Gruhalakshmi Scheme: ಎಲ್ಲಾ ದಾಖಲೆ ಸರಿ ಇದ್ರೂ 38 ಸಾವಿರ ಯಜಮಾನಿಯರಿಗಿಲ್ಲ ಗೃಹಲಕ್ಷ್ಮೀ ಹಣ !! ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್
New twist 38 thousand women do not have Grilahakshmi money even though all documents are correct
Gruhalakshmi Scheme: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಅಡಿಯಲ್ಲಿ, ಆದಾಯ ತೆರಿಗೆ ಪಾವತಿಸುವವರು ಹೊರತುಪಡಿಸಿ ಎಲ್ಲ ವರ್ಗದ ಮಹಿಳೆಯರಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಯನ್ನು ಈಗಾಗಲೇ ಯಜಮಾನಿಯರ ಖಾತೆಗೆ ಸರ್ಕಾರವು ಹಣ ಜಮಾ ಮಾಡಿದೆ . ಇನ್ನು ಕೆಲವರ ಖಾತೆಗೆ ಹಣ ಜಮಾ ಪ್ರಕ್ರಿಯೆ ನಡೆಯುತ್ತಿದೆ.
ಆದರೆ ಕೆಲವು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಸದ್ಯ ಗೃಹ ಲಕ್ಷ್ಮೀ ಹಣ ಸಿಗದ ಧಾರವಾಡ ಜಿಲ್ಲೆಯ ಮಹಿಳೆಯರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಎಲ್ಲ ದಾಖಲೆಗಳು ಸರಿ ಇದ್ದರೂ ಅನೇಕ ಮಂದಿಗೆ ಹಣ ಖಾತೆಗೆ ಬೀಳುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ ಆರಂಭದಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ಶೇ 42 ರಷ್ಟು ಮಹಿಳೆಯರಿಗೆ ಮಾತ್ರ ಹಣ ಖಾತೆಗೆ ಜಮಾ ಆಗಿದೆ . ನಂತರ ಎರಡನೇ ತಿಂಗಳು ಕೇವಲ 39 ರಷ್ಟು ಮಹಿಳೆಯರಿಗೆ ಮಾತ್ರ ಹಣ ಜಮಾ ಆಗಿದೆ. ಉಳಿದಂತೆ ತಾಂತ್ರಿಕ ಕಾರಣ, ಬ್ಯಾಂಕ್ ಖಾತೆ ಸಮಸ್ಯೆ, ವಿಳಾಸ ಸಮಸ್ಯೆ, ಬ್ಯಾಂಕ್ ಖಾತೆ ಆಧಾರ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಆಗಿಲ್ಲ. ಇನ್ನು ಎಷ್ಟೋ ಮಹಿಳೆಯರ ಹಣ ಡಿಬಿಟಿ ಅನುಮೋದನೆ ಆಗಿದ್ದರೂ ಅವರ ಖಾತೆಗೆ ಹಣ ಬಂದಿಲ್ಲ. ಹೀಗಾಗಿ ಫಲಾನುಭವಿಗಳು ಅಂದರೆ ಮಹಿಳೆಯರು ಗೊಂದಲದಲ್ಲಿ ಇದ್ದಾರೆ .
ಅಂಕಿಅಂಶಗಳ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 38 ಸಾವಿರ ಜನಕ್ಕೆ ಇದುವರೆಗೂ ಒಂದನೇ ಕಂತಿನ ಹಣವೂ ಕೂಡ ಬಂದಿಲ್ಲ. ಎಲ್ಲ ದಾಖಲೆಗಳು ಸರಿ ಇದ್ದರು ಸಹ, ಈ ಹಿನ್ನೆಲೆಯಲ್ಲಿ ಮಹಿಳೆಯರು ನಿತ್ಯ ಬ್ಯಾಂಕ್‌ಗೆ ಅಲೆದಾಡುತ್ತಿದ್ದಾರೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಸೇರಿದಂತೆ ಎಲ್ಲವೂ ಸರಿ ಇದ್ದರೂ ಅನ್ನಭಾಗ್ಯದ ರೇಷನ್ ಅಕ್ಕಿ ಹಣ ಕೂಡ ಬಂದಿರುವ ಇವರಿಗೆ ಗೃಹಲಕ್ಷ್ಮೀ ಹಣ ಮಾತ್ರ ಇದುವರೆಗೂ ತಲುಪಿಲ್ಲ.
ಒಟ್ಟಿನಲ್ಲಿ ಆಧಾರ್ ಕಾರ್ಡ್ ಜೋಡಣೆ, ಬ್ಯಾಂಕ್ ಮಾಹಿತಿ ಸೇರಿದಂತೆ ವಿವಿಧ ಮಾಹಿತಿ ಸರಿಯಿಲ್ಲದ ಕಾರಣ 1054 ಜನರ ಅರ್ಜಿಗಳು ರದ್ದಾಗಿವೆ. ಉಳಿದಂತೆ ಮಾಹಿತಿ ಸರಿಯಿದ್ದರೂ ಗೃಹಲಕ್ಷ್ಮಿ ಹಣ ಕೈ ಸೇರದ್ದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ: