Floating Rate Savings Bond: ಸರ್ಕಾರಿ ಸಾಲಪತ್ರಗಳಲ್ಲಿ ಹೂಡಿಕೆ ಮಾಡೋರಿಗೆ ಬೊಂಬಾಟ್ ಸುದ್ದಿ – ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಖರೀದಿಸುವ ಸುವರ್ಣವಕಾಶ ನೀಡಿದ RBI

Business news RBI Introduces Floating Rate Savings Bonds latest news

Floating Rate Savings Bond: ಆರ್​ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್ ಅಡಿಯಲ್ಲಿ, ಸರ್ಕಾರದ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಕ್ರಮವನ್ನು ಸರಳಗೊಳಿಸಲು ಹೊಸ ಚಿಂತನೆ ರೂಪಿಸಲಾಗಿದ್ದು, ವೈಯಕ್ತಿಕ ರೀಟೇಲ್ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಆರ್​ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ತೆರೆಯಬಹುದಾಗಿದೆ. ಜೊತೆಗೆ ಈ ಖಾತೆಯಿಂದ ವಿವಿಧ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಬಹುದಾಗಿದೆ.

ಸದ್ಯ ಆರ್​ಬಿಐ ಡೈರೆಕ್ಟ್ ಪೋರ್ಟಲ್​ನಲ್ಲಿ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್​ಗಳನ್ನು (FRSB- floating rate savings bond) ಖರೀದಿಸಲು ಅವಕಾಶ ನೀಡಿರುವುದಾಗಿ ರಿಸರ್ವ್ ಬ್ಯಾಂಕ್ ಸೋಮವಾರ ತಿಳಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಬಾಂಡ್​ಗಳು, ರಾಜ್ಯ ಸರ್ಕಾರಗಳ ಬಾಂಡ್​ಗಳು, ಟ್ರೆಷರಿ ಬಿಲ್​ಗಳು, ಸಾವರೀನ್ ಗೋಲ್ಡ್ ಬಾಂಡ್​ಗಳ ಜೊತೆಗೆ ಎಫ್​ಆರ್​ಎಸ್​ಬಿಗಳೂ ರೀಟೇಲ್ ಡೈರೆಕ್ಟ್ ಸ್ಕೀಮ್ ಅಡಿಯಲ್ಲಿ ಪೋರ್ಟಲ್​ಗಳಲ್ಲಿ ಖರೀದಿಗೆ ಲಭ್ಯ ಇರಲಿವೆ.

ಸೇವಿಂಗ್ ಬಾಂಡ್​ಗಳು ಅಂದರೆ ಕೇಂದ್ರ ಸರ್ಕಾರ ವಿತರಿಸುವ ಸಾಲಪತ್ರ. ಬ್ಯಾಂಕುಗಳಲ್ಲಿ ಫ್ಲೋಟಿಂಗ್ ರೇಟ್ ಸಾಲಗಳಂತೆ ಈ ಬಾಂಡ್​ಗಳಲ್ಲಿ ನಿಶ್ಚಿತ ಬಡ್ಡಿ ಇರುವುದಿಲ್ಲ. ಕಾಲಕಾಲಕ್ಕೆ ಬಡ್ಡಿದರ ಪರಿಷ್ಕರಣೆ ಆಗಬಹುದು. ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್​ಗಳು ವಿತರಣೆಯಾಗಿ ಏಳು ವರ್ಷಗಳ ಬಳಿಕ ಮೆಚ್ಯೂರ್ ಆಗುತ್ತವೆ. ಆದರೆ, ಬಾಂಡ್ ಮಾರುಕಟ್ಟೆಯಲ್ಲಿ ಇವುಗಳನ್ನು ಖರೀದಿಸಬಹುದೇ ಹೊರತು ಮಾರಾಟ ಮಾಡಲು ಆಗುವುದಿಲ್ಲ.

ಮುಖ್ಯವಾಗಿ ವೈಯಕ್ತಿಕ ರೀಟೇಲ್ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಆರ್​ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ (RBI RDG Account) ಅನ್ನು ತೆರೆಯಬಹುದು. ಈ ಖಾತೆಯಿಂದ ವಿವಿಧ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಬಹುದಾಗಿದೆ. ಈ ಪೋರ್ಟಲ್​ನ ವಿಳಾಸ ಇಂತಿದೆ: rbiretaildirect.org.in

ಇನ್ನು ಆರ್​ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ಮೇಲಿನ ಪೋರ್ಟಲ್​ನಲ್ಲಿ ತೆರೆಯಬಹುದು. ಪ್ಯಾನ್ ನಂಬರ್, ಅಧಿಕೃತ ಕೆವೈಸಿ ದಾಖಲೆಗಳು, ಇಮೇಲ್ ಐಡಿ ಮತ್ತು ನೊಂದಾಯಿತ ಮೊಬೈಲ್ ನಂಬರ್ ಹೊಂದಿದ್ದಲ್ಲಿ ಆರ್​ಡಿಜಿ ಖಾತೆ ತೆರೆಯಬಹುದು.

ಇದನ್ನೂ ಓದಿ: ಮಹಿಳೆಯರೇ ಮೆಸೇಜ್ ಬಂದ್ರೂ, ಎಲ್ಲಾ ದಾಖಲೆ ಸರಿ ಇದ್ರೂ ಗೃಹಲಕ್ಷ್ಮೀ ದುಡ್ಡು ಬಂದಿಲ್ವಾ ?! ಹಾಗಿದ್ರೆ ಇದೇ ಕಾರಣ ನೋಡಿ

Leave A Reply

Your email address will not be published.