

PPO number : ಸರ್ಕಾರಿ ಕೆಲಸದಿಂದ ನಿವೃತ್ತಿಯಾಗಿ ಪಿಂಚಣಿ (Pension)ಪಡೆಯುತ್ತಿರುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿಯಾಗಿ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ಪಿಂಚಣಿ ನಿರಂತರವಾಗಿ ಪಡೆಯಲು ಜೀವನ ಪ್ರಮಾಣಪತ್ರವನ್ನು (Life Certificate For Pension) ಸಲ್ಲಿಸಬೇಕಾಗಿದ್ದು, ಪಿಂಚಣಿದಾರರು ಪಿಂಚಣಿ ಪಾವತಿ (PPO) ಸಂಖ್ಯೆಯನ್ನು ಹೊಂದಿರುವುದು ಅತ್ಯವಶ್ಯಕ. ಜೀವನ ಪ್ರಮಾಣಪತ್ರವನ್ನು ಸಲ್ಲಿಸಿದ ಸಂದರ್ಭ ನಿಮ್ಮ PPO ಸಂಖ್ಯೆಯನ್ನು(PPO number ) ನೀಡಬೇಕಾಗುತ್ತದೆ.
PPO ಪಿಂಚಣಿದಾರರಿಗೆ ಪಿಂಚಣಿ ಪಡೆಯಲು ಸಹಾಯ ಮಾಡುವ ವಿಶಿಷ್ಟ 12 ಅಂಕೆಗಳ ಸಂಖ್ಯೆಯಾಗಿದೆ. EPFO ಸದಸ್ಯ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಪಿಂಚಣಿದಾರರಿಗೆ PPO ಸಂಖ್ಯೆ ದೊರೆಯಲಿದೆ. . ಒಂದು ವೇಳೆ ಪಿಪಿಒ ಸಂಖ್ಯೆಯಲ್ಲಿ ಒಂದು ಸಣ್ಣ ತಪ್ಪಾದರು ಕೂಡ ಪಿಂಚಣಿ ಸಿಗುವುದಿಲ್ಲ. ಒಂದು ವೇಳೆ ನಿಮ್ಮ ಬಳಿ 12 ಅಂಕಿಗಳ PPO ಸಂಖ್ಯೆಯಿಲ್ಲ ಎಂದರೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಲಾಗದು. ಪಿಂಚಣಿದಾರನು PPO ಸಂಖ್ಯೆಯ ಮೂಲಕ ತನ್ನ ಪಿಂಚಣಿಯನ್ನು ಟ್ರ್ಯಾಕ್ ಮಾಡಲು ಅವಕಾಶವಿದೆ.
CPAO ವೆಬ್‌ಸೈಟ್ – www.cpao.nic.inನಲ್ಲಿ ನೋಂದಾಯಿಸಿದ ನಂತರ , ಲಾಗಿನ್ ಮತ್ತು ಪಾಸ್‌ವರ್ಡ್ ಮೂಲಕ CPAO ನಿಂದ PPO ನ ಪ್ರತಿಯನ್ನು ಡೌನ್‌ಲೋಡ್ ಮಾಡಬಹುದು. ಜೀವನ ಪ್ರಮಾಣಪತ್ರವನ್ನು ಸಲ್ಲಿಸುವಾಗ, ಪಿಂಚಣಿದಾರರು ಹೆಸರು, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದರ ಜೊತೆಗೆ ಸೆಲ್ಫ್ ಡಿಕ್ಲೇರ್ಡ್ ಜೊತೆಗೆ ಪಿಪಿಒ ಸಂಖ್ಯೆ, ಪಿಂಚಣಿ ಖಾತೆ ಸಂಖ್ಯೆ, ಬ್ಯಾಂಕ್ ಸಂಬಂಧಿತ ಮಾಹಿತಿ ಮತ್ತು ಪಿಂಚಣಿ ಮಂಜೂರಾತಿ ಪ್ರಾಧಿಕಾರದ ಹೆಸರನ್ನು ಕೂಡ ಒದಗಿಸಬೇಕು.
ಇದನ್ನೂ ಓದಿ: ಪಿಂಚಣಿದಾರರಿಗೆ ಮಹತ್ವದ ಸುದ್ದಿ- ಈ ನಂಬರ್ ನಿಮ್ಮ ಬಳಿ ಇಲ್ಲಾಂದ್ರೆ ಪೆನ್ಶನ್ ನಿಮ್ಮ ಕೈ ಸೇರೋದಿಲ್ಲ!!













