Guest Lecturer: ಅತಿಥಿ ಉಪನ್ಯಾಸಕರಿಗೆ ಭರ್ಜರಿ ಗುಡ್ ನ್ಯೂಸ್ – ವೇತನದ ಕುರಿತು ಸರ್ಕಾರದಿಂದ ಬಂತು ಬಿಗ್ ಅಪ್ಡೇಟ್

Guest Lecturer: ರಾಜ್ಯದ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಅತಿಥಿ ಉಪನ್ಯಾಸಕರಿಗೆ (Guest Lecturer) ಸರ್ಕಾರವು ಭರ್ಜರಿ ಗುಡ್ ನ್ಯೂಸ್ ನೀಡಿದ್ದು ವೇತನ ಬಿಡುಗಡೆಯ ಕುರಿತು ಬಿಗ್ ಅಪ್ಡೇಟ್ ಒಂದನ್ನು ಕೊಟ್ಟಿದೆ.

ಹೌದು, 2023-24ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರುಗಳಿಗೆ ರಾಜ್ಯ ಸರ್ಕಾರವು ದಸರಾ ಹಬ್ಬದ ಸಂದರ್ಭದಲ್ಲಿ ದೊಡ್ಡ ಸಂತೋಷದ ಸುದ್ದೆಯನ್ನು ನೀಡಿದ್ದು ಆಗಸ್ಟ್-2023 ಮತ್ತು ಸೆಪ್ಟೆಂಬರ್-2023ರ ಮಾಹೆಗಳಿಗೆ ಗೌರವಧನವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸಂಜೆ ಕಾಲೇಜುಗಳು, ಸಂಸ್ಕೃತ ಕಾಲೇಜುಗಳು ಸೇರಿದಂತೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಜುಲೈ-2023ರ ವರೆಗಿನ ಗೌರವಧನ ಪಾವತಿಸಲು ಬರೋಬ್ಬರಿ 20,46,64,708(ಇಪ್ಪತ್ತು ಕೋಟಿ ನಲವತ್ತಾರು ಲಕ್ಷದ ಅರವತ್ತನಾಲ್ಕು ಸಾವಿರದ ಏಳುನೂರ ಎಂಟು ರೂಪಾಯಿಗಳು ಮಾತ್ರ) ಅನುದಾನವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಬಿಡುಗಡೆ ಮಾಡಿ ಆದೇಶಿಸಲಾಗಿದೆ. ಈ ಮೂಲಕ ಆಯುಧಪೂಜೆಯಂದು ಉತಿಥಿ ಉಪನ್ಯಾಸಕರಿಗೆ ಬಂಪರ್ ಲಾಟ್ರಿ ಹೊಡೆದಿದೆ.

 

ಇದನ್ನು ಓದಿ: Job Search: BEL ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಸಂದರ್ಶನದಲ್ಲಿ ಈ ಕೂಡಲೇ ಭಾಗವಹಿಸಿ, ಸಾವಿರ ಸಾವಿರ ಸಂಬಳ ಎಣಿಸಿ!!!

Leave A Reply

Your email address will not be published.