Home latest Anna bhagya: ಅನ್ನಭಾಗ್ಯದ ಫಲಾನುಭವಿಗಳೇ ಎಚ್ಚರ !! ಈ ಕೆಲಸ ಮಾಡೇ ಇಲ್ಲ ಅಂದ್ರೆ ಯಾವತ್ತೂ...

Anna bhagya: ಅನ್ನಭಾಗ್ಯದ ಫಲಾನುಭವಿಗಳೇ ಎಚ್ಚರ !! ಈ ಕೆಲಸ ಮಾಡೇ ಇಲ್ಲ ಅಂದ್ರೆ ಯಾವತ್ತೂ ಅಕ್ಕಿ ದುಡ್ಡು ಬರೋದಿಲ್ಲ

Anna bhagya

Hindu neighbor gifts plot of land

Hindu neighbour gifts land to Muslim journalist

Anna bhagya: ಸರ್ಕಾರ ಜನತೆಗೆ ಅನ್ನಭಾಗ್ಯ (Anna bhagya) ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಬಡ ಜನರಿಗೆ ಸಹಾಯ ಆಗಲೆಂದೇ ಸರ್ಕಾರ ಈ ಯೋಜನೆ ಜಾರಿಗೊಳಿಸಿದ್ದು, ಇದೀಗ ಅನ್ನಭಾಗ್ಯದ ಫಲಾನುಭವಿಗಳಿಗೆ ಮಹತ್ವದ ಸುದ್ದಿ ಇಲ್ಲಿದೆ. ಅನ್ನಭಾಗ್ಯದ ಫಲಾನುಭವಿಗಳೇ ಎಚ್ಚರ. ಈ ಕೆಲಸ ಮಾಡೇ ಇಲ್ಲ ಅಂದ್ರೆ ಯಾವತ್ತೂ ಅಕ್ಕಿ ದುಡ್ಡು ಬರೋದಿಲ್ಲ !

ಅನ್ನಭಾಗ್ಯ ಯೋಜನೆಯಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಕುಟುಂಬಗಳ (ಬಿಪಿಎಲ್) ಪಡಿತರ ಚೀಟಿ ಹೊಂದಿರುವ ಅರ್ಹರ ಖಾತೆಗೆ ನಗದು ನೇರವಾಗಿ ಜಮೆ ಆಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಇಂದಿಗೂ ಸುಮಾರು 18 ಸಾವಿರ ಅನ್ನಭಾಗ್ಯ ಫಲಾನುಭವಿ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿಲ್ಲ. ಖಾತೆ ಹೊಂದಿದ್ದರೂ ಆಧಾರ್ ಜೋಡಣೆ ಆಗಿಲ್ಲ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೆ ಇರುವುದು ಸೇರಿದಂತೆ ತಾಂತ್ರಿಕ ಕಾರಣಗಳಿಂದ ಅನ್ನಭಾಗ್ಯದ ಹಣ ತಲುಪಿಲ್ಲ ಎನ್ನಲಾಗಿದೆ.

ಫಲಾನುಭವಿಗಳಿಗೆ ಅನ್ನಭಾಗ್ಯದ ಹಣವನ್ನು ಡಿಬಿಟಿ ಮಾಡಲು ಆರಂಭಿಸಿದಾಗ 33 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರ ಕುಟುಂಬಗಳು ಇ–ಕೆವೈಸಿ ಮಾಡಿಸಿರಲಿಲ್ಲ. ಇದರಿಂದ ಇವರ ಖಾತೆಗಳಿಗೆ ಹಣ ಜಮೆ ಆಗಿರಲಿಲ್ಲ. ಸದ್ಯ ಜುಲೈನಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾದ 33 ಸಾವಿರ ಪಡಿತರ ಚೀಟಿದಾರರಿಗೆ ಡಿಬಿಟಿ ಸಾಧ್ಯವಾಗಿರಲಿಲ್ಲ. ಈಗ 18 ಸಾವಿರ ಇದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂದಹಾಗೆ, ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲಿಯೂ ಖಾತೆ ಆರಂಭಿಸಬಹುದು. ಆ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಹಣ ಡಿಬಿಟಿ ಆಗುತ್ತದೆ. ಸುಮಾರು ಜನರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನೀವು ಕೂಡ ಇದೇ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಸಮಸ್ಯೆ ಪರಿಹರಿಸಿ!!!.

ಇದನ್ನೂ ಓದಿ: Raj Kundra : ರಾಜ್ ಕುಂದ್ರಾ ‘ಬ್ರೇಕಪ್’ ಹೇಳಿದ್ದು ಶಿಲ್ಪಾ ಶೆಟ್ಟಿಗೆ ಅಲ್ಲಂತೆ !! ಮತ್ಯಾರಿಗೆ ?.. ಇಲ್ಲಿದೆ ಅಚ್ಚರಿ ಫ್ಯಾಕ್ಟ್