Yogurt : ದಿನ ನಿತ್ಯವೂ ಮೊಸರು ತಿನ್ನುತ್ತೀರಾ ?! ಇದು ಆರೋಗ್ಯಕ್ಕೆ ಒಳಿತಾ, ಏನ್ ಹೇಳುತ್ತೆ ಸೈನ್ಸ್ ?!
Yogurt: ಮೊಸರು (Yogurt) ಹೊಟ್ಟೆಯನ್ನು ತಂಪಾಗಿಸುವ ಆಹಾರಗಳಲ್ಲಿ ಒಂದಾಗಿದೆ. ಇದು ದೇಹವನ್ನು ತಂಪಾಗಿಸುತ್ತದೆ. ಬೇಸಿಗೆ ಕಾಲದಲ್ಲಿ ಇದಕ್ಕಿಂತ ಸೂಕ್ತವಾದುದು ಬೇರೊಂದಿಲ್ಲ. ಸಾಕಷ್ಟು ಮಂದಿಯಲ್ಲಿ ಕಾಣಿಸುವ ಆಮ್ಲೀಯತೆ ಮತ್ತು ಹೊಟ್ಟೆಯ ಉರಿಯುವಿಕೆಯನ್ನು ಮೊಸರು ಕಡಿಮೆ ಮಾಡುತ್ತದೆ.
ಮೊಸರನ್ನು ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಸೇವಿಸಬಹುದಾದ ಆಹಾರವಾಗಿದೆ. ಇದರಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ಐರನ್, ಬಿ ವಿಟಮಿನ್ (ಪ್ರೋಟೀನ್, ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ಐರನ್, ಬಿ ವಿಟಮಿನ್) ಹೇರಳವಾಗಿದೆ. ಆದರೆ, ದಿನ ನಿತ್ಯವೂ ಮೊಸರು ತಿನ್ನಬಹುದಾ?! ಇದು ಆರೋಗ್ಯಕ್ಕೆ ಒಳಿತಾ, ಏನ್ ಹೇಳುತ್ತೆ ಸೈನ್ಸ್ ?!
ಇಲ್ಲಿದೆ ಮಾಹಿತಿ!!!!.
ತಜ್ಞರ ಪ್ರಕಾರ, ನಿಮ್ಮ ಆರೋಗ್ಯವು ಸಾಮಾನ್ಯವಾಗಿರುವವರೆಗೆ ಮತ್ತು ನೀವು ಸೀಮಿತ ಪ್ರಮಾಣದ ಮೊಸರು ತಿನ್ನುತ್ತಿದ್ದರೆ, ಅದು ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಆದಾಗ್ಯೂ, ವೈದ್ಯರು ರಾತ್ರಿಯಲ್ಲಿ ಮತ್ತು ಕೆಮ್ಮು (cough) ಇದ್ದಾಗ ಅದನ್ನು ತಿನ್ನಬಾರದು ಎನ್ನುತ್ತಾರೆ. ಪ್ರತಿದಿನ ಮೊಸರು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
100 ಗ್ರಾಂ ಮೊಸರು 11.1 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಪ್ರತಿಯೊಂದು ಜೀವಕೋಶವು ಬೆಳೆಯಲು ಅಮೈನೋ ಆಮ್ಲಗಳು ಬೇಕಾಗುತ್ತವೆ, ಅವು ಪ್ರೋಟೀನ್ ಗಳನ್ನು ಪೂರೈಸುತ್ತವೆ. ನಿಮ್ಮ ಸ್ನಾಯುಗಳು, ಚರ್ಮ, ಕೂದಲು, ಉಗುರುಗಳು ಇತ್ಯಾದಿಗಳು ಪ್ರೋಟೀನ್ ನಿಂದ ಮಾಡಲ್ಪಟ್ಟಿವೆ. ಹಾಗಾಗಿ, ಪ್ರತಿದಿನ ಪ್ರೋಟೀನ್ ತೆಗೆದುಕೊಳ್ಳುವುದು ಮುಖ್ಯ.
ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಾಸ್ತವವಾಗಿ, ಮೊಸರು ಪ್ರೋಬಯಾಟಿಕ್ ಆಗಿದ್ದು, ಬ್ಯಾಕ್ಟೀರಿಯಾಗಳು ಕರುಳಿನ ಚಟುವಟಿಕೆಯನ್ನು ಸುಧಾರಿಸಲು ಮತ್ತು ಉರಿಯೂತದ ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಮೊಸರು ಹೊಟ್ಟೆಯ ಅಸ್ವಸ್ಥತೆಗೆ ಬಹಳ ಉತ್ತಮವಾಗಿದೆ.
ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ.