Bigg Boss Varthur Santhosh: ವರ್ತೂರು ಸಂತೋಷ್‌ಗೆ ಬಿಗ್ ರಿಲೀಫ್; ಜಾಮೀನು ಮಂಜೂರು!!!
biggboss contestant varthur santhosh bail granted latest news


BiggBoss Varthur Santhosh: ಹುಲಿ ಉಗುರು ಆಭರಣ ಧರಿಸಿದ್ದ ಕಾರಣಕ್ಕಾಗಿ ಭಾನುವಾರ ಬಿಗ್‌ಬಾಸ್ ಮನೆಯಿಂದ ತಡರಾತ್ರಿ ಬಂಧನಕ್ಕೊಳಗಾದ ರಿಯಾಲಿಟಿಶೋ ಸ್ಪರ್ಧಿ ವರ್ತೂರು ಸಂತೋಷ್ (BiggBoss Varthur Santhosh) ಅವರಿಗೆ ಜಾಮೀನು ಮಂಜೂರಾಗಿದೆ. ಎರಡನೇ ಎಸಿಜೆಎಂ ಕೋರ್ಟ್ ನಿಂದ ಜಾಮೀನು ನೀಡಲಾಗಿದ್ದು, ನ್ಯಾಯಾಧೀಶ ನರೇಂದ್ರ ಅವರಿಂದ ಈ ಆದೇಶ ಹೊರಬದ್ದಿದೆ.

ಒಬ್ಬರ ಶ್ಯೂರಿಟಿ, ನಾಲ್ಕು ಸಾವಿರ ರೂಪಾಯಿ ನಗದು ಭದ್ರತೆ ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ.
ಅರಣ್ಯ ಅಧಿಕಾರಿಗಳ ಪ್ರಕ್ರಿಯೆಯ ವೈಫಲ್ಯದ ಕುರಿತು ಸಂತೋಷ್ ಪರ ವಕೀಲರು ವಾದ ಮಂಡನೆ ಮಾಡಿದ್ದು, ಸಂತೋಷ್ ಅವರು ಸಂಜೆ ವೇಳೆ ಬಿಡುಗಡೆ ಹೊಂದುವ ಸಾಧ್ಯತೆ ಇದೆ.
