Policeman viral video: ಬಾಯಿಗೆ ಬಾಯಿಟ್ಟು ಹಾವಿಗೆ ಮರು ಜೀವ ನೀಡಿದ ಪೊಲೀಸ್ !! ವೈರಲ್ ಆಯ್ತು ವಿಡಿಯೋ

Viral news policeman shares unconscious snake to death video on social media goes viral

 

Policeman viral video: ಮಾನವರಲ್ಲಿ ಸಿಪಿಆರ್ ಚಿಕಿತ್ಸೆ ಸಾಮಾನ್ಯವಾಗಿದೆ. ಹೆಚ್ಚಿನ ಸಮಯದಲ್ಲಿ ಎಷ್ಟೋ ಜೀವಗಳನ್ನು
ಸಿಪಿಆರ್ ಮೂಲಕ ಉಳಿಸಲಾಗಿದೆ.
ಇದೊಂದು ಬಾಯಿಯ ಮೂಲಕ ಬಾಯಿಯಲ್ಲಿ ಗಾಳಿಯನ್ನು ತುಂಬುವ ತಂತ್ರವಾಗಿದೆ. ಇದರಿಂದ ಉಸಿರಾಟ ತೊಂದರೆ ಇದ್ದಲ್ಲಿ ಉಸಿರಾಡಲು ಕಾರಣವಾಗುತ್ತದೆ ಮತ್ತು ಜೀವವನ್ನು ಉಳಿಸಬಹುದು. ಆದ್ರೆ ಇದು ಮಾನವರಲ್ಲಿ ಸಾಮಾನ್ಯವಾಗಿದೆ, ಆದರೆ ಹಾವಿಗೆ ಸಿಪಿಆರ್ ನೀಡುವ ವಿಷಯಕ್ಕೆ ಬಂದರೆ, ಅದು ಸಾಮಾನ್ಯವಲ್ಲ. ಹಾವಿಗೆ ಸಿಪಿಆರ್ ನೀಡಲು ಗುಂಡಿಗೆ ಗಟ್ಟಿಯಾಗಿ ಇರಬೇಕು.

ವಿಶೇಷ ಅಂದರೆ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸೆಮಿಹರ್ಚಂದ್ ನ ಪೊಲೀಸ್ ಕಾನ್ಸ್ಟೇಬಲ್ ಅತುಲ್
ಎಂಬವರು ಪ್ರಜ್ಞಾಹೀನ ಹಾವನ್ನು ರಕ್ಷಿಸಿದ್ದು ಅಲ್ಲದೇ, ನಂತರ ಹಾವಿನ ಬಾಯಿ ತೆರೆದು ತನ್ನ ಬಾಯಿಯಿಂದ ಗಾಳಿ ತುಂಬಿಸಿದ್ದಾರೆ. ಇದು ಹಾವು ಮತ್ತೆ ಉಸಿರಾಡಲು ಕಾರಣವಾಯಿತು ಮತ್ತು ಹಾವಿನ ಜೀವವನ್ನು ಉಳಿಸಿದೆ.

ಇದೀಗ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಒಬ್ಬ ಮನುಷ್ಯ ಜೀವವನ್ನು ಕಾಪಾಡುವ ರೀತಿಯಲ್ಲಿ ಹಾವಿಗೆ ಸಿಪಿಆರ್ ನೀಡಿ ಅದರ ಜೀವ ಉಳಿಸಿದ ವಿಡಿಯೋ ಎಲ್ಲೆಡೆ ವೈರಲ್(Policeman viral video) ಆಗಿದ್ದು, ಅವರ ಧೈರ್ಯ ಮತ್ತು ಕಾಳಜಿಗೆ ಒಂದು ಸಲ್ಯೂಟ್ ಎಂದು ಟ್ವಿಟ್ಟರ್ ನಲ್ಲಿ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆಯ ಪುಟ್ಟ ಕಂದನಿಗೆ PPF ಖಾತೆ ಮಾಡಿಸಬೇಕೆ? ಹಾಗಿದ್ರೆ ಏನಿದರ ಪ್ರಯೋಜನ, ಮಾಡಿಸುವುದು ಹೇಗೆ ?!

Leave A Reply

Your email address will not be published.