Devaragudda karnika: ದೇವರಗುಡ್ಡದ ಕಾರ್ಣಿಕ..’ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್’
ದಸರಾ ವೇಳೆ ಭವಿಷ್ಯವಾಣಿಗೆ ಹೆಸರಾದ ಹಾವೇರಿಯ ದೇವರಗುಡ್ಡ ಗೊರವಯ್ಯ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ.
ರಾಜ್ಯದ ಐತಿಹಾಸಿಕ ಶ್ರೀ ಕ್ಷೇತ್ರ ದೇವರಗುಡ್ಡದಲ್ಲಿ ದಸರಾ ಹಬ್ಬದ ವೇಳೆ ನಡೆಯುವ ಕಾರ್ಣಿಕೋತ್ಸವದಲ್ಲಿ ದೈವವಾಣಿ ನುಡಿಯುವ ಗೊರವಪ್ಪ “ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್” ಎಂದು ಕಾರ್ಣಿಕ ನುಡಿದಿದ್ದಾರೆ.
ವಿಜಯದಶಮಿಯ ಆಯುಧ ಪೂಜಾ ದಿನದಂದು ಗೊರವಪ್ಪನವರು ಈ ಕಾರ್ಣಿಕ ನುಡಿದಿದ್ದು, ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದಿದ್ದು, ವರ್ಷದ ಭವಿಷ್ಯ ಎಂದೇ ಜನ ನಂಬುತ್ತಾರೆ.
ಈ ದೈವವಾಣಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದ್ದು, ಕಾರ್ಣಿಕ ನುಡಿಯನ್ನು ರಾಜಕೀಯ, ಕೃಷಿ, ಹಾಗೂ ಆರ್ಥಿಕ ಬೆಳವಣಿಗೆಗೆ ಸಂಬಂಧ ಪಟ್ಟ ವರ್ಷದ ಭವಿಷ್ಯ ಎಂದು ಹೇಳಲಾಗುತ್ತದೆ.
ದೇವರಗುಡ್ಡದ ಪ್ರಧಾನ ಅರ್ಚಕ ಸಂತೋಷ್ ಅವರು ಈ ಕಾರ್ಣಿಕದ ವಿಶ್ಲೇಷಣೆ ಮಾಡಿದ್ದಾರೆ.
ಮಳೆ ಇಲ್ಲದೆ ಭಾರೀ ಕೊರತೆ ಉಂಟಾಗಿದ್ದರಿಂದ ರೈತರಿಗೆ ಭಾರೀ ನಷ್ಟವಾಗುವ ಸಂಭವ ಇದೆ. ಭೂಮಿಗೆಂದು ಹಾಕಿದ ಹಣ ವಾಪಸ್ ಬರುವುದು ಕಷ್ಟ ಎಂದು ಈ ಕಾರ್ಣಿಕದ ನುಡಿ ಎಂದು ವಿಶ್ಲೇಷಣೆ ಮಾಡಲಾಗಿದೆ. ʼಕಲ್ಯಾಣಿ ಕಕ್ಕಿತಲೆʼ ಎಂದರೆ ರಾಜ್ಯದಲ್ಲಿರೋ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ ಇದೆ. ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯದ ರಾಜಕೀಯ ಏರುಪೇರಾಗುವ ಸಾಧ್ಯತೆ ಇದೆ ಎಂದು ಅರ್ಚಕರು ವಿಶ್ಲೇಷಣೆ ಮಾಡಿದ್ದಾರೆ.