Madhu bangarappa: ಶಿಕ್ಷಕರ ನೇಮಕಾತಿ ಬಗ್ಗೆ ಬಂತು ನೋಡಿ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ಶಿಕ್ಷಕರಾಗೋ ಕನಸು ಹೊತ್ತವರಿಗೆ ಖುಷಿಯೋ ಖುಷಿ

good news about the recruitment of teachers

Madhu bangarappa: ಕೆಲವು ದಿನಗಳ ಹಿಂದಷ್ಟೇ 13,500 ಜಿಪಿಎಸ್‌ಟಿಆರ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಗ್ರೀನ್ ಸಿಗ್ನಲ್ ನೀಡಿದ್ದು ಸಾವಿರಾರು ಅಭ್ಯರ್ಥಿಗಳಿಗೆ ಸಂತಸ ತಂದಿತ್ಯು. ಈ ಬೆನ್ನಲ್ಲೇ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ(Madhu bangarappa) ಅವರು ನೇಮಕಾತಿ ಬಗ್ಗೆ ಮತ್ತೊಂದು ಅಪ್ಡೇಟ್ ನೀಡುವ ಮೂಲಕ ಶಿಕ್ಷಕರಾಗೋ ಕನುಸು ಕಾಣುವ ಅನೇಕ ಮನುಸ್ಸುಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, ಸರ್ಕಾರಿ ಶಾಲೆಗಳಲ್ಲಿ ಭರ್ತಿ ಮಾಡಬೇಕಾದ ಇನ್ನು 53 ಸಾವಿರ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಶಾಲೆಗಳಲ್ಲಿ ಟೀಚರ್‌ಗಳ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಮುಂದಿನ ವರ್ಷದೊಳಗೆ 40, 000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಅಲ್ಲದೆ ಕೆಲ ಸಮಯದಲ್ಲೇ 20,000 ಶಿಕ್ಷಕರ ನೇಮಕ ಮಾಡಿಕೊಳ್ಳುವ ಚಿಂತನೆ ಇದೆ. ಶಿಕ್ಷಕರಿಗೆ ಇನ್ಫೋಸಿಸ್, ವಿಪ್ರೋ, ದೇಶಪಾಂಡೆ ಫೌಂಡೇಶನ್ ಸೇರಿದಂತೆ ಖಾಸಗಿ ಸಂಸ್ಥೆಗಳ ನುರಿತ ತಜ್ಞರಿಂದ ತರಬೇತಿ ಕೊಡಿಸಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಶಾಲೆಗಳ ಅಭಿವೃದ್ಧಿ, ಕೆಪಿಎಸ್ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

ಇದನ್ನು ಓದಿ: ಅಂಚೆ ಕಚೇರಿಯಲ್ಲಿ RD ಕಟ್ಟಬೇಕೆ? ಅರ್ಹತೆ ಏನು, ಸಿಗೋ ಬಡ್ಡಿ ಎಷ್ಟು ?ಇಲ್ಲಿದೆ ನೋಡಿ ಡೀಟೇಲ್ಸ್

Leave A Reply

Your email address will not be published.