Shobha karandlaje: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶೋಭಾ ಕರಂದ್ಲಾಜೆ ಹೆಸರು ಫೈನಲ್ ?! ಕೊನೆಗೂ ಮೌನ ಮುರಿದ ಶೋಭಕ್ಕ ಹೇಳಿದ್ದಿಷ್ಟು
Karnataka political news Shobha karandlaje reacts on Karnataka BJP state President post
Shobha karandlaje: ಹೊಸ ರಾಜ್ಯಾಧ್ಯಕ್ಷರಿಲ್ಲದೆ ಅತಂತ್ರವಾಗಿರುವಂತಹ ರಾಜ್ಯ ಬಿಜೆಪಿಯ ಸ್ಥಿತಿಯಂತೂ ಯಾರಿಗೂ ಬೇಡವಾಗಿದೆ. ಆದರೆ ಕೆಲವು ದಿನಗಳಿಂದ ಮತ್ತೆ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಮುನ್ನಲೆಗೆ ಬಂದಿದ್ದು ಇದರಿಂದ ಕಾರ್ಯಕರ್ತರಲ್ಲಿ ಹಾಗೂ ಕೆಲವು ನಾಯಕರುಗಳಲ್ಲಿ ಆಶಾಭಾವನೆ ಮೂಡಿದಂತಿದೆ. ರಾಜ್ಯಾಧ್ಯಕ್ಷರಾಗಿ ಶೋಭಾ ಕರಂದ್ಲಾಜೆ(Shobha karandlaje) ಅವರ ಹೆಸರೇ ಫೈನಲ್ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಶೋಭಕ್ಕ ಈ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.
ಹೌದು, ಕೆಲವು ದಿನಗಳಿಂದ ರಾಜ್ಯದಲ್ಲಿ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಬಹಳಷ್ಟು ಸದ್ದು ಮಾಡುತ್ತಿದೆ. ಬಿಜೆಪಿಯ ಪ್ರಬಲ ನಾಯಕಿ, ಕೇಂದ್ರ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಫಿಕ್ಸ್ ಎಂಬ ಮಾತುಗಳು ಬಹಳಷ್ಟು ಕೇಳಿ ಬರುತ್ತಿದೆ. ಜೊತೆಗೆ ಶೋಭ ಕರಂದ್ಲಾಜೆ ಅವರು ಕೂಡ ರಾಜ್ಯಾದ್ಯಂತ ತುಂಬಾ ಆಕ್ಟಿವ್ ಆಗಿದ್ದಾರೆ. ದಸರ ಕಾರ್ಯಕ್ರಮಗಳಿರಬಹುದು ಹಲವಾರು ಬೇರೆ ಬೇರೆ ಕಾರ್ಯಕ್ರಮಗಳಿರಬಹುದು ಅದರಲ್ಲಿ ಶೋಭಾ ಅವರು ಮುಂದಾಳತ್ವ ವಹಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಶೋಭಾ ರಾಜ್ಯಾಧ್ಯಕ್ಷೆ ಎಂಬುದಕ್ಕೆ ಇದು ಇಂಬು ನೀಡುತ್ತಿದೆ ಎಂದು ಹಲವರು ಹೇಳಿದ್ದಾರೆ. ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಮಹಿಳೆಯೋರ್ವಳು ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿಯಬಹುದು ಎಂಬ ಮಾತುಗಳು ದಟ್ಟವಾಗಿದ್ದು ಇದೆಲ್ಲವೂ ಈ ವದಂತಿಗಳಿಗೆ ಇಂಬು ನೀಡುತ್ತಿವೆ.
ಆದರೆ ಇದೀಗ ಈ ಬೆನ್ನಲ್ಲೇ ಶೋಭಾ ಕರಂದ್ಲಾಜೆ ಅವರು ತಾವು ಅಧ್ಯಕ್ಷ ಸ್ಥಾನ ಅಲಂಕರಿಸುವ ಕುರಿತು ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದು ನಾನು ರಾಷ್ಟ್ರ ರಾಜಕಾರಣದಲ್ಲಿದ್ದೆನೆ. ರಾಜ್ಯ ರಾಜಕಾರಣದ ಸಹವಾಸ ನನಗೆ ಬೇಡ. ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ಉತ್ತಮ ಖಾತೆಯಾದ ಕೃಷಿ ಖಾತೆ ಸಿಕ್ಕಿದೆ. ಅದನ್ನು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಯಾವುದೇ ಕಾರಣಕ್ಕೂ ನಾನು ಇಲ್ಲಿಗೆ ಬರುವ ಆಸಕ್ತಿಯನ್ನು ತೋರಿಲ್ಲ. ಅಲ್ಲದೆ ಯಾವುದೇ ನಾಯಕರಾಗಲಿ ನನ್ನನ್ನು ಸಂಪರ್ಕ ಮಾಡಿ ಈ ಬಗ್ಗೆ ಚರ್ಚಿಸಿಲ್ಲ. ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಅವರ ಈ ಮಾತುಗಳಿಂದ ಹಲವಾರು ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಯಾಕೆಂದರೆ ರಾಜ್ಯದ್ಯಕ್ಷ ಆಯ್ಕೆ ವಿಚಾರಗಳು ಕೆಲವು ಸಮಯಗಳಿಂದ ಚರ್ಚೆಯಾಗದ ನಡುವೆ ಇದೀಗ ರಾಜ್ಯಈ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು ಬಿಜೆಪಿ ನಾಯಕರಲ್ಲಿ ಹೊಸ ಚೈತನ್ಯ ಮೂಡಿತ್ತು. ಆದರೆ ಶೋಭಾ ಈ ರೀತಿ ಹೇಳಿದ್ದು ಮತ್ತೆ ಹಲವರಲ್ಲಿ ಬೇಸರವನ್ನುಂಟುಮಾಡಿದೆ. ಅಲ್ಲದೆ ಶೋಭಾ ಕರಂದ್ಲಾಜೆ ಹೆಸರೊಂದಿಗೆ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡರ ಹೆಸರೂ ಕೇಳಿಬಂದಿತ್ತು. ಆದರೆ ಈಗ ಕೊನೆ ಹಂತದಲ್ಲಿ ಹೈಕಮಾಂಡ್ ಯಾವ ನಿರ್ಧಾರ ಮಾಡುತ್ತದೆ ಅಥವಾ ಶೋಭಾ ಕರಂದ್ಲಾಜೆ ಅವರಿಗೆ ಅಧ್ಯಕ್ಷ ಸ್ಥಾನವನ್ನು ಕೊಡುತ್ತದೆಯೋ ಎಂಬುದಾಗಿ ಕಾದು ನೋಡಬೇಕಿದೆ.