NEET SS Counseling 2023:ಮೆಡಿಕಲ್ ವಿದ್ಯಾರ್ಥಿಗಳಿಗೆ ‘NEET ಕೌನ್ಸೆಲಿಂಗ್’ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ !!

Education news here is the important information for medical students about NEET SS Counseling 2023

NEET SS Counseling 2023: ಮೆಡಿಕಲ್ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC)ನೀಟ್ ಎಸ್ಎಸ್ 2023(NEET SS Counseling 2023) ರ ಕೌನ್ಸೆಲಿಂಗ್ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಿದೆ.

ನೀಟ್ ಎಸ್ಎಸ್ 2023 ಸೆಪ್ಟೆಂಬರ್ 29 ಮತ್ತು 30, 2023 ರಂದು ಎರಡು ಪ್ರತ್ಯೇಕ ಅಧಿವೇಶನದಲ್ಲಿ ನಡೆದಿದ್ದು, ಆಯಾ ಗುಂಪುಗಳಲ್ಲಿ 50 ನೇ ಶೇಕಡಾವಾರು ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳನ್ನು ಕನಿಷ್ಠ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಅರ್ಹರೆಂದು ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- ಸೂಪರ್ ಸ್ಪೆಷಾಲಿಟಿ ನೀಟ್ ಎಸ್ಎಸ್ 2023 ಕೌನ್ಸೆಲಿಂಗ್ನಲ್ಲಿ(NEET SS 2023 counselling Schedule)ಭಾಗವಹಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಟ್ mcc.nic.in ನಲ್ಲಿ ವೇಳಾಪಟ್ಟಿಯನ್ನು ಪರಿಶೀಲನೆ ನಡೆಸಬಹುದು.ರಾಷ್ಟ್ರೀಯ ಪರೀಕ್ಷಾ ಮಂಡಳಿ (NCE ) ಇದರ ಫಲಿತಾಂಶವನ್ನು ಅಕ್ಟೋಬರ್ 15 ರಂದು ಬಿಡುಗಡೆ ಮಾಡಿದೆ.

ನೀಟ್ ಕೌನ್ಸೆಲ್ ಗಾಗಿ, ಎರಡು ಸುತ್ತುಗಳಿರಲಿದ್ದು, ಮೊದಲಿಗೆ ನೋಂದಣಿ ಹಂತದಲ್ಲಿ ಅಭ್ಯರ್ಥಿಗಳು 5,000 ರೂ.ಗಳ ಮರುಪಾವತಿಸಲಾಗದ ಶುಲ್ಕ ಪಾವತಿಸಬೇಕು.ಇದರ ಜೊತೆಗೆ, 2 ಲಕ್ಷ ರೂ.ಗಳ ಮರುಪಾವತಿ ಮಾಡಬಹುದಾದ ಭದ್ರತಾ ಠೇವಣಿಯನ್ನು ಸಲ್ಲಿಸಬೇಕು.

ನೀಟ್ ಎಸ್ಎಸ್ 2023 ಕೌನ್ಸಿಲಿಂಗ್ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
# ಮೊದಲಿಗೆ, ಅಧಿಕೃತ ವೆಬ್ ಸೈಟ್ mcc.nic.in ಭೇಟಿ ನೀಡಿ.
# ಮುಖಪುಟದಲ್ಲಿರುವ ನೀಟ್ ಎಸ್ಎಸ್ 2023 ಲಿಂಕ್ ಅನ್ನು ಕ್ಲಿಕ್ ಮಾಡಿಕೊಳ್ಳಿ.
# ಅಗತ್ಯ ವಿವರಗಳ ಜೊತೆಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿರ್ದಿಷ್ಟ ಮೊತ್ತ ಪಾವತಿಸಿ.

ಇದನ್ನೂ ಓದಿ: 7th Pay Commission Updates: ಸರ್ಕಾರಿ ನೌಕರರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ – ಮೂಲ ವೇತನದಲ್ಲಿ ಆಗಲಿದೆ ಭಾರೀ ಹೆಚ್ಚಳ

Leave A Reply

Your email address will not be published.