Floating Rate Savings Bond: ಸರ್ಕಾರಿ ಸಾಲಪತ್ರಗಳಲ್ಲಿ ಹೂಡಿಕೆ ಮಾಡೋರಿಗೆ ಬೊಂಬಾಟ್ ಸುದ್ದಿ – ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಖರೀದಿಸುವ ಸುವರ್ಣವಕಾಶ ನೀಡಿದ RBI
Business news RBI Introduces Floating Rate Savings Bonds latest news
Floating Rate Savings Bond: ಆರ್ಬಿಐನ ರೀಟೇಲ್ ಡೈರೆಕ್ಟ್ ಸ್ಕೀಮ್ ಅಡಿಯಲ್ಲಿ, ಸರ್ಕಾರದ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಕ್ರಮವನ್ನು ಸರಳಗೊಳಿಸಲು ಹೊಸ ಚಿಂತನೆ ರೂಪಿಸಲಾಗಿದ್ದು, ವೈಯಕ್ತಿಕ ರೀಟೇಲ್ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಆರ್ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ತೆರೆಯಬಹುದಾಗಿದೆ. ಜೊತೆಗೆ ಈ ಖಾತೆಯಿಂದ ವಿವಿಧ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಬಹುದಾಗಿದೆ.
ಸದ್ಯ ಆರ್ಬಿಐ ಡೈರೆಕ್ಟ್ ಪೋರ್ಟಲ್ನಲ್ಲಿ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ಗಳನ್ನು (FRSB- floating rate savings bond) ಖರೀದಿಸಲು ಅವಕಾಶ ನೀಡಿರುವುದಾಗಿ ರಿಸರ್ವ್ ಬ್ಯಾಂಕ್ ಸೋಮವಾರ ತಿಳಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಬಾಂಡ್ಗಳು, ರಾಜ್ಯ ಸರ್ಕಾರಗಳ ಬಾಂಡ್ಗಳು, ಟ್ರೆಷರಿ ಬಿಲ್ಗಳು, ಸಾವರೀನ್ ಗೋಲ್ಡ್ ಬಾಂಡ್ಗಳ ಜೊತೆಗೆ ಎಫ್ಆರ್ಎಸ್ಬಿಗಳೂ ರೀಟೇಲ್ ಡೈರೆಕ್ಟ್ ಸ್ಕೀಮ್ ಅಡಿಯಲ್ಲಿ ಪೋರ್ಟಲ್ಗಳಲ್ಲಿ ಖರೀದಿಗೆ ಲಭ್ಯ ಇರಲಿವೆ.
ಸೇವಿಂಗ್ ಬಾಂಡ್ಗಳು ಅಂದರೆ ಕೇಂದ್ರ ಸರ್ಕಾರ ವಿತರಿಸುವ ಸಾಲಪತ್ರ. ಬ್ಯಾಂಕುಗಳಲ್ಲಿ ಫ್ಲೋಟಿಂಗ್ ರೇಟ್ ಸಾಲಗಳಂತೆ ಈ ಬಾಂಡ್ಗಳಲ್ಲಿ ನಿಶ್ಚಿತ ಬಡ್ಡಿ ಇರುವುದಿಲ್ಲ. ಕಾಲಕಾಲಕ್ಕೆ ಬಡ್ಡಿದರ ಪರಿಷ್ಕರಣೆ ಆಗಬಹುದು. ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್ಗಳು ವಿತರಣೆಯಾಗಿ ಏಳು ವರ್ಷಗಳ ಬಳಿಕ ಮೆಚ್ಯೂರ್ ಆಗುತ್ತವೆ. ಆದರೆ, ಬಾಂಡ್ ಮಾರುಕಟ್ಟೆಯಲ್ಲಿ ಇವುಗಳನ್ನು ಖರೀದಿಸಬಹುದೇ ಹೊರತು ಮಾರಾಟ ಮಾಡಲು ಆಗುವುದಿಲ್ಲ.
ಮುಖ್ಯವಾಗಿ ವೈಯಕ್ತಿಕ ರೀಟೇಲ್ ಹೂಡಿಕೆದಾರರು ಈ ಪೋರ್ಟಲ್ ಮೂಲಕ ಆರ್ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ (RBI RDG Account) ಅನ್ನು ತೆರೆಯಬಹುದು. ಈ ಖಾತೆಯಿಂದ ವಿವಿಧ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಬಹುದಾಗಿದೆ. ಈ ಪೋರ್ಟಲ್ನ ವಿಳಾಸ ಇಂತಿದೆ: rbiretaildirect.org.in
ಇನ್ನು ಆರ್ಬಿಐನ ರೀಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ಮೇಲಿನ ಪೋರ್ಟಲ್ನಲ್ಲಿ ತೆರೆಯಬಹುದು. ಪ್ಯಾನ್ ನಂಬರ್, ಅಧಿಕೃತ ಕೆವೈಸಿ ದಾಖಲೆಗಳು, ಇಮೇಲ್ ಐಡಿ ಮತ್ತು ನೊಂದಾಯಿತ ಮೊಬೈಲ್ ನಂಬರ್ ಹೊಂದಿದ್ದಲ್ಲಿ ಆರ್ಡಿಜಿ ಖಾತೆ ತೆರೆಯಬಹುದು.
ಇದನ್ನೂ ಓದಿ: ಮಹಿಳೆಯರೇ ಮೆಸೇಜ್ ಬಂದ್ರೂ, ಎಲ್ಲಾ ದಾಖಲೆ ಸರಿ ಇದ್ರೂ ಗೃಹಲಕ್ಷ್ಮೀ ದುಡ್ಡು ಬಂದಿಲ್ವಾ ?! ಹಾಗಿದ್ರೆ ಇದೇ ಕಾರಣ ನೋಡಿ