NO Clothes Places: ಇಲ್ಲಿ ಬಟ್ಟೆ ಹಾಕಿಕೊಂಡು ಬಂದರೆ ಎಂಟ್ರಿ ಇಲ್ಲ, ಬಟ್ಟೆ ಹಾಕದೇ ಬಂದರೆ ನಿಮಗೆ ಸುಸ್ವಾಗತ ಖಂಡಿತ!
Interesting news dress code places where people roam without clothes
Dress Code: ನೀವೇನಾದರೂ ಬಟ್ಟೆ ಇಲ್ಲದೇ ಓಡಾಡಬೇಕು ಅಂದುಕೊಂಡರೆ ಖಂಡಿತ ಈ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಬಹುದು. ಯಾಕೆ ಗೊತ್ತಾ? ಇಲ್ಲಿ ನಿಮಗೆ ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಓಡಾಡಲು ಯಾವುದೇ ನಿರ್ಬಂಧಗಳಿಲ್ಲ( Restrictions). ಇಲ್ಲಿನ ಮಂದಿ ಮನಸೋ ಇಚ್ಛೆ ವಿವಸ್ತ್ರಧಾರಿಯಾಗಿ ದೇಶದೆಲ್ಲೆಡೆ ಅಡ್ಡಾಡುತ್ತಾರೆ. ಹಾಗಿದ್ರೆ, ಈ ರೀತಿ ಅವಕಾಶ ಇರುವುದೆಲ್ಲಿ ಎಂದು ತಿಳಿಯಬೇಕು ಅಂದರೆ ಈ ಮಾಹಿತಿ ಓದಲೇಬೇಕು.
ಇಂದು ನಾವು ಸಾಮಾನ್ಯವಾಗಿ ಯಾರನ್ನೇ ನೋಡಿದರೂ ಕಾಲಕ್ಕೆ ತಕ್ಕಂತೆ ಕೋಲ ಅನ್ನುವ ಹಾಗೆ ಭಿನ್ನ ವಿಭಿನ್ನ ಮಾದರಿಯ ವಸ್ತ್ರ ವಿನ್ಯಾಸದ ಉಡುಪುಗಳನ್ನೂ(Dress Code) ಧರಿಸುವವರನ್ನು ನೋಡುತ್ತಿದ್ದೇವೆ. ಅದರಲ್ಲಿಯೂ ಕೆಲ ವಸ್ತ್ರಗಳ ವಿನ್ಯಾಸ ನೋಡಿದರೆ ಬಟ್ಟೆ ಧರಿಸಿದ್ದಾರೆಯೇ ಎಂಬ ಅನುಮಾನ ಕೂಡ ಭುಗಿಲೇಳುತ್ತದೆ.
ಭಾರತದಲ್ಲಿ ಉಡುಪುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆಯಿಂದ ಹೊರ ಕಾಲಿಟ್ಟಾಗ ಮೈ ಮುಚ್ಚುವ ವಸ್ತ್ರಗಳನ್ನ ಧರಿಸುವಂತೆ ಹಿರಿಯರು ಮಕ್ಕಳಿಗೆ ಉಪದೇಶ ಮಾಡುವುದು ಹಳೆಯ ಮಾತು. ಈಗ ನಮ್ಮ ಜೀವನ ನಮ್ಮಿಷ್ಟ ಅನ್ನುವ ತುಂಡುಡುಗೆಯ ಕಮಾಲು ಎಲ್ಲೆಡೆ ಕಂಡು ಬರುತ್ತಿದೆ. ಆದರೆ, ಈಗಲೂ ಕೆಲವೊಂದು ನಗರಗಳಲ್ಲಿ ಬಟ್ಟೆ ಧರಿಸದೆಯೇ(Places Where People Roam Without Clothes) ಎಲ್ಲೆಂದರಲ್ಲಿ ಯಾವುದೇ ರೀತಿಯ ನಾಚಿಕೆಯಿಲ್ಲದೆ, ನಿರ್ಬಂಧಗಳಿಲ್ಲದೇ ಓಡಾಡಲು ಅವಕಾಶವಿದೆ. ಹಾಗಿದ್ರೆ, ಬಟ್ಟೆ ಇಲ್ಲದೇ ಓಡಾಡಲು ಅವಕಾಶ ಇರೋದೆಲ್ಲಿ?
ಅಮೆರಿಕದ ಫ್ಲೋರಿಡಾ ಪ್ರಾಂತ್ಯದಲ್ಲಿ ವಿಶೇಷವಾದ ಬೀಚ್ ಯಿದ್ದು, ಇದಕ್ಕೆ ನೇಕೆಡ್ ಬೀಚ್ ಎನ್ನಲಾಗುತ್ತದೆ. ಇಲ್ಲಿ ಜನರು ಬಟ್ಟೆ ಇಲ್ಲದೆಯೇ ಅಡ್ಡಾಡುತ್ತಾರೆ. ಇಲ್ಲಿ ಹೆಚ್ಚಿನ ಜನರು ಬಟ್ಟೆ ಇಲ್ಲದೆ ನಾಮಮಾತ್ರದ ಬಟ್ಟೆಯಲ್ಲೇ ಅಡ್ಡಾಡುತ್ತಾರೆ. ಈ ಬೀಚ್ (Beach) ನಿಜವಾದ ಹೆಸರು ಹಾಲೋವರ್ ಬೀಚ್ ಎಂದಾಗಿದ್ದು, ಈ ಬೀಚ್‌ನಲ್ಲಿ ಬಟ್ಟೆಗಳನ್ನು ಧರಿಸುವ ಇಲ್ಲವೇ ಧರಿಸದಿರುವುದು ಆಯ್ಕೆಯನ್ನು ಜನರಿಗೆ ನೀಡಲಾಗಿದೆ.
ಯುಕೆಯ(UK) ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ಸ್ಪೀಲ್‌ಪ್ಲಾಟ್ಜ್ ಎಂಬ ಗ್ರಾಮದ ಜನರು ವಿದ್ಯಾವಂತರಾಗಿದ್ದು ಜೊತೆಗೆ ಶ್ರೀಮಂತಿಕೆಯಲ್ಲಿಯೂ ಏನು ಕಡಿಮೆಯಿಲ್ಲ. ಆದರೆ, ಇಲ್ಲಿನ ಜನರು ಬಟ್ಟೆಯೇ ಧರಿಸುವುದಿಲ್ಲವಂತೆ.1929 ರಿಂದ ಇಲ್ಲಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಊರ ಒಳಗೆ ಬಟ್ಟೆ ಇಲ್ಲದೆ ಅಡ್ಡಾಡಿದರು ಕೂಡ ಹೊರಗೆ ಓಡಾಡುವಾಗ ಬಟ್ಟೆ ಧರಿಸುತ್ತಾರಂತೆ.
ಪ್ರತಿ ವರ್ಷ ಆಸ್ಟ್ರಿಯಾದಲ್ಲಿ ನೇಕೆಡ್ ಆರ್ಟ್ ಫೆಸ್ಟಿವಲ್ ಅನ್ನು ಆಯೋಜನೆ ಮಾಡಲಾಗುತ್ತದೆ. ಈ ವಿಶೇಷ ಕಾರ್ಯಕ್ರಮಕ್ಕೆ ದೇಶದಾದ್ಯಂತ ಜನರು ಭಾಗಿಯಾಗಲಿದ್ದು, ಅಷ್ಟೆ ಅಲ್ಲದೇ, ಇಲ್ಲಿ ಅವರು ಬಟ್ಟೆ ಇಲ್ಲದೆ ಪ್ರದರ್ಶನವನ್ನು ನೀಡುತ್ತಾರೆ. ಅವರ ಮೈಮೇಲೆ ಗಾಢ ಬಣ್ಣಗಳ ಪೇಂಟಿಂಗ್ ಅನ್ನು ಹಾಕಿಕೊಂಡಿದ್ದು, ಅವರೇ ವಾಕಿಂಗ್ ಕ್ಯಾನ್ವಾಸ್ ರೀತಿಯಲ್ಲಿ ಕಂಗೊಳಿಸುತ್ತಾರೆ. ಇನ್ನೊಂದು ವಿಶೇಷ ಏನಪ್ಪಾ ಅಂದರೆ, ಈ ರೀತಿ ಬಟ್ಟೆ ಇಲ್ಲದೆ ಇಲ್ಲಿಗೆ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ.
ಆರೋಗ್ಯಕರ (Health) ದೇಹವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 12 ರಂದು ವಿವಿಧ ನಗರಗಳಲ್ಲಿ ನೇಕೆಡ್ ಬೈಕ್ ರೈಡ್ ರೇಸ್( Bike Ride Race) ಆಯೋಜನೆ ಮಾಡಲಾಗುತ್ತದೆ. ಈ ಸಮಯದಲ್ಲಿ ಅವರು ಯಾವುದೇ ಬಟ್ಟೆಯನ್ನು ಧರಿಸುವುದಿಲ್ಲ. ಹೀಗಾಗಿ, ಈ ಕಾರ್ಯಕ್ರಮದಲ್ಲಿ ಓಟದಲ್ಲಿ, ಜನರು ತಮ್ಮ ಬೈಕ್ಗಳೊಂದಿಗೆ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಾರೆ.
ಜಪಾನ್‌ನ( Japan)ರಾಜಧಾನಿ ಟೋಕಿಯೊದಲ್ಲಿ( Tokiyo)ಬಿಸಿನೀರಿನ ಬುಗ್ಗೆ ಸ್ನಾನವನ್ನ ಒನ್ಸೆನ್ ಎಂದು ಕರೆಯಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಜಪಾನ್‌ನಲ್ಲಿ ಮಹಿಳೆಯರು ಮತ್ತು ಪುರುಷರು ಬಟ್ಟೆಯಿಲ್ಲದೆ ಸ್ನಾನ ಮಾಡುವ ಪದ್ಧತಿ ರೂಡಿಯಲ್ಲಿದ್ದು, ಈಗಲೂ ಮುಂದುವರೆಯುತ್ತಿದೆ.
ಫ್ರಾನ್ಸ್‌ನ ನೇಕೆಡ್ ಸಿಟಿಯಲ್ಲಿ ಜನರು ಬಟ್ಟೆ ಇಲ್ಲದೆ ರಸ್ತೆಯಲ್ಲಿ ಓಡಾಡಬಹುದು.ಕ್ಯಾಪ್ ಡಿ ಆಗ್ಡೆ, ಜನರು ತಮಗೆ ಬೇಕಾದುದನ್ನು ಧರಿಸಬಹುದು. ನಗರದ ನಿಯಮಗಳ ಅನುಸಾರ ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಇಲ್ಲಿ ಜನರು ಬಟ್ಟೆ ಇಲ್ಲದೆ ರಸ್ತೆಯಲ್ಲಿ ಅಡ್ಡಾಡಲು ಅವಕಾಶವಿದೆ. ಮಾಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು, ಎಲ್ಲೆಂದರಲ್ಲಿ ಜನರು ಬಟ್ಟೆ ಇಲ್ಲದೆ ತಿರುಗಾಡಲು ಕೂಡ ಅವಕಾಶವಿದ್ದು, ಇದಕ್ಕೆ ಯಾವುದೇ ನಿರ್ಬಂಧವಿಲ್ಲ.
ಇದನ್ನೂ ಓದಿ: Health tips: ಪುರುಷರೇ ನೀವು ರಾತ್ರಿ ಹೊತ್ತು “ಬೆತ್ತಲಾಗಿ” ಮಲಗುತ್ತೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ !