HSRP: ವಾಹನ ಮಾಲಿಕರೇ ಗಮನಿಸಿ, ನಂಬರ್ ಪ್ಲೇಟ್ ಬಗ್ಗೆ ರಾಜ್ಯ ಸರ್ಕಾರದಿಂದ ಬಂತೊಂದು ಮಹತ್ವದ ಸೂಚನೆ !!
Karnataka government notification of high security registration plate HSRP number plate latest news
HSRP: ನಂಬರ್ ಪ್ಲೇಟ್ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆಯೊಂದು ಬಂದಿದೆ. ರಾಜ್ಯ ಸರ್ಕಾರವು ಎಚ್‌ಎಸ್‌ಆರ್‌ಪಿ (HSRP) ಅಳವಡಿಕೆಗೆ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ. ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಜನರನ್ನು ಉತ್ತೇಜಿಸಲು ವ್ಯಾಪಕ ಪ್ರಚಾರವನ್ನು ನೀಡುವ ಸಾಧ್ಯತೆಯಿದೆ ಎಂದು ಹಿರಿಯ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವಂತೆ ಆದೇಶಿಸಲಾಗಿತ್ತು. ಇದನ್ನು ನವೆಂಬರ್ 17ರೊಳಗೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಬೀಳುವುದು ಖಚಿತ ಎನ್ನಲಾಗಿತ್ತು. ಇದೀಗ ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವು ಸಮೀಪಿಸುತ್ತಿದೆ. ಆದರೆ, ಸಾರ್ವಜನಿಕ ಪ್ರತಿಕ್ರಿಯೆ ಅಷ್ಟಾಗಿ ಕಂಡು ಬಂದಿಲ್ಲ. 2 ಕೋಟಿ ಹಳೆಯ ವಾಹನಗಳ ಪೈಕಿ ಕೇವಲ 1.75 ಲಕ್ಷ (ಶೇ. 10ಕ್ಕಿಂತ ಕಡಿಮೆ) ಪ್ಲೇಟ್‌ಗಳನ್ನು ನವೀಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹಿರಿಯ ಸಾರಿಗೆ ಅಧಿಕಾರಿಯೊಬ್ಬರು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭದ್ರತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮತ್ತು ವಾಹನಗಳ ದುರುಪಯೋಗವನ್ನು ತಡೆಯಲು ಹಳೆಯ ವಾಹನಗಳಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಒಮ್ಮೆ ಸರಿಪಡಿಸಿದ ನಂತರ ತೆಗೆದುಹಾಕಲಾಗುವುದಿಲ್ಲ ಎನ್ನಲಾಗಿದೆ.
HSRP ನಂಬರ್ ಪ್ಲೇಟ್ ಶಾಶ್ವತ ಗುರುತಿನ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ ಆಗಿದೆ. ಏಕರೂಪದ ನಂಬರ್ ಪ್ಲೇಟ್ ಇದಾಗಿರುವುದರಿಂದ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗುತ್ತದೆ. ಏಪ್ರಿಲ್ 01 , 2019ಕ್ಕೂ ಮುನ್ನ ಸುಮಾರು ಎರಡು ಕೋಟಿಗಳಷ್ಟು ವಾಹನಗಳು ನೋಂದಣಿಯಾಗಿವೆ. ವಾಹನ ತಯಾರಕರು ಈಗಾಗಲೇ HSRP ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹಳೆ ವಾಹನ ಮಾಲಿಕರು ಅಧಿಕೃತ ಡೀಲರ್ ಗಳೊಂದಿಗೆ ಈ ನಂಬರ್ ಪ್ಲೇಟ್ ಗಳನ್ನು ಆರ್ಡರ್ ಮಾಡಬಹುದಾಗಿದೆ.
ಇದನ್ನೂ ಓದಿ: Bangladesh: ಮತ್ತೊಂದು ಭೀಕರ ರೈಲು ಅಪಘಾತ, ಎರಡು ರೈಲುಗಳ ಡಿಕ್ಕಿ, 20 ಸಾವು, ನೂರಾರು ಗಾಯ !