ನು ಪಡೆದುಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರೆಚುವಂತಹ ಕೆಲಸ ಮಾಡುವವರಿಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಒಂದನ್ನು ಹೊರಡಿಸಿದೆ. ಇನ್ಮುಂದೆ ಈ ಜಿಲ್ಲೆಯ ಜನರಿಗಿಲ್ಲ ಉಚಿತ ಫ್ರೀ ಕರೆಂಟ್ . ಅಷ್ಟೇ ಅಲ್ಲ ವಂಚನೆ ಮಾಡಿದವರ ಮನೆಯ ವಿದ್ಯುತ್ ಸಂಪರ್ಕವನ್ನು ಕೂಡ ಕಡಿತಗೊಳಿಸಲಾಗುವುದು.

ಗೃಹಜ್ಯೋತಿಯ ಲಾಭ ಪಡೆದುಕೊಳ್ಳಲು ಉಚಿತ ವಿದ್ಯುತ್ ಗಾಗಿ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಹಳೆಯ ಬಾಕಿ ಪಾವತಿ ಮಾಡಬೇಕು ಎನ್ನುವ ನಿಯಮವನ್ನು ಮಾತ್ರ ಪಾಲಿಸಿಲ್ಲ. ಇದರಿಂದಾಗಿ ವಿದ್ಯುತ್ ನಿಗಮಕ್ಕೆ ಹೆಚ್ಚು ನಷ್ಟವಾಗಿದೆ. ಈ ಕಾರಣಕ್ಕೆ ಇನ್ನು ಮುಂದೆ ಯಾರು ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೋ ಅಂತವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ. ಬಾಕಿ ವಿದ್ಯುತ್ ಬಿಲ್ ಉಳಿಸಿಕೊಂಡವರ ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಕೂಡ ತಡೆಹಿಡಿಯಲಾಗುತ್ತದೆ.

ಸರ್ಕಾರದ ಮಾಹಿತಿಯ ಪ್ರಕಾರ ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸಾಕಷ್ಟು ವಿದ್ಯುತ್‌ ಬಿಲ್ ಪಾವತಿ (old bill payment) ಮಾಡುವುದು ಬಾಕಿ ಉಳಿದಿದೆ. ಹುಬ್ಬಳ್ಳಿ ವಿದ್ಯುತ್ ನಿಗಮದ ಅಡಿಯಲ್ಲಿ ಉತ್ತರ ಕನ್ನಡ ಭಾಗದಿಂದ ಕೋಟ್ಯಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿ ಆಗಬೇಕು.

 

ಇದನ್ನು ಓದಿ: ECI: ಚುನಾವಣಾ ಆಯೋಗದಿಂದ ಲೋಕಸಮರಕ್ಕೆ ಸಿದ್ದತೆ – ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ?!

Leave A Reply

Your email address will not be published.