Gruha Lakshmi Scheme Money: ಮಹಿಳೆಯರೇ ಮೆಸೇಜ್ ಬಂದ್ರೂ, ಎಲ್ಲಾ ದಾಖಲೆ ಸರಿ ಇದ್ರೂ ಗೃಹಲಕ್ಷ್ಮೀ ದುಡ್ಡು ಬಂದಿಲ್ವಾ ?! ಹಾಗಿದ್ರೆ ಇದೇ ಕಾರಣ ನೋಡಿ
Karnataka news Congress guarantee did you get gruhaLakshmi scheme message but not money here is details
GruhaLakshmi Scheme Money: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme money)ಅಡಿಯಲ್ಲಿ ನೋಂದಾಯಿಸಿದ ಬಗ್ಗೆ ಯಶಸ್ವಿ ಮೆಸೇಜ್ ಬಂದರೂ ಸುಮಾರು 10 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಎರಡು ಸಾವಿರ ರೂಪಾಯಿ ಹಣ ಜಮೆಯಾಗಿಲ್ಲ ಎಂದು ಮಹಿಳೆಯರು ಚಿಂತೆಯಲ್ಲಿ ಮುಳುಗಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಕೆಯಲ್ಲಿ ಎಲ್ಲಾ ದಾಖಲೆಗಳನ್ನು ನೀಡಿದ್ದೇವೆ. ಅದಲ್ಲದೆ ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ದೋಷವಿಲ್ಲ ಎಂದು ಮೆಸೇಜ್ ಬಂದಿದೆ. ಆದರೂ ನಮ್ಮ ಖಾತೆಗೆ ಎರಡು ಸಾವಿರ ರೂಪಾಯಿ ಹಣ ಬಂದಿಲ್ಲ ಎಂದು ಮಹಿಳೆಯರು ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಇದೀಗ ಎಲ್ಲಾ ದಾಖಲೆಗಳು ಸರಿಯಾಗಿಲ್ಲದಿದ್ರೆ ದೃಢೀಕರಣದ ಸಂಖ್ಯೆ ಮತ್ತು ಮೆಸೇಜ್ ಏಕೆ ಬರುತ್ತೆ ಎಂದು ಗೃಹಲಕ್ಷ್ಮಿ ಯೋಜನೆಯ ವಂಚಿತ ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ. ಸುಮಾರು 10 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ ಹಣ ಜಮೆ ಆಗಿಲ್ಲ ಎಂದು ಮಾಹಿತಿ ಇದೆ. ಹಣ ಹಾಕದೇ ಸರ್ಕಾರ ದಾಖಲೆಗಳು ಸರಿಯಾಗಿಲ್ಲ ಎಂದು ಹೇಳುತ್ತಿದೆ ಆರೋಪಿಸಲಾಗುತ್ತಿದೆ.
ಇನ್ನು ಗ್ರಾಮೀಣ ಭಾಗದಲ್ಲಿ ಬಹುತೇಕರು ಬ್ಯಾಂಕ್ ಖಾತೆ ಹೊಂದಿದ್ದರೂ ನಿರ್ವಹಣೆ ಮಾಡಿರಲ್ಲ. ಇದರ ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಮಾಡಿರಲ್ಲ. ಇಂತಹ ಖಾತೆಗಳ ಸಂಖ್ಯೆ ನೀಡಿದವರಿಗೆ ಹಣ ಜಮೆ ಆಗಿಲ್ಲ. ಅದಲ್ಲದೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯ ಆಧಾರದ ಮೇಲೆಯೇ ಗೃಹಲಕ್ಷ್ಮಿಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದ್ರೆ ಸರ್ಕಾರ ಪಡಿತರ ಚೀಟಿಯಲ್ಲಿನ ಸಮಸ್ಯೆ ಪರಿಹಾರಕ್ಕೆ ಶೀಘ್ರ ವಾಗಿ ಸರ್ಕಾರ ಮುಂದಾಗುತ್ತಿಲ್ಲ.
ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಆರಂಭಿಸುವಾಗ ಸರ್ಕಾರಕ್ಕಿದ್ದ ಉತ್ಸಾಹ ಈಗ ಕಡಿಮೆಯಾದಂತೆ ಕಾಣಿಸುತ್ತಿದೆ. ಇಂತಹ ತಾಂತ್ರಿಕ ಕಾರಣಗಳಿಂದ 10 ಲಕ್ಷಕ್ಕೂ ಅಧಿಕ ಜನ ಹಣಕ್ಕಾಗಿ ಕಾಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ‘ಮಹಿಳಾ ಗ್ಯಾರಂಟಿ’ಗಳ ವಿರುದ್ಧ ಬಂತು ಹೊಸ ಅಸ್ತ್ರ- ಬಿಜೆಪಿ ಯಿಂದ ಶುರುವಾಯ್ತು ಮಾಸ್ಟರ್ ಗೇಮ್