RBI Rule: ಬ್ಯಾಂಕಿನಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡೋರಿಗೆ ಬಂತು ಹೊಸ ರೂಲ್ಸ್
Business news RBI new rules for account to account money transfer latest news
RBI Rule: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬ್ಯಾಂಕ್ ವ್ಯವಹಾರಗಳಲ್ಲಿ ಹಲವಾರು ಬದಲಾವಣೆಗಳನ್ನು, ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಬ್ಯಾಂಕ್ಗಳಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, RBI ನಿಂದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.
ಹೌದು, RTGC(Real Time Gross Settlement), NEFT( National Electronic Funds Transfer), IMPS ಎಂದು ಬೇರೆ ಬೇರೆ ಮಾರ್ಗಗಳಲ್ಲಿ ನಾವು ಬ್ಯಾಂಕ್ ನಲ್ಲಿ ಹಣ ವರ್ಗಾವಣೆ ಮಾಡುತ್ತೇವೆ. ಈ ವರ್ಗಾವಣೆಗೆ ಅದರದ್ದೇ ಆದ ಮಿತಿಗಳಿವೆ. ಕೆಲವು ನಿಯಮಗಳೂ ಇವೆ. ಇದೀಗ RBI ಅವುಗಳ ಕುರಿತು ಮಹತ್ವದ ಅಪ್ಡೇಟ್ ಒಂದನ್ನು ನೀಡಿದ್ದು, ಹೆಚ್ಚಾಗಿ ಖಾತೆಯಿಂದ ಖಾತೆಗೆ ಹಣ ವರ್ಗಾವಣೆ ಮಾಡುವವರು ತಪ್ಪದೆ ಇದನ್ನು ನೋಡಬೇಕಿದೆ.
RTGS ಸೌಲಭ್ಯ:
RTGS(Real Time Gross Settlement) ಮೂಲಕ ಹಣವನ್ನು ವರ್ಗಾವಣೆ ಮಾಡಲು ಮೊದಲು ಕೆಲವು ನಿಯಮಗಳು ಹಾಗೂ ಇತಿಮಿತಿಗಳಿದ್ದವು. ಆದರೆ ಇದೀಗ ವರ್ಷದ 365 ದಿನವೂ ಕೂಡ ನಾವು ಹಣವನ್ನು RTGS ಮೂಲಕ ವರ್ಗಾವಣೆ ಮಾಡಬಹುದಾಗಿದೆ. ಅಲ್ಲದೆ 2 ಲಕ್ಷ ಕಡಿಮೆ ಹಣವನ್ನು ಇದರ ಮೂಲಕ ವರ್ಗಾವಣೆ ಮಾಡುವಂತಿಲ್ಲ. ಇನ್ನು ಬ್ಯಾಂಕ್ ಅಥವಾ ಆನ್ಲೈನ್ ಮೂಲಕ ನೇರವಾಗಿ ನಾವು ಇದರಲ್ಲೇ ಹಣವನ್ನು ಟ್ರಾನ್ಸ್ಫರ್ ಮಾಡಬಹುದು. ಬ್ಯಾಂಕಿಗೇ ಬಂದು ಮಾಡುವುದರಿಂದ ಕೆಲವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
NEFT ವರ್ಗಾವಣೆ:
ಇಂದು ಬದಲಾದ ಆರ್ ಬಿ ಐ ನಿಯಮದ ಪ್ರಕಾರ ನಾವು ದಿನದ 24 ಗಂಟೆಗಳಲ್ಲಿಯೂ ಯಾವುದೇ ಸಮಯದಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು NEFT ಮಾಡಬಹುದಾಗಿದೆ.
IMPS ವರ್ಗಾವಣೆ:
ಎನ್ ಪಿ ಸಿ ಐ (National payments corporation of India) ನಿಯಮಗಳಲ್ಲಿ ದೊಡ್ಡ ಬದಲಾವಣೆ ಆಗಿದೆ. ಮೊದಲು ಒಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಾಡಬೇಕಿದ್ದರೆ ಆತನ ಹೆಸರು, ಖಾತೆಯ ವಿವರ (account details) ಐ ಎಫ್ ಎಸ್ ಸಿ ಕೋಡ್ (IFSC code) ಮೊದಲಾದವುಗಳನ್ನು ನಮೂದಿಸಿ ನಂತರ ಹಣ ವರ್ಗಾವಣೆ ಮಾಡಬೇಕಿತ್ತು, ಆದರೆ ಈಗ ಆ ಕಷ್ಟ ಇಲ್ಲ 5,00, 000 ಗಳ ವರೆಗೆ ಫಲಾನುಭವಿಗಳ ಯಾವುದೇ ವಿವರಣೆ ಇಲ್ಲದೆ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು RBI ತಿಳಿಸಿದೆ.