Loan : 15,000 ಸಾಲ ಪಡೆದು ತಿಂಗಳಿಗೆ ಬರೀ 111ರೂ EMI ಕಟ್ಟಿ- ಬಡ್ಡಿ ಕೂಡ ತುಂಬಾ ಕಡಿಮೆ !!
loan news loan and intrest15,000 loan and pay only 111 per month EMI
Loan : ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇದು ಬ್ಯಾಂಕ್ (bank) ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. UPI ಪಾವತಿಯು ಅತ್ಯಂತ ಸರಳವಾದ ವಿಧಾನವಾಗಿದ್ದರಿಂದ ಭಾರತದ (India) ಎಲ್ಲ ವ್ಯಾಪಾರಿಗಳು, ಜನರು ಡಿಜಿಟಲ್ ಪಾವತಿಯನ್ನು ಬಳಸುತ್ತಿದ್ದಾರೆ.
ಇದೀಗ Google Pay ತನ್ನ ಬಳಕೆದಾರರಿಗೆ ಮಹತ್ವದ ಸೌಲಭ್ಯವನ್ನು ನೀಡಲು ಮುಂದಾಗಿದೆ. ಹೌದು, ಗೂಗಲ್ ಪೆ ಸಾಲವನ್ನು ನೀಡಲಿದೆ. ಜನಪ್ರಿಯ UPI Application ಆದ Google Pay ಇದೀಗ ಸ್ಯಾಚೆಟ್ ಸಾಲವನ್ನು ನೀಡಲು ಮುಂದಾಗಿದೆ. ಸ್ಯಾಚೆಟ್ ಸಾಲವು (Loan) ನ್ಯಾನೋ ಕ್ರೆಡಿಟ್ ಸಾಲದ ಒಂದು ರೂಪವಾಗಿದೆ. ಈ ಸಾಲವನ್ನು ಕೆಲವೇ ನಿಮಿಷಗಳಲ್ಲಿ ಮೊಬೈಲ್ ನ ಮೂಲಕವೇ ಪಡೆಯಬಹುದಾಗಿದೆ.
ಗೂಗಲ್ ಪೆ ಸಧ್ಯ ಈ ಸ್ಯಾಚೆಟ್ ಸಾಲದಲ್ಲಿ ರೂ. 15000 ಸಾಲವನ್ನು ನೀಡುತ್ತದೆ. ನೀವು ಗೂಗಲ್ ಪೆ ನ ಮೂಲಕ 15,000 ರೂಪಾಯಿ ಸಾಲವನ್ನು ಪಡೆದರೆ ಮಾಸಿಕ 111 ರೂ. ಪಾವತಿಸಬೇಕಾಗುತ್ತದೆ. ತಿಂಗಳಿಗೆ 111 ರೂ. EMI ಪಾವತಿಸಿ ಗೂಗಲ್ ಪೆ ಮೂಲಕ 15000 ರೂ. ಸಾಲವನ್ನು ಪಡೆಯಬಹುದಾಗಿದೆ. ಐಸಿಐಸಿಐ, ಕೋಟಕ್ ಮಹೀಂದ್ರಾ, ಫೆಡರಲ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಗಳಂತಹ ನಾಲ್ಕು ಬ್ಯಾಂಕ್ ಗಳಲ್ಲಿ Goggle Pay ಸಾಲವನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ.
ಗೂಗಲ್ ಪೆ 15000 ರೂ. ಸಾಲ ಸೌಲಭ್ಯವನ್ನು ನೀಡುವುದರ ಜೊತೆಗೆ ePayLater ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ Credit Line ಅನ್ನು ಸಕ್ರಿಯಗೊಳಿಸಲಿದೆ. ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಪಡೆಯಲು ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ಈ ಸಾಲವನ್ನು ಪಡೆಯಬಹುದು. Axis ಬ್ಯಾಂಕ್ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಗೂಗಲ್ ಪೇ ವೈಯಕ್ತಿಕ ಸಾಲಗಳ ಪೋರ್ಟ್ಫೋಲಿಯೊವನ್ನು ನೀಡುತ್ತದೆ. ಮಾಸಿಕ ಆದಾಯ ರೂ. 30,000 ಕ್ಕಿಂತ ಕಡಿಮೆ ಇರುವವರು ಈ ಸಾಲ ಸೌಲಭ್ಯವನ್ನು ಪಡೆಯಬಹುದು.
ಇದನ್ನು ಓದಿ: Railway Ticket: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ- ಟಿಕೆಟ್ ಕುರಿತು ಇಲಾಖೆಯಿಂದ ಬಂತು ಹೊಸ ರೂಲ್ಸ್ !!