7th Pay Commission Updates: ಸರ್ಕಾರಿ ನೌಕರರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ – ಮೂಲ ವೇತನದಲ್ಲಿ ಆಗಲಿದೆ ಭಾರೀ ಹೆಚ್ಚಳ
Central Government news 7th pay commission updates new rules for Government employees salary increase
7th Pay Commission Updates: ಕೇಂದ್ರ ಸರ್ಕಾರ (Central Government)ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ(7th Pay Commission Updates)ತುಟ್ಟಿ ಭತ್ಯೆಯನ್ನು (DA)ಹೆಚ್ಚಿಸಿ ಆದೇಶ ಹೊರಡಿಸಿದೆ. ಜನವರಿ 2023 ರಲ್ಲಿ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಿದೆ. ಇದರ ಬಳಿಕ, ಜುಲೈ 2023 ರಲ್ಲಿ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ಉದ್ಯೋಗಿಗಳ ಒಟ್ಟು ಡಿಎ 42% ರಿಂದ 46% ಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು AICPI ಇಂಡೆಕ್ಸ್‌ನ ಅರ್ಧ-ವಾರ್ಷಿಕ ಲೆಕ್ಕಾಚಾರದ ಆಧಾರದಲ್ಲಿ ತೀರ್ಮಾನ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ನೌಕರರ ವೇತನ ಶ್ರೇಣಿಯನ್ನು ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಸಲ ಪರಿಷ್ಕರಣೆ ಮಾಡಲಾಗುತ್ತದೆ. ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗಿನ AICPI ಸೂಚ್ಯಂಕವನ್ನು ಜನವರಿಯ ಹಣದುಬ್ಬರ ದರವನ್ನು ಆಧರಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಜುಲೈ ತಿಂಗಳ ತುಟ್ಟಿಭತ್ಯೆ ಜನವರಿಯಿಂದ ಜುಲೈವರೆಗೆ AICPI ಸೂಚ್ಯಂಕವನ್ನು ಅವಲಂಬಿತ ವಾಗಿರುತ್ತದೆ. ಈಗ ಜುಲೈ 2023 ರ ಹೊಸ ಡಿಎ ದರಗಳನ್ನು ಘೋಷಿಸಲಾಗಿದ್ದು, ಜುಲೈ ಮತ್ತು ಆಗಸ್ಟ್‌ನ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ವರ್ಷದ ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಳ ಮಾಡಿದರೆ ತುಟ್ಟಿಭತ್ಯೆ 50% ತಲುಪಲಿದ್ದು, ಈ ಸಂದರ್ಭ ನೌಕರರ ವೇತನವನ್ನು ಪರಿಷ್ಕರಿಸಲಾಗುತ್ತದೆ.