spiritual: ಹಿಂದೂಗಳು ಕೈಗೆ ಈ ಪವಿತ್ರ ದಾರವನ್ನು ಕಟ್ಟೋದ್ಯಾಕೆ ಗೊತ್ತಾ ?!
Personality: ಕೈಯಲ್ಲಿನ ರೇಖೆ ನೋಡಿ ಭವಿಷ್ಯವನ್ನು ಹಾಗೂ ಮುಂದಿನ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದೋ, ಅದೇ ರೀತಿ ವ್ಯಕ್ತಿಯ ಹೆಬ್ಬರಳಿನ ಆಕಾರ ನೋಡಿ ಆತನ ಭವಿಷ್ಯವನ್ನು ತಿಳಿಯಬಹುದಾಗಿದೆ. ಹೆಬ್ಬೆರಳಿನ ಮೂಲಕ ನಿಮ್ಮ ವ್ಯಕ್ತಿತ್ವ (Personality), ಸಾಮರ್ಥ್ಯಗಳು, ದೌರ್ಬಲ್ಯಗಳು, ಸ್ವಭಾವ ಮತ್ತು ಮನಸ್ಥಿತಿಯನ್ನು ಪತ್ತೆ ಹಚ್ಚಬಹುದು.
ದಪ್ಪ ಹೆಬ್ಬೆರಳು:
ಯಾರ ಹೆಬ್ಬೆರಳು ಅಗಲ ಮತ್ತು ದಪ್ಪವಾಗಿರುತ್ತದೆಯೋ, ಅಂತಹ ಜನರು ತುಂಬಾ ಕೋಪಗೊಳ್ಳುತ್ತಾರೆ. ಇವರು ಕೋಪವನ್ನು ನಿಯಂತ್ರಿಸಬೇಕು. ಈ ಜನರು ಮೇಲಿನಿಂದ ತುಂಬಾ ಕಠಿಣವಾಗಿ ಕಾಣುತ್ತಾರೆ ಆದರೆ, ಅವರು ಒಳಭಾಗದಲ್ಲಿ ಅಷ್ಟೇ ಮೃದುವಾಗಿರುತ್ತಾರೆ.
ನೇರ ಹೆಬ್ಬೆರಳು:
ನಿಮ್ಮ ಹೆಬ್ಬೆರಳು ನೇರವಾಗಿದ್ದರೆ ಮತ್ತು ಅದರ ಮೊದಲ ಗೆಣ್ಣಿನಿಂದ ಹಿಂದಕ್ಕೆ ಬಾಗದಿದ್ದರೆ, ನೀವು ತರ್ಕಬದ್ಧ ಮತ್ತು ತಾರ್ಕಿಕ ವ್ಯಕ್ತಿತ್ವವನ್ನು ಹೊಂದಿರುತ್ತೀರಿ. ನೀವು ಅಧಿಕಾರದ ಆಸೆಯನ್ನು ಹೊಂದಿರುತ್ತೀರಿ. ನಿಮ್ಮ ಸುತ್ತಲಿರುವವರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ನೀವು ಹೊರಗೆ ನೋಡಲು ಒರಟಾಗಿ ಕಾಣುತ್ತೀರಿ. ಆದರೆ ನೀವು ಮೃದು ಸ್ವಭಾವದವರಾಗಿರುತ್ತೀರಿ.
ಬಾಗಿದ ಹೆಬ್ಬೆರಳು:
ಬಾಗಿದ ಹೆಬ್ಬೆರಳು ಹೊಂದಿರುವವರು ಭಾವನಾತ್ಮಕ ಮತ್ತು ಸೂಕ್ಷ್ಮ ವ್ಯಕ್ತಿತ್ವ ಉಳ್ಳವರಾಗಿರುತ್ತೀರಿ. ಕೆಲವೊಮ್ಮೆ ನೀವು ಭಾವನಾತ್ಮಕವಾಗಿ ತೊಂದರೆಗೊಳಗಾಗುತ್ತೀರಿ ಮತ್ತು ತಮ್ಮ ಯೋಗಕ್ಷೇಮಕ್ಕಿಂತ ತಮ್ಮ ಸಂಬಂಧಗಳಿಗೆ ಆದ್ಯತೆ ನೀಡುತ್ತೀರಿ.
ಬಾಗಿದ ಹೆಬ್ಬೆರಳು ಹೊಂದಿರುವವರು ಸೃಜನಶೀಲರಾಗಿದ್ದು, ಹೊಸ ಆಲೋಚನೆಗಳನ್ನು ಮಾಡುತ್ತೀರಿ. ಜೊತೆಗೆ ಕಲೆ, ನಟನೆ, ರಂಗಭೂಮಿ ಮತ್ತು ಸಾಹಸ ಕ್ರೀಡೆಗಳಂತಹ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತೀರಿ.
ಚೌಕಾಕಾರದ ಹೆಬ್ಬೆರಳು:
ಚೌಕಾಕಾರದ ಹೆಬ್ಬೆರಳು ಹೊಂದಿರುವವರು ಯಾವಾಗಲೂ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ವ್ಯಾಪಾರ, ಎಂಜಿನಿಯರಿಂಗ್ ಅಥವಾ ಗಣಿತದಂತಹ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಚೌಕಾಕಾರದ ಹೆಬ್ಬೆರಳು ಹೊಂದಿರುವವರು ಸಾಮಾನ್ಯವಾಗಿ ತಮ್ಮ ಕೆಲಸದಲ್ಲಿ ಉತ್ತಮರಾಗಿರುತ್ತೀರಿ ಮತ್ತು ಇತರರಿಂದ ಗೌರವವನ್ನು ಪಡೆಯುತ್ತೀರಿ. ಸಾಮಾನ್ಯವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತೀರಿ.
ಚಿಕ್ಕ ಹೆಬ್ಬೆರಳು:
ಯಾವ ವ್ಯಕ್ತಿಯು ಸಣ್ಣ ಹೆಬ್ಬೆರಳನ್ನು ಹೊಂದಿರುತ್ತಾರೋ ಅವರು ಧಾರ್ಮಿಕ ಕಾರ್ಯಗಳ ಕೆಲಸದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಹಾಗೂ ಇತರ ವ್ಯಕ್ತಿಯ ಮನಸ್ಸನ್ನು ತಿಳಿದುಕೊಳ್ಳುವ ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ ಇವರು ಸುಲಭವಾಗಿ ಬೇರೆಯವರಿಂದ ಮೋಸಹೋಗುತ್ತಾರೆ ಮತ್ತು ನಂತರ ಅದರ ಬಗ್ಗೆ ಯೋಚಿಸುತ್ತಾರೆ. ಆದರೆ, ಎದುರಿಗಿರುವವರ ಒಳ್ಳೆಯದನ್ನು ತಕ್ಷಣ ಸ್ವೀಕರಿಸುವುದು ಇವರ ವಿಶೇಷತೆ.
ಇದನ್ನು ಓದಿ: Job Search: BEL ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಸಂದರ್ಶನದಲ್ಲಿ ಈ ಕೂಡಲೇ ಭಾಗವಹಿಸಿ, ಸಾವಿರ ಸಾವಿರ ಸಂಬಳ ಎಣಿಸಿ!!!