Google Pay: ನಿಮ್ಮ ಬ್ಯಾಂಕ್ ಅಕೌಂಟ್ ಜೀರೋ ಆಗಿದ್ರೂ ಗೂಗಲ್ ಪೇನಲ್ಲಿ 15,000 ದಷ್ಟು ಪೇ ಮಾಡ್ಬೋದು !!
Google pay: ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಭಾರತದ ಎಲ್ಲೆಡೆ ಸ್ಮಾರ್ಟ್ ಫೋನ್ ನಲ್ಲಿಯೇ UPI ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇದು ಬ್ಯಾಂಕ್ (bank) ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. UPI ಪಾವತಿಯು ಅತ್ಯಂತ ಸರಳವಾದ ವಿಧಾನವಾಗಿದ್ದರಿಂದ ಭಾರತದ (India) ಎಲ್ಲ ವ್ಯಾಪಾರಿಗಳು, ಜನರು ಡಿಜಿಟಲ್ ಪಾವತಿಯನ್ನು ಬಳಸುತ್ತಿದ್ದಾರೆ. ಸದ್ಯ ನಿಮ್ಮ ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಜೀರೋ ಆಗಿದ್ರೂ ಗೂಗಲ್ ಪೇನಲ್ಲಿ 15,000 ದಷ್ಟು ಪೇ ಮಾಡ್ಬೋದು !!
ಹೌದು, ಯುಪಿಐ (UPI) ಮೂಲಕ ನಿಮ್ಮ ಖಾತೆಯಲ್ಲಿ ಒಂದು ರೂಪಾಯಿ ಇಲ್ಲದೆ ಇದ್ದರೂ 15 ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು. DMI finance ಜೊತೆಗೆ ಕೈಜೋಡಿಸಿರುವ ಗೂಗಲ್ ಪೇ ಈಗ ತನ್ನ ಗ್ರಾಹಕರಿಗೆ ಹಣಕಾಸು ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಸದ್ಯ ಫ್ಯಾಚೆಟ್ ಸಾಲವನ್ನು (sachet loan) ಗೂಗಲ್ ಪೇ (Google pay) ನೀಡುತ್ತಿದೆ. ಹದಿನೈದು ಸಾವಿರ ರೂಪಾಯಿಗಳ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಕೇವಲ 111 ರೂಪಾಯಿಗಳ EMI ಕಟ್ಟಬೇಕು.
ಗೂಗಲ್ ಪೇ ಭಾರತದ ಇತರ ಹಲವು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯೊಂದಿಗೆ ಕೈಜೋಡಿಸಿದ್ದು ಸುಲಭವಾಗಿ ಸಾಲ ಸೌಲಭ್ಯ ನೀಡುವ ಪರಿಪಾಠ ಆರಂಭಿಸಿದೆ. ಸಣ್ಣ ವ್ಯಾಪಾರಿಗಳು ಈ ಸಾಲ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲವನ್ನು ನೀಡಲು ಗೂಗಲ್ ಪೇ ಆಕ್ಸಿಸ್ ಬ್ಯಾಂಕ್ (Axis Bank) ನ ಜೊತೆಗೂ ಕೈಜೋಡಿಸಿದೆ. ಹಾಗಾಗಿ ಆಕ್ಸೆಸ್ ಬ್ಯಾಂಕ್ ನ ಗ್ರಾಹಕರು ಕೂಡ ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ: Google Pay: ನಿಮ್ಮ ಬ್ಯಾಂಕ್ ಅಕೌಂಟ್ ಜೀರೋ ಆಗಿದ್ರೂ ಗೂಗಲ್ ಪೇನಲ್ಲಿ 15,000 ದಷ್ಟು ಪೇ ಮಾಡ್ಬೋದು !!