Putin Suffering Cardiac Arrest: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೃದಯಾಘಾತ?

World news report says Russia president Vladimir Putin may suffering heart attack latest news

Putin Suffering Cardiac Arrest: ರಷ್ಯಾ – ಉಕ್ರೇನ್ ಸಮರ ಆರಂಭವಾದ ಬಳಿಕ ವದಂತಿಗಳು ಹೆಚ್ಚಾಗುತ್ತಿವೆ. ಇದೀಗ ರಷ್ಯಾ ಅಧ್ಯಕ್ಷರಿಗೆ ಹೃದಯಾಘಾತವಾಗಿದೆ(Putin Suffering Cardiac Arrest) ಅನ್ನೋ ವದಂತಿ ಹರಡಿದೆ. ಆದರೆ, ಈ ಕುರಿತಾಗಿ ರಷ್ಯಾ ಅಧ್ಯಕ್ಷೀಯ ಕಚೇರಿ ಕ್ರೆಮ್ಲಿನ್ ಅಥವಾ ರಷ್ಯಾದ ಯಾವುದೇ ಮಾಧ್ಯಮಗಳೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಟೆಲಿಗ್ರಾಂ ಚಾನಲ್‌ ಒಂದರ ಮಾಹಿತಿ ಭಾರೀ ಗೊಂದಲ ಸೃಷ್ಟಿಸಿದೆ.

 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೃದಯಾಘಾತಕ್ಕೆ ತುತ್ತಾಗಿದ್ದಾರೆ ಅನ್ನೋ ಮಾಹಿತಿ ತಡವಾಗಿ ಬಹಿರಂಗವಾಗಿದೆ. ಪುಟಿನ್ ಅವರು ತಮ್ಮ ಅಧಿಕೃತ ಸರ್ಕಾರಿ ನಿವಾಸದ ಬೆಡ್‌ ರೂಂನಲ್ಲಿ ಇರುವಾಗಲೇ ಹೃದಯಾಘಾತಕ್ಕೆ ತುತ್ತಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ನೆಲದಲ್ಲಿ ಬಿದ್ದಿದ್ದ ಪುಟಿನ್ ಅವರನ್ನು ಮೊದಲಿಗೆ ಭದ್ರತಾ ಪಡೆ ಸಿಬ್ಬಂದಿ ಗಮನಿಸಿದರು. ನಂತರ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯ್ತು ಎಂದು ತಿಳಿದು ಬಂದಿದೆ.

ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್‌ನ ಸಿಬ್ಬಂದಿಯೊಬ್ಬರ ಟೆಲಿಗ್ರಾಂ ಚಾನಲ್‌ನಲ್ಲಿ ಈ ಕುರಿತ ಮಾಹಿತಿ ಬಹಿರಂಗವಾಗಿದೆ. ಆದರೆ, ಈ ಟೆಲಿಗ್ರಾಂ ಚಾನಲ್‌ ನಡೆಸುತ್ತಿರುವವರು ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್ ಸಿಬ್ಬಂದಿಯೇ ಅನ್ನೋದ್ರ ಕುರಿತಾದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈ ಘಟನೆ ಅಕ್ಟೋಬರ್ 22 ಭಾನುವಾರವೇ ನಡೆದಿದೆ ಎನ್ನಲಾಗಿದೆ.

ರಷ್ಯಾ ಅಧ್ಯಕ್ಷರು ತಮ್ಮ ಬೆಡ್‌ ರೂಂನಲ್ಲಿ ನೆಲದ ಮೇಲೆ ಬಿದ್ದಿದ್ದರು. ಅವರ ಕಣ್ಣುಗಳು ಮೇಲ್ಮುಖವಾಗಿದ್ದವು ಎಂದು ಟೆಲಿಗ್ರಾಂ ಚಾನಲ್‌ನಲ್ಲಿ ಹೇಳಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಯನ್ನೂ ರಷ್ಯಾ ಸರ್ಕಾರ ನೀಡಿಲ್ಲ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈಗ 71 ವರ್ಷ ವಯಸ್ಸು. ಇದೀಗ ರಷ್ಯಾ ಅಧ್ಯಕ್ಷರ ಆರೋಗ್ಯ ಸ್ಥಿತಿ ಹೇಗಿದೆ ಅನ್ನೋದ್ರ ಕುರಿತಾಗಿಯೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಅದಲ್ಲದೆ ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸದ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲೇ ವಿಶೇಷ ವೈದ್ಯಕೀಯ ಘಟಕ ಇದ್ದು, ಇಲ್ಲಿನ ತುರ್ತು ನಿಗಾ ಘಟಕದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಈ ವರದಿಯ ಅಧಿಕೃತತೆ ಬಗ್ಗೆ ಯಾವುದೇ ಮಾಧ್ಯಮ ಸಂಸ್ಥೆಯೂ ದೃಢೀಕರಣ ನೀಡಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ಬಿತ್ತರಿಸಿದ ಈ ಟೆಲಿಗ್ರಾಂ ಚಾನಲ್‌ನ ಹೆಸರು, ಜನರಲ್ ಎಸ್‌ವಿಆರ್.. ಇದನ್ನು ರಷ್ಯಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಒಬ್ಬರು ನಡೆಸುತ್ತಿದ್ಧಾರೆ ಎನ್ನಲಾಗಿದೆ. ಈ ಟೆಲಿಗ್ರಾಂ ಚಾನಲ್‌ನಲ್ಲಿ ಆಗಾಗ ಪುಟಿನ್‌ ಅವರ ಆರೋಗ್ಯ ಸ್ಥಿತಿ ಕುರಿತಾಗಿ ಮಾಹಿತಿಗಳು ಬಿತ್ತರ ಆಗುತ್ತಿರುತ್ತವೆ. ಆದರೆ ಬಹುತೇಕ ಸಮಯದಲ್ಲಿ ಇದು ಸುಳ್ಳು ಎಂದು ಸಾಬೀತಾಗಿದೆ.

ಇದನ್ನೂ ಓದಿ: ಪ್ರಜ್ಞೆ ಇಲ್ಲದೆ ವೆಂಟಿಲೇಟರ್’ನಲ್ಲಿದ್ದ ಗರ್ಭಿಣಿ – ಧೈರ್ಯ ಮಾಡಿ ಹೆರಿಗೆ ಮಾಡಿಸೇ ಬಿಟ್ಟ ದೆಹಲಿ ಡಾಕ್ಟರ್ಸ್

Leave A Reply

Your email address will not be published.