Hijab:ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಸರ್ಕಾರದಿಂದಲೇ ಅನುಮತಿ – ಹೆಚ್ಚಿದ ಆಕ್ರೋಶ !!
Education news govt allowed wearing hijab to write exam Hindu organisation warns government
Hijab: ರಾಜ್ಯಾದ್ಯಂತ ಶಾಲೆಗಳಲ್ಲಿ ಹಿಜಾಬ್( Hijab)ಧರಿಸಿ ಶಾಲಾ ಕಾಲೇಜುಗಳಿಗೆ (School and College)ಹೋಗುವ ವಿಚಾರ ದೊಡ್ದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿ, ಎರಡು ಬಣಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿತ್ತು. ಇದೀಗ, ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ರಾಜ್ಯ ಸರ್ಕಾರ(State Government)ಹಿಜಾಬ್ ಧರಿಸಿ ಪರೀಕ್ಷೆ (Exam)ಬರೆಯಲು ಅವಕಾಶ ನೀಡಿರುವುದು ಹಿಂದೂಪರ ಸಂಘಟನೆಗಳು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ, ರಾಜ್ಯದಲ್ಲಿ ಮತ್ತೊಂದು ಧರ್ಮದಂಗಲ್ಗೆ ಹಿಜಾಬ್ ವಿಚಾರ ಕಾರಣವಾಗುವುದೇ ಎಂಬ ಆತಂಕ ಮನೆ ಮಾಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹುದ್ದೆಗಳ ಭರ್ತಿಗೆ ಅ.28,29ರಂದು ನಡೆಯಲಿರುವ ವಿವಿಧ ನಿಗಮ ಮಂಡಳಿಗಳ ಪರೀಕ್ಷೆಗೆ ಕೆಲವು ಷರತ್ತುಗಳನ್ನು ವಿಧಿಸಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿದ್ದು ಹಿಂದೂಪರ ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ. ಕಳೆದ ವರ್ಷ ರಾಜ್ಯಾದ್ಯಂತ ಹಿಜಾಬ್ ಧರಿಸುವ ಕುರಿತು ಕೋಮುಗಲಭೆಯಲ್ಲಿ ಕಲ್ಲು ತೂರಾಟ ನಡೆದು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಈಗ ಮತ್ತೆ ಹಿಜಾಬ್ ಅನುಮತಿ ನೀಡಿದ್ದು ಸರಿಯಲ್ಲ. ರಾಜ್ಯ ಸರ್ಕಾರ ಇದನ್ನು ಕೂಡಲೇ ಹಿಂಪಡೆಯುವಂತೆ ಹಿಂದೂ ಜನಜಾಗೃತಿ ಸಂಘಟನೆ ಆಗ್ರಹ ಮಾಡಿದೆ.ಒಂದು ವೇಳೆ, ಹಿಜಾಬ್ ಧರಿಸಲು ನೀಡಿರುವ ಅನುಮತಿ ಹಿಂಪಡೆಯದಿದ್ದರೆ ಪ್ರತಿಭಟನೆ ಹಾದಿ ಹಿಡಿಯುವುದು ಖಚಿತ ಎಂದು ಹಿಂದೂಪರ ಸಂಘಟನೆಗಳು ಖಡಕ್ ವಾರ್ನಿಂಗ್ ನೀಡಿದೆ.