Gold Dump To Dustbin: ಕಸದ ಬುಟ್ಟಿಯಲ್ಲಿ ಮಾವ ಬಿಚ್ಚಿಟ್ಟ 12 ಲಕ್ಷದ ಚಿನ್ನ- ಕಸದ ಗಾಡಿ ಬರುತ್ತಿದ್ದಂತೆ ಬಿಸಾಕಿ ಬಿಟ್ಟ ಅಳಿಯ !! ಅರೆ ಮುಂದೇನಾಯ್ತು ?!

Madyapradesh news jewellery worth rs 12 lakh goes to tarsh

Gold Dump To Dustbin: ಮಧ್ಯಪ್ರದೇಶ ರೇವಾದಲ್ಲಿ ಅಚ್ಚರಿಯ ಪ್ರಕರಣ ಮುನ್ನಲೆಗೆ ಬಂದಿದ್ದು, ಕಳ್ಳರಿಂದ ಮನೆಯಲ್ಲಿದ್ದ ಚಿನ್ನಾಭರಣ (Gold)ರಕ್ಷಿಸಲು ಮಾವ ಕಸದ ಬುಟ್ಟಿಯಲ್ಲಿ(Dustbin)ಚಿನ್ನವನ್ನು ಬಚ್ಚಿಟ್ಟಿದ್ದು, ಈ ವಿಚಾರ ತಿಳಿಯದ ಮನೆಯ ಸಿಬ್ಬಂದಿಯೊಬ್ಬ ಕಸದ ವಾಹನ ಬಂದಾಗ ಡಸ್ಟ್ಬಿನ್ನಲ್ಲಿಟ್ಟ ಚಿನ್ನಾಭರಣ ಬ್ಯಾಗ್ ಡಂಪ್(Gold Bag Dumped to Dustbin)ಮಾಡಿಬಿಟ್ಟಿದ್ದಾನೆ. ಮುಂದೇನಾಯ್ತು??

ರೇವಾದಲ್ಲಿ ನೆಲೆಸಿದ್ದ ಶಾಂತಿ ಮಿಶ್ರಾ ಅವರ ಕುಟುಂಬ ಭೋಪಾಲ್ಗೆ ಹೊರಡುವ ತರಾತುರಿಯಲ್ಲಿ ಮನೆಗೆ ಕಳ್ಳರು ಬರುವ ಭೀತಿಯಲ್ಲಿ ಮನೆಯಲ್ಲಿದ್ದ ಬರೋಬ್ಬರಿ 12 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಡಸ್ಟ್ ಬಿನ್ ಒಳಗೆ ಬಚ್ಚಿಟ್ಟಿದ್ದಾರೆ. ಶಾಂತಿ ಮಿಶ್ರಾ ಅವರ ಅಳಿಯ ಪ್ರಮೋದ್ ಕುಮಾರ್ ಮನೆಯವರು ಹೊರ ಹೋಗುವಾಗ ಕಸದ ಗಾಡಿ ಬಂದದ್ದನ್ನು ಗಮನಿಸಿ ಕೋಣೆಯೊಂದರಲ್ಲಿದ್ದ ಡಸ್ಟ್ಬಿನ್ ನಲ್ಲಿದ್ದ ಚಿನ್ನವನ್ನು ಕಸವೆಂದು ಭಾವಿಸಿ ಅದನ್ನು ತೆಗೆದುಕೊಂಡು ಹೋಗಿ (Gold Dump To Dustbin)ಗಾಡಿಗೆ ಡಂಪ್ ಮಾಡಿದ್ದು, ಆ ಬಳಿಕ ಪ್ರಮೋದ್ ಕುಮಾರ್ ತಮ್ಮ ಮನೆಗೆ ಹೊರಟಿದ್ದಾರೆ.

ಶಾಂತಿ ಮಿಶ್ರಾ ಕುಟುಂಬ ಮರಳಿ ಬಂದ ಬಳಿಕ ಡಸ್ಟ್ಬಿನ್ ಆಭರಣ ಕಾಣದೆ ಶಾಕ್ ಆಗಿದ್ದು, ಈ ವಿಚಾರ ಪ್ರಮೋದ್ ಕುಮಾರ್ ಅವರಿಗೆ ತಿಳಿದು, ಕಸ ತೆಗೆದುಕೊಂಡು ಹೋಗಲು ಬರುತ್ತಿದ್ದವರ ನಂಬರ್ ಸಂಗ್ರಹಿಸಿ ಕರೆ ಮಾಡಿದ್ದಾರೆ. ಆದರೆ, ಕಸದ ಗಾಡಿ ತುಂಬಾ ದೂರ ಹೋಗಿ, ಕಸದ ದೊಡ್ಡ ಸ್ಥಾವರಕ್ಕೆ ತಲುಪಿದೆ. ಬರೋಬ್ಬರಿ 4 ಜಿಲ್ಲೆಗಳ ಕಸವನ್ನು ತಂದು ಅಲ್ಲಿ ಸುರಿಯಲಾಗುತ್ತಿತ್ತು. ಹೀಗಾಗಿ, ಪ್ರಮೋದ್, ರೇವಾ ಘಟಕದಿಂದ ಬಂದಿದ್ದ ಕಸವನ್ನು ಚೆಕ್ ಮಾಡಿಸಲು ಕಸ ವಿಲೇವಾರಿ ಮ್ಯಾನೇಜ್ಮೆಂಟ್ ಕಂಪನಿಗೆ ಮನವಿ ಮಾಡಿದ್ದು, ತೀವ್ರ ಹುಡುಕಾಟ ನಡೆಸಿದ ಬಳಿಕ ಕಸದೊಳಗೆ ಬಂದಿದ್ದ ಚಿನ್ನಾಭರಣದ ಬ್ಯಾಗ್ ಪತ್ತೆಯಾಗಿದೆ. ಕಸ ವಿಲೇವಾರಿ ಮ್ಯಾನೇಜ್ ಮೆಂಟ್ ಚಿನ್ನಾಭರಣವನ್ನು ಕಳೆದುಕೊಂಡ ಕುಟುಂಬಕ್ಕೆ ಕೊನೆಗೂ ತಲುಪಿಸಿದ್ದಾರೆ.

 

ಇದನ್ನು ಓದಿ: Ration Card Latest Updates: BPL ಕಾರ್ಡ್ ದಾರರಿಗೆ ಶಾಕ್ ಮೇಲೆ ಶಾಕ್ – ರೇಷನ್ ಮಾತ್ರವಲ್ಲ, ಇದಾವುದೂ ನಿಮಗಿನ್ನು ಸಿಗುವುದಿಲ್ಲ

Leave A Reply

Your email address will not be published.