Ants Problems: ಇರುವೆ ಕಾಟದಿಂದ ರೋಸಿ ಹೋಗಿದ್ದೀರಾ ?! ಇಲ್ಲಿದೆ ನೋಡಿ ನಿಯಂತ್ರಿಸೋ ಸುಲಭ ಉಪಾಯ

Lifestyle kitchen hacks here are some home remedies to get rid from ant problem

Ants Problems: ಆಹಾರ ಪದಾರ್ಥಗಳನ್ನು ಹಾಳು ಮಾಡುವಲ್ಲಿ ಇರುವೆಗಳು ಎತ್ತಿದ ಕೈ. ಹಾಲು, ಮೊಸರು, ಸಕ್ಕರೆ, ಸಿಹಿತಿಂಡಿ, ಇತರೆ ಸಾಂಬಾರು ಪದಾರ್ಥ ಗಳಿಗೆ ಮುತ್ತಿಕೊಂಡ ಇರುವೆಯನ್ನು ಓಡಿಸುವುದು ದೊಡ್ಡ ಸಮಸ್ಯೆ ಎಂದು ನೀವು ಅಂದುಕೊಂಡರೆ ನಿಮ್ಮ ಕಲ್ಪನೆ ತಪ್ಪು. ಹೌದು, ಅಂತಹವರಿಗಾಗಿ ಇರುವೆಗಳ ಸಮಸ್ಯೆಯಿಂದ (Ants Problems)ಪಾರಾಗಲು ಕೆಲವು ಸುಲಭ ಟಿಪ್ಸ್ ನೀಡಲಾಗಿದೆ.

ಸಾಮಾನ್ಯವಾಗಿ ಮನೆಯಲ್ಲಿ ಇರುವೆಗಳ ಕಾಟ ತಾಳಲಾರದೆ ವಿಷಕಾರಿ ರಾಸಾಯನಿಕಗಳನ್ನು ಬಳಸಿ ಕೊಲ್ಲಲು ನೋಡುತ್ತಾರೆ. ಆದರೆ ಇದರಿಂದ ಆರೋಗ್ಯಕ್ಕೆ ಇನ್ನಷ್ಟು ಹಾನಿಯಾಗಬಹುದು. ಆದ್ದರಿಂದ ಮನೆಯಲ್ಲೇ ಸಿಗುವ ಸಾಮಾನ್ಯ ವಸ್ತುಗಳ ಮೂಲಕ ಇರುವೆಗಳನ್ನು ನಾಶ ಮಾಡಬಹುದು.

ಸುಣ್ಣದ ಪುಡಿ:
ಇರುವೆಗಳ ಪ್ರವೇಶ ದ್ವಾರಗಳಲ್ಲಿ ಸ್ವಲ್ಪ ಸುಣ್ಣದ ಪುಡಿಯನ್ನು ಸಿಂಪಡಿಸಿ ಎಳೆಯಿರಿ. ಸುಣ್ಣ, ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಹೊಂದಿರುತ್ತದೆ. ಇದು ಇರುವೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ಅರಶಿಣ ಕುಂಕುಮ:
ಇರುವೆಗಳನ್ನು ಹೋಗಲಾಡಿಸಲು ಅರಿಶಿನ ಕುಂಕುಮ ಬೆಸ್ಟ್ . ಹೌದು, ಇರುವೆಗಳಿಂದ ತುಂಬಿದ ಜಾಗದಲ್ಲಿ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಬೇಕು.

ಬೇವಿನ ಎಣ್ಣೆ:
ಬೇವಿನ ಬೀಜಗಳಿಂದ ತಯಾರಿಸಿದ ಬೇವಿನ ಎಣ್ಣೆ ಇದನ್ನು ಮನೆಯಲ್ಲಿ ಮಾತ್ರವಲ್ಲದೆ ಸಸ್ಯಗಳಿಗೆ ಸಿಂಪಡಿಸಲು ಸಹ ಬಳಸಲಾಗುತ್ತದೆ. ಈ ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ ಇರುವೆಗಳು ಕಡಿಮೆಯಾಗುತ್ತವೆ.

ಮೆಣಸಿನ ಪುಡಿ:
ಕಾಳುಮೆಣಸಿನ ಪುಡಿ ಮತ್ತು ಕೆಂಪು ಮೆಣಸಿನಕಾಯಿಗಳೆರಡೂ ಬಲವಾದ ಘಾಟನ್ನು ಹೊಂದಿರುತ್ತವೆ. ಇರುವೆ ಬರುವ ಜಾಗದಲ್ಲಿ ಸ್ವಲ್ಪ ಮೆಣಸಿನ ಪುಡಿಯನ್ನು ಸಿಂಪಡಿಸಿ. ಆಗ ಇರುವೆ ಮತ್ತೆ ನಿಮ್ಮ ಅಡುಗೆಮನೆಯಲ್ಲಿ ಸುಳಿಯುವುದಿಲ್ಲ. ಇದನ್ನು ಅಡುಗೆಮನೆಯ ಮೂಲೆಯಲ್ಲೂ ಸಿಂಪಡಿಸಬಹುದು.

ಪುದಿನ:
ಪುದಿನ ಒಂದು ರೀತಿ ಘಾಟು ಪರಿಮಳವನ್ನು ಹೊಂದಿದೆ. ಇದನ್ನು ನಿಮ್ಮ ಬಾಲ್ಕನಿಯಲ್ಲಿ, ಮನೆಯ ಸಮೀಪದಲ್ಲಿ ಬೆಳೆಸುವುದರಿಂದ ಇರುವೆ, ಸೊಳ್ಳೆ, ಕ್ರಿಮಿಕೀಟಗಳು ಬರುವುದು ನಿಲ್ಲುತ್ತದೆ.

ನಿಂಬೆ ಯೂಕಲಿಪ್ಟಸ್ ಎಣ್ಣೆ:
ಲೆಮನ್ ಯೂಕಲಿಪ್ಟಸ್ ಎಂಬ ಮರವಿದೆ. ಇದು ನೀಲಗಿರಿಗಿಂತ ಬಹಳ ಭಿನ್ನವಾಗಿರುತ್ತದೆ. ಇದರಿಂದ ತೆಗೆದ ಎಣ್ಣೆ ಇರುವೆಗಳ ಕಾಟ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಹತ್ತಿ ಉಂಡೆಯನ್ನು ಈ ಎಣ್ಣೆಯಲ್ಲಿ ಅದ್ದಿ. ನಂತರ ಇದನ್ನು ಮನೆ ಮೂಲೆ ಮೂಲೆಗಳಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಇರುವೆಗಳು ಸಹಜವಾಗಿಯೇ ಕಡಿಮೆಯಾಗುತ್ತವೆ.

ಉಪ್ಪು ನೀರು :
ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ ಹೆಚ್ಚಿನ ಪ್ರಮಾಣದ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಉಪ್ಪಿನ ದ್ರಾವಣ ತಯಾರಿಸಿಕೊಂಡು ಸ್ಪ್ರೇ ಬಾಟಲ್‌ಗೆ ತುಂಬಿ ಅದನ್ನು ನಿಮ್ಮ ಮನೆಯಲ್ಲಿರುವ ಇರುವೆ ಬರುವಲ್ಲಿ ಸ್ಪ್ರೇ ಮಾಡಬಹುದು.

ಇದನ್ನೂ ಓದಿ: ಯುವಕರೇ, ಹೃದಯಾಘಾತದ ಬಗ್ಗೆ ಆತಂಕ ಬೇಡ, ತಡೆಗಟ್ಟಲು ಇಂದಿನಿಂದಲೇ ಈ 4 ಅಭ್ಯಾಸಗಳನ್ನು ಶುರುಮಾಡಿ

Leave A Reply

Your email address will not be published.