Transport Department: ಗುಡ್‌ನ್ಯೂಸ್‌, ಸಾರಿಗೆ ನಿಗಮಗಳಲ್ಲಿ 6800 ಸಿಬ್ಬಂದಿ ನೇಮಕಾತಿ! ಹೆಚ್ಚಿನ ಮಾಹಿತಿ ಇಲ್ಲಿದೆ!

Transport Department: ರಾಜ್ಯ ಸರಕಾರ ಸಾರಿಗೆ ಇಲಾಖೆಯಲ್ಲಿ (Transport Department) ಇರುವ ನಾಲ್ಕು ನಿಗಮಗಳಲ್ಲಿ ಭರ್ಜರಿ 6800 ಸಿಬ್ಬಂದಿ ನೇಮಕಾತಿಗೆ ರಾಜ್ಯ ಸರಕಾರ ಆದೇಶ ನೀಡಿದೆ. 13,669 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಮೊದಲ 6800 ಸಿಬ್ಬಂದಿ ನೇಮಕಾತಿಗೆ ಸರಕಾರ ಅನುಮತಿ ನೀಡಿದೆ.

ಇದರಲ್ಲಿ ಬಿಎಂಟಿಸಿ: ಕಂಡಕ್ಟರ್-2500, ಕೆಎಸ್‌ಆರ್‌ಟಿಸಿ: ಡ್ರೈವರ್ ಕಮ್ ಕಂಡಕ್ಟರ್- 2000, ತಾಂತ್ರಿಕ ಸಿಬ್ಬಂದಿ- 300, ಎನ್‌ಡಬ್ಲ್ಯುಕೆಆರ್‌ಟಿಸಿ: ಡ್ರೈವರ್ ಕಮ್ ಕಂಡಕ್ಟರ್- 2000 ಸೇರಿದೆ.

ಕಳೆದ ಎಂಟು ವರ್ಷಗಳಿಂದ ಖಾಲಿ ಇದ್ದ ಹುದ್ದೆಗಳಿಗೆ ನೇಮಕಾತಿ ಭಾಗ್ಯ ದೊರೆತಿದೆ. 13,000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ನೀಡುವಂತೆ ಸರಕಾರವನ್ನು ಕೋರಲಾಗಿತ್ತು. ಹಾಗಾಗಿ ಮೊದಲ ಹಂತದಲ್ಲಿ 6500 ಚಾಲನಾ ಸಿಬ್ಬಂದಿ ಹಾಗೂ 300 ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಸರಕಾರದಿಂದ ಅನುಮತಿ ದೊರಕಿದೆ.

ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯು ಕೆಕೆಆರ್‌ಟಿಸಿಯಲ್ಲಿ 1619 ಚಾಲನಾ ಸಿಬ್ಬಂದಿ ನೇಮಕಾತಿ ಶುರುವಾಗಿದೆ. ಜನವರಿ 2024ರ ಕೊನೆಯಲ್ಲಿ ಇದರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಕಂಡಕ್ಟರ್‌ಗಳ ನೇಮಕಾತಿಗೆ ಬಂದರೆ ಒಟ್ಟು 300 ಸಿಬ್ಬಂದಿ ನೇಮಕಾತಿಗೆ ಅನುಮತಿ ಇದೆ. ಇದು ಇನ್ನೂ ಪ್ರಕ್ರಿಯೆಯಲ್ಲಿದೆ. ಹಾಗಾಗಿ ಸಾರಿಗೆ ನಿಗಮದಲ್ಲಿ ಚಾಲನಾ ಮತ್ತು ತಾಂತ್ರಿಕ ವಿಭಾಗದಲ್ಲಿ 8719 ಸಿಬ್ಬಂದಿಗಳ ನೇಮಕಾತಿಗೆ ಮರುಜೀವ ನೀಡಲಾಗಿದೆ.

 

Leave A Reply

Your email address will not be published.