PPF for minor child: ನಿಮ್ಮ ಮನೆಯ ಪುಟ್ಟ ಕಂದನಿಗೆ PPF ಖಾತೆ ಮಾಡಿಸಬೇಕೆ? ಹಾಗಿದ್ರೆ ಏನಿದರ ಪ್ರಯೋಜನ, ಮಾಡಿಸುವುದು ಹೇಗೆ ?!
Business news personal finance PPF for minor child details in Kannada
PPF For Minor Child: ನಿಮ್ಮ ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆಗಳನ್ನು ಓಪನ್ ಮಾಡುವುದು ಅವರ ಭವಿಷ್ಯದಲ್ಲಿ ಹಣ ಉಳಿತಾಯ ಮಾಡುವುದಕ್ಕೆ ಇರುವ ಉತ್ತಮ ಮಾರ್ಗವಾಗಿದೆ. ಪಿಪಿಎಫ್ ಖಾತೆಯಿಂದ ಆಕರ್ಷಕ ಬಡ್ಡಿ ದರ ಹಾಗೂ ತೆರಿಗೆ ಅನುಕೂಲತೆಗಳನ್ನು ಪಡೆಯಲು ಉತ್ತಮ ಹೂಡಿಕೆ ಯೋಜನೆಯಾಗಿದೆ.
ಪಿಎಫ್ ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್. ನಮ್ಮ ದೇಶದಲ್ಲಿ ಇದು ಸರ್ಕಾರಿ ಬೆಂಬಲಿತ ಉಳಿತಾಯ ಹಾಗೂ ಹೂಡಿಕೆಯ ಯೋಜನೆಯಾಗಿದೆ. ಆಕರ್ಷಕ ಬಡ್ಡಿ ದರಗಳು, ತೆರಿಗೆ ಅನುಕೂಲತೆಗಳು, ಹೂಡಿಕೆಯಲ್ಲಿ ಕಡಿಮೆ ರಿಸ್ಕ್ ಹೊಂದಿದೆ. ಈ ಯೋಜನೆ ಹೂಡಿಕೆಗೆ ಬಡ್ಡಿ ದರವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದನ್ನು ತ್ರೈಮಾಸಿಕವಾಗಿ ನೀಡಲಾಗುತ್ತದೆ. ಸದ್ಯ ವಾರ್ಷಿಕ ಶೇಕಡ 7.1ರಷ್ಟು ಬಡ್ಡಿ ನೀಡಲಾಗುತ್ತಿದೆ.
ಮುಖ್ಯವಾಗಿ ಅಪ್ರಾಪ್ತ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಪಿಪಿಎಫ್ ಖಾತೆಗಳನ್ನು (PPF For Minor Child) ಹೆತ್ತವರು ಅಥವಾ ಪೋಷಕರು ನಿರ್ವಹಿಸುತ್ತಾರೆ. 18 ವರ್ಷದ ಬಳಿಕ ಅಪ್ರಾಪ್ತರು ಪಿಪಿಎಫ್ ಖಾತೆಗಳನ್ನು ಸ್ವಂತವಾಗಿ ನಿರ್ವಹಿಸುತ್ತಾರೆ.
ಪಿಪಿಎಫ್ ಖಾತೆ ತೆರೆಯುವ ವಿಧಾನ:
ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನ ಯಾವುದೇ ಶಾಖೆಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಪಿಪಿಎಫ್ ಖಾತೆಯನ್ನು ತೆರೆಯುವುದಕ್ಕೆ ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಿ ನೀಡಬೇಕು. ಜತೆಗೆ, ಅದಕ್ಕೆ ಐಡಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಖಾತೆಯನ್ನು ತೆರೆದ ಬಳಿಕ ಯಾವುದೇ ಸಮಯದಲ್ಲಿ ನಿಮ್ಮ ಖಾತೆಗೆ ನಗದು ರೂಪದಲ್ಲಿ ಅಥವಾ ಆನ್ಲೈನ್ ಮೂಲಕ ಹಣವನ್ನು ಜಮೆ ಮಾಡಬಹುದು.
ಪಿಪಿಎಫ್ ಖಾತೆ ಫೀಚರ್ಗಳು:
ಹೂಡಿಕೆಯ ಮಿತಿಯು ವಾರ್ಷಿಕ ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ 1,50,000 ರೂಪಾಯಿ ಆಗಿರುತ್ತದೆ.
ಈ ಯೋಜನೆ ಕಾಲಾವಧಿ 15 ವರ್ಷಗಳು. ಅದರ ಬಳಿಕ ಚಂದಾದಾರರು ಅರ್ಜಿ ಸಲ್ಲಿಸಿದಾಗ ಅದನ್ನು 5 ವರ್ಷವರೆಗೆ ಒಂದು ಅಥವಾ ಹೆಚ್ಚಿನ ಬಾರಿಗೆ ವಿಸ್ತರಿಸಬಹುದು.
ಖಾತೆಯಲ್ಲಿರುವ ಬ್ಯಾಲೆನ್ಸ್ ಮೊತ್ತ ಹಾಗೂ ಖಾತೆಯ ಕಾಲಾವಧಿಗೆ ಹೊಂದಿಕೊಂಡಂತೆ ಸಾಲ ಪಡೆಯಲು ಹಾಗೂ ವಿತ್ಡ್ರಾ ಮಾಡುವ ಅವಕಾಶವನ್ನು ನೀಡಲಾಗುತ್ತದೆ.
ಪಿಪಿಎಫ್ನಲ್ಲಿ ಮಾಡುವ ಹೂಡಿಕೆಗೆ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಸೆಕ್ಷನ್ನಡಿ ವಾರ್ಷಿಕ 1.5 ಲಕ್ಷ ರೂಪಾಯಿ ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಪಿಪಿಎಫ್ಗೆ ನೀಡುವ ಬಡ್ಡಿ ಮೊತ್ತ ಕೂಡ ತೆರಿಗೆ ವಿನಾಯಿತಿಯನ್ನು ಪಡೆದುಕೊಂಡಿರುತ್ತದೆ.
ಪಿಪಿಎಫ್ ಖಾತೆದಾರರು ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಹೆಸರಿನಲ್ಲಿ ನಾಮಿನಿಯನ್ನು ಮಾಡಿಸಬಹುದು. ಚಂದಾದಾರರೇ ನಾಮಿನ್ಗೆ ನೀಡುವ ಷೇರಿನ ಮೊತ್ತವನ್ನು ವ್ಯಾಖ್ಯಾನಿಸಬಹುದು.
ಪಿಪಿಎಫ್ ಖಾತೆಯನ್ನು ಚಂದಾದಾರರ ಕೋರಿಕೆ ಮೇರೆಗೆ ಇತರೆ ಶಾಖೆಗಳು/ ಇತರೆ ಬ್ಯಾಂಕ್ಗಳಿಗೆ ಅಥವಾ ಪೋಸ್ಟ್ ಆಫೀಸ್ಗಳಿಗೆ ವರ್ಗಾಯಿಸಬಹುದು.
ಆದರೆ ಪಿಪಿಎಫ್ನಡಿ ಚಂದಾದಾರರು ವಾರ್ಷಿಕವಾಗಿ 1,50,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಠೇವಣಿಯನ್ನು ಮಾಡಬಾರದು. ಏಕೆಂದರೆ ಅದಕ್ಕಿಂತ ಹೆಚ್ಚಿನ ಮೊತ್ತವು ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ. ಜತೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುವುದಿಲ್ಲ. ಇಲ್ಲಿ ಹೂಡಿಕೆ ಮೊತ್ತವನ್ನು ಒಟ್ಟಿಗೆ ಅಥವಾ ಕಂತುಗಳಲ್ಲಿ ಡೆಪಾಸಿಟ್ ಮಾಡಬಹುದು.
ಬಡ್ಡಿ ಮೊತ್ತವನ್ನು ಪ್ರತಿ 5ನೇ ತಾರೀಕು ಹಾಗೂ ತಿಂಗಳ ಅಂತ್ಯದಲ್ಲಿನ ಪಿಪಿಎಫ್ ಖಾತೆ ಬ್ಯಾಲೆನ್ಸ್ ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಪ್ರತಿವರ್ಷ ಮಾರ್ಚ್ 31ಕ್ಕೆ ಬಡ್ಡಿ ಜಮೆ ಮಾಡಲಾಗುತ್ತದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಬಳಕೆದಾರರು ಕೂಡಲೇ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ- ನಿಮ್ಮ ಬ್ಯಾಂಕಲ್ಲಿರೋ ಹಣವನ್ನು ಸೇಫ್ ಆಗಿ ಇಡಿ !!