RBI New Rules : ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಭರ್ಜರಿ ಗುಡ್ ನ್ಯೂಸ್ – RBI ನಿಂದ ಬಂತು ಹೊಸ ರೂಲ್ಸ್
Business news good news for bank Loan borrowers New rules have come from RBI
RBI New Rules:ಸಾಲಗಾರರನ್ನು ಬ್ಯಾಂಕ್ ಗಳ ಸಾಲ(Bank Loan)ವಸೂಲಿ (Loan Recovery)ಕಿರುಕುಳವನ್ನೂ ತಪ್ಪಿಸಲು ಆರ್‌ಬಿಐ(RBI)ಮುಂದಾಗಿದ್ದು, ಬೆಳಗ್ಗೆ 8 ಗಂಟೆಯ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಸಾಲಗಾರರಿಗೆ ದೂರವಾಣಿ ಕರೆ ಮಾಡುವುದನ್ನು ತಡೆಯಲು ತೀರ್ಮಾನ ಕೈಗೊಂಡಿದೆ(RBI New Rules).
ಬ್ಯಾಂಕ್(Bank)ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪ್ರಮುಖ ಬ್ಯಾಂಕಿಂಗ್ ಕೆಲಸಗಳನ್ನು ಹೊರಗುತ್ತಿಗೆ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ. ಕೆವೈಸಿ (KYC)ನಿಯಮಗಳ ಅನುಸರಣೆ, ಸಾಲ ಮಂಜೂರು(Loan Sanction)ನೀತಿ ರೂಪಿಸುವುದು ಸೇರಿದಂತೆ ಪ್ರಮುಖ ಕಾರ್ಯಗಳ ಹೊರಗುತ್ತಿಗೆ ನೀಡದಂತೆ ನಿರ್ಬಂದ ಹೇರಲು ಆರ್‌ಬಿಐ ಕ್ರಮ ಕೈಗೊಂಡಿದೆ.ಸಾಲಗಾರರಿಗೆ ಮೊಬೈಲ್, ಜಾಲತಾಣಗಳ ಮೂಲಕ ಅನುಚಿತ ಮೆಸೇಜ್ ಕಳುಹಿಸುವುದು, ಬೆದರಿಕೆ ಹಾಕುವ ಜೊತೆಗೆ ಅನಾಮಧೇಯ ನಂಬರ್ ಗಳಿಂದ ಕರೆ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ಸಾಲ ಪಡೆದವರಿಗೆ ಮತ್ತು ಖಾತರಿದಾರರಿಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡಬಾರದೆಂದು ಹೇಳಲಾಗಿದೆ.
ಸಾಲಗಾರರ ಗೌರವಕ್ಕೆ ದಕ್ಕೆ ಬರುವಂತೆ ಹಣಕಾಸು ಸಂಸ್ಥೆಗಳು ಏಜೆಂಟರು ನಡೆದುಕೊಳ್ಳಬಾರದು. ಅದೇ ರೀತಿ, ಸಾಲ ವಸೂಲಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲಿಯೂ ಸಾಲಗಾರರ ಗೌರವಕ್ಕೆ ಹಾನಿಯಾಗುವಂತೆ ನಡೆದುಕೊಳ್ಳಬಾರದು. ಸಾರ್ವಜನಿಕವಾಗಿ ಅವಹೇಳನ ಮಾಡುವ ಜೊತೆಗೆ ಸಾಲಗಾರರು ಮತ್ತು ಜಾಮೀನುದಾರರ ಕುಟುಂಬದ ಸದಸ್ಯರಿಗೂ ಅವಹೇಳನ ಮಾಡದಂತೆ ಕರಡು ನೀತಿಯಲ್ಲಿ ಹೇಳಲಾಗಿದೆ.ಸಾಲ ವಸೂಲಿಗಾರರಿಗೆ ಸರಿಯಾದ ತರಬೇತಿ ನೀಡಲು ಸೂಚಿಸಲಾಗಿದ್ದು, ಈ ಪ್ರಸ್ತಾಪವನ್ನು ಆರ್‌ಬಿಐ ಮಂಡಳಿ ಎದುರು ಮಂಡಿಸಿ ಒಪ್ಪಿಗೆ ಪಡೆದ ಬಳಿಕ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ. ಈ ಕುರಿತು ನವೆಂಬರ್ 28ರೊಳಗೆ ಸಲಹೆ ಪ್ರತಿಕ್ರಿಯೆ ನೀಡುವಂತೆ ಆಹ್ವಾನಿಸಲಾಗಿದೆ.
ಇದನ್ನೂ ಓದಿ: Marraige Rules: ಸರ್ಕಾರಿ ನೌಕರರ ಮದುವೆ ಕುರಿತು ಬಂತು ಹೊಸ ರೂಲ್ಸ್ – ಮಹತ್ವದ ಆದೇಶ ಹೊರಡಿಸಿದ ಸರ್ಕಾರ !!