Chhattisgarh bizzare news: ಯಬ್ಬೋ.. ಎಲ್ಲಿಗೆ ಹೋದ್ರು ಕೈಯಲ್ಲಿ ದೊಣ್ಣೆ ಹಿಡಿದೇ ಓಡಾಡ್ತಾರೆ ಈ ಊರಿನ ಮಹಿಳೆಯರು – ಕಾರಣ ಕೇಳಿದ್ರೆ ನೀವೇ ದಂಗಾಗಿಬಿಡ್ತೀರಾ !!
Chhattisgarh bizzare news this village womens walk around holding sticks in their hands
Chhattisgarh bizzare news: ಛತ್ತೀಸ್‌ಗಢದ ಸಾರಂಗರ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯರು(Ladies)ಯಾವಾಗಲೂ ಕೈಯಲ್ಲಿ ದೊಣ್ಣೆ ಹಿಡಿದುಕೊಂಡೆ ಓಡಾಡುತ್ತಾರಂತೆ(Chhattisgarh bizzare news). ಅಷ್ಟಕ್ಕೂ ಹೀಗೆ ಅಡ್ಡಾಡಲು ಕಾರಣವೇನು ಗೊತ್ತಾ??
ಚುಹಿಪಾಲಿ ಎಂಬ ಹಳ್ಳಿಯಲ್ಲಿ ಪ್ರತಿ ಮಹಿಳೆಯ ಕೈಯ್ಯಲ್ಲೂ ಒಂದು ದೊಣ್ಣೆ ಇರುವುದು ಗ್ಯಾರಂಟೀ!! ಎಲ್ಲಿಗೆ ಹೋಗುವುದಾದರೂ ಈ ಗ್ರಾಮದ(Village)ಮಹಿಳೆಯರು ಕೈಯ್ಯಲ್ಲಿ ಕೋಲು ಹಿಡಿದುಕೊಂಡೇ ಮನೆಯಿಂದ ಹೊರಗೆ ಕಾಲಿಡುತ್ತಾರಂತೆ. ಗ್ರಾಮದಲ್ಲಿ ಯಾರಾದರೂ ಮಾದಕ ದ್ರವ್ಯ ಸೇವನೆ, ಜೂಜು, ಬೆಟ್ಟಿಂಗ್ ಮುಂತಾದ ತಪ್ಪುಗಳನ್ನು ಮಾಡುತ್ತಿದ್ದಾರಾ ಎಂಬುದನ್ನು ತಿಳಿಯಲು ಮಹಿಳಾಮಣಿಗಳು ಹೀಗೆ ಊರು ಸವಾರಿ ಹೋಗುತ್ತಾರಂತೆ.
ಈ ಹಳ್ಳಿಯಲ್ಲಿ ಚಿಕ್ಕ ಮಕ್ಕಳು, ಯುವಕರೆಲ್ಲ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದು, ಇದನ್ನು ತಡೆಯಲು ಚುಹಿಪಲಿ ಗ್ರಾಮದ ಮಹಿಳೆಯರು ಒಂದು ತಂಡವನ್ನು ಕಟ್ಟಿಕೊಂಡು ಜೇವರದಾಯಿ ಮಹಿಳಾ ಸುರಕ್ಷಾ ಸಮಿತಿ ಎಂಬ ಹೆಸರಿನಡಿ ಗ್ರಾಮ ಮತ್ತು ಅವರ ಪಂಚಾಯಿತಿಯಲ್ಲಿ ವ್ಯಸನಮುಕ್ತ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ತಂಡದ ಮಹಿಳೆಯರು ಇಡೀ ಪಂಚಾಯಿತಿಯನ್ನು ಸುತ್ತುತ್ತಾರಂತೆ. ದಿನ ಸಂಜೆ ಗ್ರಾಮದ ಬೀದಿಗಳಲ್ಲಿ ಕುಡಿದು ತಿರುಗಾಡುವವರು, ಜೂಜು ಅಡ್ಡೆಗಳಲ್ಲಿ ಕೂರುವವರನ್ನು ಮಹಿಳೆಯರು ನಡುಬೀದಿಯಲ್ಲಿ ಕೂರಿಸಿ ಶಿಕ್ಷೆ ವಿಧಿಸಿ ಬಳಿಕ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ.ಪೊಲೀಸ್ ಇಲಾಖೆ ಕೂಡ ಈ ಮಹಿಳೆಯರಿಗೆ ಸಾಥ್ ನೀಡಿದ್ದಾರೆ. ಈ ತಂಡದಿಂದ ಪ್ರೇರಿತರಾಗಿ ಇತರ ಗ್ರಾಮಗಳ ಮಹಿಳೆಯರೂ ಕೂಡ ಅಕ್ರಮ ಚಟುವಟಿಕೆಗಳನ್ನು ತಡೆಯಲು ತಂಡ ರಚಿಸುತ್ತಿದ್ದಾರೆ
ಇದನ್ನೂ ಓದಿ: ಈ ರೀತಿಯ ಮೊಬೈಲ್ ಫೋನ್ ಬಳಸೋರಿಗೆ ಬೆಳ್ಳಂಬೆಳಗ್ಗೆಯೇ ಬಂತು ಹೊಸ ರೂಲ್ಸ್ – ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ